ಉದ್ದವಾದ ಉಗುರುಗಳನ್ನು ಜೋಪಾನವಾಗಿರಿಸಬೇಕೆ? ಈ ಸಲಹೆಗಳನ್ನು ಗಮನಿಸಿ
ಉಗುರು ಆಗಾಗ ಮುರಿಯುತ್ತದೆ ಎಂದಾದರೆ ಕಾರಣವೇನು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ?
ಸಾಮಾನ್ಯವಾಗಿ ಕೈಗಳು ಅಥವಾ ಕಾಲ್ಬೆರಳುಗಳ ಉಗುರುಗಳನ್ನು ಉದ್ದವಾಗಿ ಬಿಡುವುದು ಸ್ಟೈಲ್ ಆಗಿ ಬಿಟ್ಟಿದೆ. ಅದರಲ್ಲಿಯೂ ಮಹಿಳೆಯರು ಅಥವಾ ಯುವತಿಯರು ಕೈಬೆರಳುಗಳ ಉಗುರುಗಳನ್ನು (Nail Care) ಉದ್ದವಾಗಿ ಬಿಡುತ್ತಾರೆ. ಉಗುರುಗಳಿಗೆ ಶೇಪ್ ಕೊಟ್ಟು ಬಣ್ಣ ಬಣ್ಣದ ಕಲರ್ ಹಚ್ಚುವ ಟ್ರೆಂಟ್ ಕೂಡಾ ಇದೆ. ಆದರೆ ಕೆಲವರ ಉಗುರುಗಳು ಗಟ್ಟಿಯಾಗಿರುವುದಿಲ್ಲ. ಸ್ವಲ್ಪ ಉಗುರು ಬಿಡುವಷ್ಟರಲ್ಲಿಯೇ ಮುರುದಿ ಹೋಗುತ್ತವೆ ಎಂಬುದು ಕೆಲವರ ಚಿಂತೆ! ಹಾಗಿರುವಾಗ ನಿಮಗಾಗಿಯೇ ಕೆಲವೊಂದಿಷ್ಟು ಟಿಪ್ಸ್ಗಳು ಇಲ್ಲಿವೆ. ಈ ಕೆಲವು ವಿಷಯಗಳನ್ನು ಪಾಲಿಸುವ ಮೂಲಕ ನಿಮ್ಮ ಉಗುರುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬಹುದು.
ಉಗುರು ಆಗಾಗ ಮುರಿಯುತ್ತದೆ ಎಂದಾದರೆ ಕಾರಣವೇನು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಹಾರ್ಮೋನ್ಗಳ ಕಾರಣದಿಂದ ಅಥವಾ ಪೌಷ್ಟಿಕಾಂಶದ ಕೊರತೆಯಿಂದ ಉಗುರುಗಳು ಒಡೆಯುತ್ತವೆ. ಉಗುರುಗಳು ಮೃದುವಾಗಿರುವುದರಿಂದ ನೀರಿನಲ್ಲಿ ಹೆಚ್ಚು ದುರ್ಬಲಗೊಳ್ಳುತ್ತದೆ. ಇದರಿಂದ ಉಗುರು ಒಡೆಯುವ ಅಥವಾ ಮುರಿದು ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಪಾತ್ರೆ ತೊಳೆಯುವಾಗ ಅಥವಾ ಬಟ್ಟೆ ಒಗೆಯುವಾಗ ಉಗುರು ಮುರಿಯುವುದು ಹೆಚ್ಚು.
ಸಾಕಷ್ಟು ನೀರು ಕುಡಿಯಿರಿ ದೇಹದಲ್ಲಿನ ನೀರಿನ ಕೊರತೆಯಿಂದ ಉಗುರುಗಳು ದುರ್ಬಲಗೊಳ್ಳುತ್ತವೆ. ಸದೃಢವಾಗಿರುವ ಉಗುರುಗಳಿಗಾಗಿ ದೇಹಕ್ಕೆ ಸಾಕಷ್ಟು ನೀರಿನ ಪ್ರಮಾಣ ಬೇಕು. ಹಾಗಿರುವಾಗ ಪ್ರತಿನಿತ್ಯ ದೇಹಕ್ಕೆ ಸಾಕಷ್ಟು ನೀರು ಸೇವನೆಯ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಉಗುರುಗಳನ್ನು ತುಂಬಾ ಉದ್ದವಾಗಿ ಬೆಳೆಯಲು ಬಿಡಬೇಡಿ. ಉಗುರು ಬೆಳೆದಿರಲಿ ಆದರೆ ಚಿಕ್ಕದ್ದಾಗಿರಲಿ. ಹಾಗಿರುವಾಗ ಉಗುರುಗಳನ್ನು ಕಾಪಡಿಕೊಳ್ಳುವುದೂ ಸುಲಭ ಜತೆಗೆ ಉಗುರು ಸುಂದರವಾಗಿ ಕಾಣಿಸುತ್ತದೆ.
ಕೃತಕ ಉಗುರುಗಳ ಜೋಡಣೆಯನ್ನು ತಪ್ಪಿಸಿ ಜೆಲ್ ಹಚ್ಚುವುದು ಅಥವಾ ಕೃತಕ ಉಗುರುಗಳನ್ನು ಜೋಡಿಕೊಳ್ಳುವ ಅಭ್ಯಾಸವನ್ನು ತಪ್ಪಿಸಿಕೊಳ್ಳಿ. ನೋಡಲು ಸುಂದರವಾಗಿ ಕಾಣಿಸಿದರೂ ಸಹ ನಿಮ್ಮ ಉಗುರುಗಳನ್ನು ಹೆಚ್ಚು ದುರ್ಬಲಗೊಳಿಸುತ್ತವೆ. ಕೃತಕ ಉಗುರುಗಳನ್ನು ಬಳಸುವುದು ಮತ್ತು ಉಗುರುಗಳಿಗೆ ಜೆಲ್ ಹಚ್ಚುವುದರಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಮತ್ತು ಇದರಿಂದಾಗಿ ಬಹು ಬೇಗ ಉಗುರುಗಳು ಮುರಿಯುತ್ತವೆ.
ಉಗುರುಗಳನ್ನು ತೇವವಾಗಿರಿಸಿ ಪದೇ ಪದೇ ನೀರಿನಲ್ಲಿ ಉಗುರುಗಳನ್ನು ನೆನೆಸುವುದು, ಹ್ಯಾಂಡ್ ಕ್ರೀಮ್ಗಳನ್ನು ಹೆಚ್ಚು ಬಳಸುವುದರಿಂದ ಉಗುರು ದುರ್ಬಲಗೊಳ್ಳುತ್ತದೆ. ಕೈಗಳನ್ನು ತೊಳೆದ ತಕ್ಷಣ ಒದ್ದೆ ಕೈಗಳಲ್ಲಿ ಇರುವುದನ್ನು ತಪ್ಪಿಸಿ. ತಕ್ಷಣವೇ ಕೈಗಳನ್ನು ಬಟ್ಟೆಯಿಂದ ಒರೆಸಿಕೊಳ್ಳುವ ಅಭ್ಯಾಸ ಮಾಡಿ. ಇದರಿಂದ ಉಗುರುಗಳು ಸದೃಢವಾಗಿರುತ್ತವೆ.
ಇದನ್ನೂ ಓದಿ: