ಶಿವಕುಮಾರ್ ಮೇಲೆ ವೃಥಾ ಆರೋಪ ಬೇಡ, ರಾಜಣ್ಣರೊಂದಿಗೆ ಅವರಿಗೆ ಉತ್ತಮ ಬಾಂಧವ್ಯವಿದೆ: ಇಕ್ಬಾಲ್ ಹುಸ್ಸೇನ್
ರಾಜಣ್ಣನವರು ಸೆಪ್ಟಂಬರ್ ನಲ್ಲಿ ಕ್ರಾಂತಿ ನಡೆಯಲಿದೆ ಅಂತ ಹೇಳಿದ್ದರು, ಅದು ಆಗಸ್ಟ್ ನಲ್ಲೇ ನಡೆದಿದೆಯಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್, ನಾವಿನ್ನೂ ಆಗಸ್ಟ್ನಲ್ಲಿದ್ದೇವೆ, ಸ್ವಾತಂತ್ರ್ಯ ದಿನಾಚರಣೆಯ ಬಳಿಕ ಸೆಪ್ಟಂಬರ್ ಗೆ ಇನ್ನೂ 15 ದಿನ ಉಳಿದಿರುತ್ತದೆ, ಮುಂದೆ ಏನೇನು ಆಗಲಿದಯೋ ಕಾದು ನೋಡೋಣ ಎಂದು ಹೇಳಿದರು. ಶಿವಕುಮಾರ್ ಸಿಎಂ ಆಗ್ತಾರಾ ಎಂದರೆ ಅವರು ಮುಗುಳ್ನಗುತ್ತಾ ಏನೋ ಹೇಳುತ್ತಾರೆ.
ಬೆಂಗಳೂರು ದಕ್ಷಿಣ, ಅಗಸ್ಟ್ 13: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸ್ಸೇನ್, ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕೆಎನ್ ರಾಜಣ್ಣ (KN Rajanna) ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ನಾನು ಪಕ್ಷದ ಚಿಕ್ಕ ಕಾರ್ಯಕರ್ತ, ಏನೇ ಮಾತಾಡಿದರೂ ನನ್ನ ಇತಿಮಿತಿಯೊಳಗೆ ಮಾತಾಡುತ್ತೇನೆ ಎಂದು ಇಕ್ಬಾಕ್ ಹೇಳಿದರು. ರಾಜಣ್ಣ ಮತ್ತು ಶಿವಕುಮಾರ್ ನಡುವೆ ಉತ್ತಮ ಬಾಂಧವ್ಯ ಇದೆ, ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದಾರೆ, ಸರ್ಕಾರವನ್ನು ಗಟ್ಟಿಗೊಳಿಸುವಲ್ಲಿ ರಾಜಣ್ಣ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ, ಶಿವಕುಮಾರ್ ಯಾವತ್ತಾದರೂ ರಾಜಣ್ಣ ಬಗ್ಗೆ ಮಾತಾಡಿದ್ದಾರಾ? ಯಾವತ್ತೂ ಇಲ್ಲ. ಹಾಗಿರುವಾಗ ವಿನಾಕಾರಣ ಶಿವಕುಮಾರ್ ಮೇಲೆ ಅರೋಪ ಯಾಕೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಇದನ್ನೂ ಓದಿ: ಶಿವಕುಮಾರ್ ನೋಟೀಸ್ ಜಾರಿ ಮಾಡ್ತೀನಿ ಅಂದಾಕ್ಷಣ ಶಾಸಕ ಇಕ್ಬಾಲ್ ಹುಸ್ಸೇನ್ ಮುಖದಲ್ಲಿ ಪ್ರೇತಕಳೆ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

