Karnataka Assembly session; ಡಿಕೆ ಶಿವಕುಮಾರ್ ಮತ್ತು ಅಶ್ವಥ್ ನಾರಾಯಣ ನಡುವೆ ಸದನದಲ್ಲಿ ಮಾತಿನ ಯುದ್ಧ
ಅಸಲಿಗೆ ವಾಗ್ವಾದ ಶುರುವಾಗಿದ್ದು ಅಶ್ವಥ್ ನಾರಾಯಣ ಮತ್ತು ಸಚಿವ ಕೆಜೆ ಜಾರ್ಜ್ ನಡುವೆ. ಮೊದಲಿಗೆ ಜಾರ್ಜ್ ನೆರವಿಗೆ ಕೃಷಿ ಸಚಿವ ಎನ್ನ ಚಲುವರಾಯಸ್ವಾಮಿ ಬರುತ್ತಾರೆ. ಅವರಿಬ್ಬರಿಗೂ ಅಶ್ವಥ್ ಮಣಿಯದಾದಾಗ ಶಿವಕುಮಾರ್ ರಂಗಪ್ರವೇಶ ಮಾಡುತ್ತಾರೆ. ಇಬ್ಬರ ಬಾಯಿಂದಲೂ ಸಿಡಿಮದ್ದು ಸಿಡಿಯಲಾರಂಭಿಸುತ್ತದೆ. ಸ್ಪೀಕರ್ ಸಮಾಧಾನ ಮಾಡುವ ವ್ಯರ್ಥ ಪ್ರಯತ್ನ ಮಾಡುತ್ತಾರೆ, ಕೊನೆಗೆ ಕಲಾಪವನ್ನು 5 ನಿಮಿಷ ಮುಂದೂಡುತ್ತಾರೆ.
ಬೆಂಗಳೂರು, ಆಗಸ್ಟ್ 13: ನಮ್ಮ ಜನಪ್ರತಿನಿಧಿಗಳು ಸದನದಲ್ಲಿ ಹೇಗೆ ವರ್ತಿಸುತ್ತಾರೆ? ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವ್ಯವಹಾರ ಹೇಗಿರುತ್ತದೆ ಅನ್ನೋದಿಕ್ಕೆ ಈ ವಿಡಿಯೋ ಸಾಕ್ಷಿ ಮಾರಾಯ್ರೇ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಹಿರಿಯ ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ನಡುವೆ ಭಾರೀ ಮಾತಿನ ಯುದ್ಧ! ಅವರು ಬೈದಾಡಿದ್ದು ಅವರಿಗೇ ಕೇಳಿಸಿಲಿಕ್ಕಿಲ್ಲ, ಇನ್ನು ನಮಗೆಲ್ಲಿ ಅರ್ಥವಾಗುವಂತೆ ಕೇಳಿಸೀತು? ನಿಮಗೆ ಒಂದು ರೂಪಾಯಿಯ ನೈತಿಕತೆ ಇಲ್ಲ, ಭ್ರಷ್ಟಾಚಾರದ ಪಿತಾಮ ನೀನು, ಇತಿಹಾಸದ ಅತ್ಯಂತ ಭ್ರಷ್ಟ ಸರ್ಕಾರ ಇದು ಎಂಬ ಮಾತುಗಳು ಕೇಳಿಸುತ್ತವೆ. ಸುಮ್ಮನಿರುವಂತೆ ಅಶ್ವಥ್ ಗೆ ಅವರ ಪಕ್ಷದವರೇ ಆದ ಅರ್ ಅಶೋಕ ಮತ್ತು ಅರವಿಂದ್ ಬೆಲ್ಲದ್ ಹೇಳುತ್ತಾರೆ ಅದರೆ ಮಲ್ಲೇಶ್ವರಂ ಶಾಸಕ ಮಾತ್ರ ಯಾರ ಮಾತೂ ಕೇಳಲೊಲ್ಲರು!
ಇದನ್ನೂ ಓದಿ: ಬೆಂಗಳೂರು ಒಂದು ಗ್ಲೋಬಲ್ ಸಿಟಿ ಅನ್ನೋದನ್ನು ಪಿಎಂ ಮೋದಿ ಅರ್ಥಮಾಡಿಕೊಂಡಿದ್ದಾರೆ: ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

