ಹೊರಗಿನವರಾಗಿರುವ ಕುಮಾರಸ್ವಾಮಿ ರಾಮನಗರದಲ್ಲಿ ಕೇವಲ ರಾಜಕಾರಣ ಮಾಡಿದ್ದಾರೆ: ಇಕ್ಬಾಲ್ ಹುಸ್ಸೇನ್
ಬೇರೆ ಜಿಲ್ಲೆಯವರಾದ ಕುಮಾರಸ್ವಾಮಿ ಅವರಿಗೆ ರಾಮನಗರ ಜಿಲ್ಲೆ ಜನರ ನಾಡಿಮಿಡಿತವೇ ಗೊತ್ತಿಲ್ಲ, ಅದರೆ ಡಿಕೆ ಸಹೋದರು, ತಾನ ಈ ಜಿಲ್ಲೆಯ ಮಕ್ಕಳು ಇಲ್ಲಿಯ ಜನರ ಕಷ್ಟಸುಖಗಳನ್ನು ಅವರ ಬೇಕು ಬೇಡಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ ಎಂದು ಶಾಸಕ ಇಕ್ಬಾಲ್ ಹುಸ್ಸೇನ್ ಹೇಳಿದರು.
ರಾಮನಗರ: ರಾಮನಗರದ ಹೆಸರು ಬದಲಾಯಿಸಿದರೆ ರಕ್ತಪಾತವಾಗುತ್ತದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಕ್ಕೆ ರಾಮನಗರದ ಶಾಸಕ ಇಕ್ಬಾಲ್ ಹುಸ್ಸೇನ್ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರದಲ್ಲಿ ರಕ್ತಪಾತ ಅಗಲು ಸಾಧ್ಯವೇ ಇಲ್ಲ, ಅಸಲಿಗೆ ಜಿಲ್ಲೆಗೆ ಕುರಾಮಸ್ವಾಮಿಯವ ಕೊಡುಗೆಯಾದರೂ ಏನು? ಎಲ್ಲಿಂದಲೋ ಬಂದು ಜಿಲ್ಲೆಯನ್ನು ಮತ್ತು ಜನರನ್ನು ತಮ್ಮ ರಾಜಕಾರಣಕ್ಕಾಗಿ ಬಳಸಿಕೊಂಡರು. ಅವರಿಂದ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಕೆಲಸ ನಡೆದಿದೆ? 2018 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಹಾರೋಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸಿದರು. ಅದರೆ ಅಲ್ಲ್ಲಿ ಒಂದೇ ಒಂದು ಕಟ್ಟಡ ಇಲ್ಲ, ಒಬ್ಬ ಅಧಿಕಾರಿ ಕೂತು ಸಭೆ ನಡೆಸಲು ಒಂದು ಕಚೇರಿಯೂ ಇಲ್ಲ. ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡ ಅವರು ಕಟ್ಟಡಕ್ಕಾಗಿ ₹17 ಕೋಟಿ ಮಂಜೂರು ಮಾಡಿದ್ದಾರೆ ಮತ್ತು ಜಿಲ್ಲಾಧಿಕಾರಿ 5 ಎಕರೆ ಜಮೀನು ನೀಡಿದ್ದಾರೆ ಎಂದು ಇಕ್ಬಾಲ್ ಹೇಳಿದರು. ಬಡವರಿಗೆ ಮನೆ ನಿರ್ಮಿಸಲು ಮತ್ತು ಕಚೇರಿಗಳನ್ನು ಕಟ್ಟಲು 50 ಎಕರೆ ಜಮೀನು ಸಹ ಗುರುತಿಸಲಾಗಿದೆ ಎಂದು ಶಾಸಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಅಸ್ತಿತ್ವಕ್ಕೆ ಬರುವ ಮೊದಲು ನನಗೆ 21,000 ಚದರ ಅಡಿಯ ಸೈಟು ಸಿಕ್ಕಿದೆ: ಕುಮಾರಸ್ವಾಮಿ