AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗುರುಗಳ ಮೇಲೆ ಮೂಡುವ ಬಿಳಿಯ ಅರ್ಧ ಚಂದ್ರಾಕೃತಿಯಿಂದ ನಿಮ್ಮ ಆರೋಗ್ಯ ತಿಳಿಯಬಹುದು.. ಹೇಗೆ ಎಂಬುವುದನ್ನು ಇಲ್ಲಿ ತಿಳಿಯಿರಿ

ಮೊದಲನೆಯದಾಗಿ, ನಿಮ್ಮ ಕೈಯ ಉಗುರುಗಳನ್ನು ಪರಿಶೀಲಿಸಿ ಮತ್ತು ಉಗುರುಗಳಲ್ಲಿ ಬಿಳಿಯ ಅರ್ಧ ಚಂದ್ರ ಆಕೃತಿ ಮೂಡಿದೆಯೇ ಪರಿಶೀಲಿಸಿ. ಉಗುರಿನಲ್ಲಿ ಮೂಡಿದ ಈ ಅರ್ಧ ಚಂದ್ರಾಕೃತಿ ನಮ್ಮ ಆರೋಗ್ಯದ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತದೆ.

ಉಗುರುಗಳ ಮೇಲೆ ಮೂಡುವ ಬಿಳಿಯ ಅರ್ಧ ಚಂದ್ರಾಕೃತಿಯಿಂದ ನಿಮ್ಮ ಆರೋಗ್ಯ ತಿಳಿಯಬಹುದು.. ಹೇಗೆ ಎಂಬುವುದನ್ನು ಇಲ್ಲಿ ತಿಳಿಯಿರಿ
ಬಿಳಿಯ ಅರ್ಧ ಚಂದ್ರಾಕೃತಿಯಿಂದ ನಿಮ್ಮ ಆರೋಗ್ಯ ತಿಳಿಯಬಹುದು
Follow us
ಆಯೇಷಾ ಬಾನು
|

Updated on: May 31, 2021 | 10:13 AM

ನೀವು ಗಮನಿಸಿರಬಹುದು ಕೆಲವೊಮ್ಮೆ ವೈದ್ಯರು ನಮ್ಮನ್ನು ಪರೀಕ್ಷೆಗೆ ಒಳಪಡಿಸದೆಯೇ ನಮ್ಮ ದೇಹವನ್ನು ಹೊರಗಿನಿಂದ ನೋಡುತ್ತಲೇ ನಮ್ಮಲ್ಲಿರುವ ಅನೇಕ ಸಮಸ್ಯೆಗಳ ಬಗ್ಗೆ ಹೇಳುತ್ತಾರೆ. ಈ ರೀತಿ ಹೇಳಿದಾಗ ನಮಗೆ ಆಶ್ಚರ್ಯವಾಗುತ್ತೆ. ನಮ್ಮ ಸಮಸ್ಯೆ ನಮಗೆ ಗೊತ್ತು. ಆದ್ರೆ ನಮ್ಮನ್ನು ಟೆಸ್ಟ್ ಮಾಡದೆಯೇ ವೈದ್ಯರಿಗೆ ಹೇಗೆ ತಿಳಿತು. ತುಂಬ ಸರ್ವಿಸ್ ಇರೋ ಡಾಕ್ಟರ್ ಇರಬೇಕು ಎನ್ನಿಸುತ್ತದೆ. ಆದ್ರೆ ವಾಸ್ತವವಾಗಿ, ನಮ್ಮ ದೇಹವು ನಮಗೆ ಯಾವುದೇ ರೀತಿಯ ಸಮಸ್ಯೆ ಅಥವಾ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಈ ಕಾರಣದಿಂದಾಗಿ, ನಮ್ಮ ದೇಹದಲ್ಲಿ ವಿವಿಧ ರೀತಿಯ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳನ್ನು ನೋಡಿ, ವೈದ್ಯರು ನಮ್ಮ ಅನೇಕ ಸಮಸ್ಯೆಗಳನ್ನು ಟೆಸ್ಟ್ ಮಾಡದೆಯೇ ಕಂಡುಹಿಡಿಯುತ್ತಾರೆ. ಇದೇ ರೀತಿ ಇಂದು ನಾವು ನಮ್ಮ ದೇಹದಲ್ಲಿ ಆಗುವ ಅದೊಂದು ಬದಲಾವಣೆಯ ಬಗ್ಗೆ ಹೇಳಲಿದ್ದೇವೆ, ಅದು ಬಹಳ ಮುಖ್ಯ. ಈ ಬದಲಾವಣೆಗಳು ನಮ್ಮ ದೇಹದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಸೂಚಿಸುತ್ತದೆ, ಅದನ್ನು ನಿರ್ಲಕ್ಷಿಸಬಾರದು ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಉಗುರುಗಳ ಮೇಲೆ ಅರ್ಧ ಚಂದ್ರ ನಮ್ಮ ಉಗುರುಗಳು ನಮ್ಮ ಬೆರಳುಗಳಿಗೆ ರಕ್ಷಣೆ ನೀಡುತ್ತದೆ. ಉಗುರಿನ ಕೆಳಗೆ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಅದರ ರಕ್ಷಣೆ ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ಉಗುರು ನಮ್ಮ ಬೆರಳುಗಳ ಸೂಕ್ಷ್ಮ ಚರ್ಮವನ್ನು ರಕ್ಷಿಸುತ್ತದೆ. ಪ್ರತಿಯೊಬ್ಬ ಮನುಷ್ಯನ ಉಗುರುಗಳು ಮತ್ತೊಬ್ಬರಿಗಿಂತ ವಿಭಿನ್ನವಾಗಿರುತ್ತವೆ. ಕೆಲವರು ಉಗುರುಗಳು ತುಂಬಾ ಗಟ್ಟಿಯಾಗಿದ್ದರೆ, ಮತ್ತೊಬ್ಬರ ಉಗುರುಗಳು ತುಂಬಾ ಮೃದುವಾಗಿರುತ್ತದೆ. ಇನ್ನು ಅನೇಕ ಜನರ ಉಗುರುಗಳು ಎಷ್ಟೇ ದೊಡ್ಡದಾಗಿ ಬೆಳೆಸಬೇಕು ಎಂದುಕೊಂಡರು ಅವು ಬೇಗ ಮುರಿದುಹೋಗುವಂತಿರುತ್ತವೆ. ಇದಲ್ಲದೆ, ಕೆಲವು ಜನರ ಉಗುರುಗಳ ಮೇಲೆ ಅರ್ಧ ಚಂದ್ರನ ಆಕೃತಿ ಮೂಡಿರುತ್ತದೆ. ಉಗುರಿನ ಕೆಳಗೆ ರೂಪುಗೊಳ್ಳುವ ಈ ಅರ್ಧ ಚಂದ್ರನ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ, ಇದು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ?

ಉಗುರಿನ ಮೇಲೆ ಮೂಡುವ ಅರ್ಧ ಚಂದ್ರ ನಮ್ಮ ಆರೋಗ್ಯವನ್ನು ಹೇಳುತ್ತದೆ ಮೊದಲನೆಯದಾಗಿ, ನಿಮ್ಮ ಕೈಯ ಉಗುರುಗಳನ್ನು ಪರಿಶೀಲಿಸಿ ಮತ್ತು ಉಗುರುಗಳಲ್ಲಿ ಬಿಳಿಯ ಅರ್ಧ ಚಂದ್ರ ಆಕೃತಿ ಮೂಡಿದೆಯೇ ಪರಿಶೀಲಿಸಿ. ಉಗುರಿನಲ್ಲಿ ಮೂಡಿದ ಈ ಅರ್ಧ ಚಂದ್ರಾಕೃತಿ ನಮ್ಮ ಆರೋಗ್ಯದ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತದೆ. ಉಗುರಿನಲ್ಲಿ ಮೂಡಿದ ಅರ್ಧ ಚಂದ್ರ ಬಿಳಿ ಮತ್ತು ಸ್ಪಷ್ಟವಾಗಿದ್ದರೆ, ನೀವು ಸಂಪೂರ್ಣವಾಗಿ ಉತ್ತಮ ಮತ್ತು ಆರೋಗ್ಯವಂತರು ಎಂದು ಅರ್ಥ. ಸಾಮಾನ್ಯವಾಗಿ, ಹೆಬ್ಬೆರಳಿನ ಮೇಲೆ ಅರ್ಧ ಚಂದ್ರಾಕೃತಿ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಇತರ ಬೆರಳುಗಳ ಮೇಲೆ ಅಷ್ಟು ಸ್ಪಷ್ಟವಾಗಿ ಕಾಣುವುದಿಲ್ಲ. ಉಗುರಿನ ಮೇಲೆ ಕಾಣಿಸಿಕೊಳ್ಳುವ ಅರ್ಧ ಚಂದ್ರನನ್ನು ಲುನುಲಾ ಎಂದು ಕರೆಯಲಾಗುತ್ತದೆ.

ಲುನುಲಾ ಎಂದರೇನು? ಚರ್ಮಗಳ ಚೀಲದೊಳಗಿನಿಂದ ಉಗುರುಗಳು ಬೆಳೆಯುತ್ತವೆ. ಇದನ್ನು ಮ್ಯಾಟ್ರಿಕ್ಸ್ ಎಂದು ಕರೆಯುವರು. ಇವು ಹೊಸ ಕೋಶಗಳನ್ನು ತಯಾರಿಸಲು ಸಹಾಯ ಮಾಡುತ್ತೆ. ನಂತರ ಅವುಗಳನ್ನು ಚರ್ಮದೊಟ್ಟಿಗೆ ತಳ್ಳಲಾಗುವುದು. ಲುನುಲಾ ಎನ್ನುವುದು ಮ್ಯಾಟ್ರಿಕ್ಸ್ನ ಗೋಚರ ಭಾಗವನ್ನು ಒಳಗೊಂಡಿರುತ್ತದೆ. ಇದು ವ್ಯಕ್ತಿಯ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ.

ಲುನುಲಾ ಕೊರತೆ ಎಂದರೆ ಏನು? ಯಾವ ವ್ಯಕ್ತಿಗೆ ಉಗುರುಗಳಲ್ಲಿ ಲುನುಲಾ ಕಂಡು ಬರಲಿಲ್ಲವೆಂದರೆ ಅದು ಚಿಂತಿಸುವ ವಿಷಯ. ವಾಸ್ತವವಾಗಿ, ದೇಹದಲ್ಲಿ ರಕ್ತದ ಕೊರತೆ ಇದ್ದರೆ ಲುನುಲಾ ಉಗುರುಗಳಲ್ಲಿ ಗೋಚರಿಸುವುದಿಲ್ಲ. ಇದಲ್ಲದೆ, ವ್ಯಕ್ತಿಯ ಉಗುರಿನಲ್ಲಿ ಕಂಡುಬರುವ ಲುನುಲಾ ಬಿಳಿ ಬಣ್ಣಕ್ಕೆ ಬದಲಾಗಿ ಹಳದಿ ಅಥವಾ ನೀಲಿ ಬಣ್ಣದ್ದಾಗಿ ಕಾಣುತ್ತಿದ್ದರೆ, ಆ ವ್ಯಕ್ತಿ ಮಧುಮೇಹಕ್ಕೆ ಬಲಿಯಾಗುವ ಸಾಥ್ಯತೆ ಇರುತ್ತದೆ ಎಂದು ಹೇಳಲಾಗುತ್ತೆ. ಇದು ಮಾತ್ರವಲ್ಲ, ಲುನುಲಾದ ಬಣ್ಣವು ಅನೇಕ ಜನರಲ್ಲಿ ಕೆಂಪು ಬಣ್ಣದಲ್ಲಿ ಕಂಡುಬರುತ್ತದೆ. ಅಂತಹ ಜನರಿಗೆ ಹೃದಯ ಸಂಬಂಧಿತ ಸಮಸ್ಯೆಗಳಿರಬಹುದು. ಹೀಗಾಗಿ ಲುನುಲಾ ಬಗ್ಗೆ ತಿಳಿದುಕೊಳ್ಳುವುದು ಬಹಳ ಇದೆ. ಸದ್ಯ ಇಷ್ಟು ತಿಳಿದುಕೊಳ್ಳಿ ಲುನುಲಾ ಬಿಳಿ ಬಣ್ಣದಲ್ಲಿ ಇದ್ದರೆ ಆರೋಗ್ಯದಲ್ಲಿ ಸಮಸ್ಯೆ ಇಲ್ಲ. ಆದರೆ ಲುನುಲಾ ಬಿಳಿ ಬಣ್ಣ ಹೊರೆತು ಪಡಿಸಿ ಬೇರೆ ಬಣ್ಣದಲ್ಲಿದ್ದರೆ ನೀವು ವೈದ್ಯರನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Health Tips: ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗಾಗಿ ಕಿವಿಮಾತು; ನಿಮಗಾಗಿಯೇ ಒಂದಿಷ್ಟು ಸಮಯ ಮೀಸಲಿಡಿ