AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4,6,6,6,4.. ರಶೀದ್ ಖಾನ್ ಬೌಲಿಂಗ್‌ನಲ್ಲಿ ಆರ್​ಸಿಬಿ ಆಟಗಾರನ ಅಬ್ಬರ ಹೇಗಿತ್ತು ನೋಡಿ

4,6,6,6,4.. ರಶೀದ್ ಖಾನ್ ಬೌಲಿಂಗ್‌ನಲ್ಲಿ ಆರ್​ಸಿಬಿ ಆಟಗಾರನ ಅಬ್ಬರ ಹೇಗಿತ್ತು ನೋಡಿ

ಪೃಥ್ವಿಶಂಕರ
|

Updated on: Aug 13, 2025 | 6:38 PM

Share

The Hundred: ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡವು ಓವಲ್ ಇನ್ವಿನ್ಸಿಬಲ್ಸ್ ವಿರುದ್ಧದ ದಿ ಹಂಡ್ರೆಡ್ ಪಂದ್ಯದಲ್ಲಿ 4 ವಿಕೆಟ್‌ಗಳ ಗೆಲುವು ಸಾಧಿಸಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಅದ್ಭುತ ಬ್ಯಾಟಿಂಗ್‌ನಿಂದಾಗಿ ಬರ್ಮಿಂಗ್ಹ್ಯಾಮ್ ಗೆದ್ದರೆ, ರಶೀದ್ ಖಾನ್ ಅವರ ದುಬಾರಿ ಬೌಲಿಂಗ್ (20 ಎಸೆತಗಳಲ್ಲಿ 59 ರನ್) ಸೋಲಿಗೆ ಕಾರಣವಾಯಿತು. ಲಿವಿಂಗ್‌ಸ್ಟೋನ್ ಒಂದೇ ಓವರ್‌ನಲ್ಲಿ ರಶೀದ್ ವಿರುದ್ಧ 26 ರನ್ ಗಳಿಸಿದ್ದು ಪಂದ್ಯದ ಮುಖ್ಯಾಂಶವಾಗಿತ್ತು.

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಟೂರ್ನಮೆಂಟ್‌ನ 10 ನೇ ಪಂದ್ಯದಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಮತ್ತು ಓವಲ್ ಇನ್ವಿನ್ಸಿಬಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಈ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದುಕೊಂಡಿತು. ತಂಡದ ಈ ಗೆಲುವಿನಲ್ಲಿ ನಾಯಕ ಲಿಯಾಮ್ ಲಿವಿಂಗ್‌ಸ್ಟೋನ್ ಪ್ರಮುಖ ಪಾತ್ರವಹಿಸಿದರೆ, ಎದುರಾಳಿ ತಂಡದ ಸೋಲಿಗೆ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಕಾರಣವೆನಿಸಿಕೊಂಡರು. ಈ ಪಂದ್ಯದಲ್ಲಿ ರಶೀದ್ ಕೇವಲ 20 ಎಸೆತಗಳಲ್ಲಿ ಯಾವುದೇ ವಿಕೆಟ್ ಪಡೆಯದೆ 59 ರನ್ ಬಿಟ್ಟುಕೊಟ್ಟರು. ರಶೀದ್ ಇಷ್ಟೊಂದು ದುಬಾರಿಯಾಗಲು ಕಾರಣರಾಗಿದ್ದು ಲಿವಿಂಗ್‌ಸ್ಟೋನ್. ರಶೀದ್‌ ಬೌಲ್ ಮಾಡಿದ ಸತತ 5 ಎಸೆತಗಳಲ್ಲಿ ಲಿವಿಂಗ್‌ಸ್ಟೋನ್ 26 ರನ್ ಗಳಿಸಿದರು.

ರಶೀದ್ ಓವರ್​ನ ಮೊದಲ ಎಸೆತವನ್ನು ಲಿವಿಂಗ್‌ಸ್ಟೋನ್ ಬೌಂಡರಿಗಟ್ಟಿದರೆ, ಎರಡನೇ ಎಸೆತವನ್ನು ನೇರವಾಗಿ ಸಿಕ್ಸರ್​ಗಟ್ಟಿದರು. ಓವರ್‌ನ ಮೂರನೇ ಎಸೆತ ಕೂಡ ಸಿಕ್ಸರ್​ಗೆ ಹೋಯಿತು. ಇದರೊಂದಿಗೆ ಲಿವಿಂಗ್‌ಸ್ಟೋನ್ 3 ಎಸೆತಗಳಲ್ಲಿ 14 ರನ್ ಗಳಿಸಿದರು. ರಶೀದ್ ಬೌಲ್ ಮಾಡಿದ ನಾಲ್ಕನೇ ಎಸೆತವೂ ಪ್ರೇಕ್ಷಕರ ಗ್ಯಾಲರಿಗೆ ಬಿದ್ದಿತು. ಲಿವಿಂಗ್‌ಸ್ಟೋನ್ ಐದನೇ ಎಸೆತವನ್ನು ಸಹ ಬೌಂಡರಿ ಗೆರೆಯನ್ನು ದಾಟಿಸುವಲ್ಲಿ ಯಶಸ್ವಿಯಾದರು. ಈ ರೀತಿಯಾಗಿ, ಲಿವಿಂಗ್‌ಸ್ಟೋನ್ ರಶೀದ್ ವಿರುದ್ಧ 5 ಎಸೆತಗಳಲ್ಲಿ 26 ರನ್ ಗಳಿಸಿದರು.

ರಶೀದ್ ಅತ್ಯಂತ ದುಬಾರಿ ಸ್ಪೆಲ್

ಈ ಮೂಲಕ ರಶೀದ್, ದಿ ಹಂಡ್ರೆಡ್ ಮೆನ್ ಟೂರ್ನಮೆಂಟ್‌ನ ಅತ್ಯಂತ ದುಬಾರಿ ಸ್ಪೆಲ್ ಮಾಡಿದ ಬೇಡದ ದಾಖಲೆ ಬರೆದರು. ಕೇವಲ 20 ಎಸೆತಗಳಲ್ಲಿ 59 ರನ್ ಬಿಟ್ಟುಕೊಟ್ಟ ರಶೀದ್ ಅವರ ಟಿ20 ವೃತ್ತಿಜೀವನದ ಅತ್ಯಂತ ದುಬಾರಿ ಸ್ಪೆಲ್ ಕೂಡ ಆಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಓವಲ್ ಇನ್ವಿನ್ಸಿಬಲ್ಸ್ 100 ಎಸೆತಗಳಲ್ಲಿ 180 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಬರ್ಮಿಂಗ್ಹ್ಯಾಮ್ ತಂಡವು ಕೇವಲ 98 ಎಸೆತಗಳಲ್ಲಿ ಗೆಲುವು ಸಾಧಿಸಿತು.