Karnataka Assembly session: ಡಿಕೆ ಶಿವಕುಮಾರ್ ಮತ್ತು ಮುನಿರತ್ನ ನಡುವೆ ಸದನದಲ್ಲಿ ಜುಗಲ್ ಬಂದಿ
Karnataka Assembly session: ನಗರದಲ್ಲಿರುವ ಬಿಲ್ಡರ್ಗಳು ಶಿವಕುಮಾರ್ ಅವರ ಮಾತನ್ನು ಬಿಟ್ರೆ ಬೇರೆ ಯಾರ ಮಾತನ್ನೂ ಕೇಳೋದಿಲ್ಲ ಅಂತ ಮುನಿರತ್ನ ಹೇಳಿದ್ದಕ್ಕೆ ವಿಪಕ್ಷ ನಾಯಕ ಅರ್ ಅಶೋಕ ಸಮರ್ಥನೆ ಮಾಡುತ್ತಾರೆ. ಮತ್ತೊಬ್ಬ ಬಿಜೆಪಿ ಶಾಸಕರು ಇದನ್ನು ಹಗರವಾಗಿ ತೆಗೆದುಕೊಳ್ಳಬೇಡಿ, ಗಂಭೀರವಾದ ವಿಷಯ ಅಂತ ಹೇಳಿದಾಗ ಶಿವಕುಮಾರ್, ಅದು ಕೃಷ್ಣ ಭೈರೇಗೌಡರ ಕ್ಷೇತ್ರ ಅವರು ಹೇಳಿದ್ದು ಗಮನದಲ್ಲಿದೆ, ಅವರದ್ದು ಪಬ್ಲಿಕ್ ಅದರೆ ಮುನಿರತ್ನ ಅವರದ್ದು ಪ್ರವೇಟ್-ಅದೇ ವ್ಯತ್ಯಾಸ ಎಂದರು.
ಬೆಂಗಳೂರು, ಆಗಸ್ಟ್ 12: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಾಯ್ಡು (BJP MLA Munirathna Naidu) ನಡುವಿನ ತಿಕ್ಕಾಟ, ಸಂಘರ್ಷ, ಜಗಳ ಎಲ್ಲರಿಗೂ ಗೊತ್ತಿರುವ ಸಂಗತಿ. ಇವತ್ತು ವಿಧಾನಸಭಾ ಅಧಿವೇಶನದಲ್ಲಿ ಇಬ್ಬರ ನಡುವೆ ಮೆಟ್ರೋ ಸ್ಟೇಷನೊಂದಕ್ಕೆ ಹೆಸರಿಡುವ ವಿಷಯಕ್ಕೆ ಸಂಬಂಧಿಸಿದಂತೆ ಜುಗಲ್ ಬಂದಿ ನಡೆಯಿತು. ಬ್ಯಾಟರಾಯನಪುರ ಮತಕ್ಷೇತ್ರದಲ್ಲಿ ಬರುವ ಮೆಟ್ರೋ ಸ್ಟೇಶನ್ ಸುತ್ತಮುತ್ತ ಎಂಬೇಸಿ ಸಂಸ್ಥೆಯು 200-250 ಎಕರೆ ಜಮೀನು ಹೊಂದಿದೆ, ಮೆಟ್ರೋ ಸ್ಟೇಶನ್ ಕಟ್ಟೋದಿಕ್ಕೆ ₹140 ಕೋಟಿ ಆಗುತ್ತದೆ, ಎಂಬೇಸಿ ಸಂಸ್ಥೆಯವರು ₹120 ಕೋಟಿ ನೀಡಿದರೆ ಅವರು ಸೂಚಿಸುವ ಹೆಸರಿಡುತ್ತೇನೆ, ಮುನಿರತ್ನ ಅದೇ ಭಾಗದಲ್ಲಿ ಸುಮಾರು 80 ಎಕರೆ ಜಮೀನು ಹೊಂದಿದ್ದಾರೆ, ಅವರೇನಾದರೂ ₹120 ಹಣ ನೀಡಿದರೆ ಅವರ ಹೆಸರನ್ನೇ ಸ್ಟೇಶನ್ಗೆ ಇಡುತ್ತೇವೆ ಎಂದು ಶಿವಕುಮಾರ್ ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರು ಒಂದು ಗ್ಲೋಬಲ್ ಸಿಟಿ ಅನ್ನೋದನ್ನು ಪಿಎಂ ಮೋದಿ ಅರ್ಥಮಾಡಿಕೊಂಡಿದ್ದಾರೆ: ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

