ಎರಡೂವರೆ ವರ್ಷ ಸಿದ್ದರಾಮಯ್ಯ ಅಧಿಕಾರ ನಡೆಸುತ್ತಾರೆ, ಉಳಿದ ಅವಧಿ ಶಿವಕುಮಾರ್ ನಡೆಸಲಿ: ಇಕ್ಬಾಲ್ ಹುಸ್ಸೇನ್
ತಾನು ಸಿದ್ದರಾಮಯ್ಯನವರ ಅಭಿಮಾನಿ, ದೇವರಾಜ ಅರಸು ನಂತರ ರಾಜ್ಯದ ಜನತೆಗೆ ಅತಿಹೆಚ್ಚು ಕಾರ್ಯಕ್ರಮಗಳನ್ನು ಅವರು ನೀಡಿದ್ದಾರೆ, ತನ್ನ ಒಂದೇ ವಾದವೇನೆಂದರೆ ಅವರು ಮೊದಲೊಮ್ಮೆ ಮುಖ್ಯಮಂತ್ರಿಯಾಗಿ ಪೂರ್ತಿ 5-ವರ್ಷ ಅಧಿಕಾರ ಆನುಭಸಿದ್ದಾರೆ ಮತ್ತು ಈಗಲೂ ಎರಡೂವರೆ ವರ್ಷ ಅಧಿಕಾರ ನಡೆಸುತ್ತಿದ್ದಾರೆ, ಉಳಿದ ಅವಧಿಗೆ ಶಿವಕುಮಾರ್ಗೆ ಅವಕಾಶ ಸಿಗಲಿ ಅನ್ನೋದು ಅಂತ ಇಕ್ಬಾಲ್ ಹೇಳಿದರು.
ರಾಮನಗರ, ಜುಲೈ 2: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಿಕೆ ನೀಡಕೂಡದೆಂದು ನೋಟೀಸ್ ಕೊಟ್ಟಾಗ್ಯೂ ರಾಮನಗರ ಶಾಸಕ ಇಕ್ಬಾಲ್ ಹುಸ್ಸೇನ್ ತನ್ನ ಹೇಳಿಕೆಗೆ ಬದ್ಧ ಎಂದು ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಇಕ್ಬಾಲ್, ಶಿವಕುಮಾರ್ ನಮ್ಮ ಅಧ್ಯಕ್ಷರು, ಪಕ್ಷದ ಸದಸ್ಯರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸ್ವಾತಂತ್ರ್ಯ ಅವರಿಗಿದೆ, ನನಗೆ ನೋಟೀಸ್ ನೀಡಿ 7ದಿನಗೊಳಗೆ ಉತ್ತರ ನೀಡುವಂತೆ ಹೇಳಿದ್ದಾರೆ, ಉತ್ತರ ಕೊಡುತ್ತೇನೆ, ಅದರೆ ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದರು. ಬೇರೆ ಶಾಸಕರೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತಾಡಿದ್ದಾರೆ, ಅವರಿಗಿಲ್ಲದ ನೋಟೀಸ್ ನಿಮಗ್ಯಾಕೆ ಅಂತ ಕೇಳಿದರೆ, ಮಾಧ್ಯಮದವರು ಅವರನ್ನೇ ಕೇಳಬೇಕು ಅಂತ ಇಕ್ಬಾಲ್ ಹೇಳಿದರು.
ಇದನ್ನೂ ಓದಿ: ಹೊರಗಿನವರಾಗಿರುವ ಕುಮಾರಸ್ವಾಮಿ ರಾಮನಗರದಲ್ಲಿ ಕೇವಲ ರಾಜಕಾರಣ ಮಾಡಿದ್ದಾರೆ: ಇಕ್ಬಾಲ್ ಹುಸ್ಸೇನ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ