ಮುಡಾ ಅಸ್ತಿತ್ವಕ್ಕೆ ಬರುವ ಮೊದಲು ನನಗೆ 21,000 ಚದರ ಅಡಿಯ ಸೈಟು ಸಿಕ್ಕಿದೆ: ಕುಮಾರಸ್ವಾಮಿ
ಕುಮಾರಸ್ವಾಮಿಯವರಿಗೆ ಮುಡಾ ಅಸ್ತಿತ್ವಕ್ಕೆ ಬರುವ ಮೊದಲು ಸಿಐಟಿಬಿಯಿಂದಲೇ 21,000 ಚದರ ಅಡಿಗಳಷ್ಟು ದೊಡ್ಡ ಸೈಟು ಸಿಕ್ಕಿರಬಹುದು. ಅದರೆ ಇದಕ್ಕೆ ಮೊದಲು ಅವರು ಯಾವತ್ತೂ ಈ ಸೈಟಿನ ಬಗ್ಗೆ ಮಾತಾಡಿರಲಿಲ್ಲ. ಈg ಕಾಂಗ್ರೆಸ್ ದಾಖಲೆಗಳನ್ನು ಬಹಿರಂಗಗೊಳಿಸಿದ ಮೇಲೆ 1984ರಲ್ಲ್ಲೇ ಸಿಕ್ಕಿದ್ದು ಅಂತ ಹೇಳುತ್ತಿದ್ದಾರೆ. ತಾವಾಗಿಯೇ ಸೈಟ್ ವಿಷಯವನ್ನು ಅವರು ಬಹಿರಂಗ ಮಾಡಿದ್ದರೆ ಕಾಂಗ್ರೆಸ್ ನವರಿಗೆ ಬೆರಳು ತೋರಿಸುವ ಅವಕಾಶ ಸಿಗುತ್ತಿರಲಿಲ್ಲ.
ದೆಹಲಿ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ತಮಗೆ ಮೈಸೂರಲ್ಲಿ ಸೈಟು ಸಿಕ್ಕಿರುವ ಸಂಗತಿಯನ್ನು ಅಂಗೀಕರಿಸಿದರು. ದೆಹಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕಾಂಗ್ರೆಸ್ ನಾಯಕರು ಹೇಳುತ್ತಿರುವ ಹಾಗೆ ತನಗೆ ದೊಡ್ಡ ದೊಡ್ಡ ಸೈಟುಗಳೇನೂ ಸಿಕ್ಕಿಲ್ಲ, ಮುಡಾ ಅಸ್ತಿತ್ವಕ್ಕೆ ಬರುವ ಮೊದಲು ತನಗೆ ಸಿಐಟಿಬಿಯಿಂದ 1984ರಲ್ಲಿ 75 X 280 (21,000 ಚದರ ಅಡಿ) ಇಂಡಸ್ಟ್ರಿಯಲ್ ಸೈಟು ಸಿಕ್ಕಿದೆ, ಅದನ್ನು ಪುಕ್ಕಟಯಾಗೇನೂ ಪಡೆದಿಲ್ಲ, ಆ ಕಾಲದಲ್ಲೇ ₹37,000 ನೀಡಿದ್ದೇನೆ ಎಂದು ಹೇಳಿದರು. ಸಕ್ರಿಯ ರಾಜಕಾರಣಕ್ಕೆ ಬರುವ ಮೊದಲು 15 ವರ್ಷಗಳ ಮೈಸೂರಲ್ಲಿ ಸಿನಿಮಾ ಡಿಸ್ಟ್ರಿಬ್ಯೂಟರ್ ಆಗಿ ವೃತ್ತಿ ನಡೆಸುತ್ತಿದ್ದ ಕುಮಾರಸ್ವಾಮಿಯವರು ಅಲ್ಲಿ ಒಂದು ಕಚೇರಿಯನ್ನೂ ಹೊಂದಿದ್ದರಂತೆ. ಕಾಂಗ್ರೆಸ್ ನಾಯಕರು ದೇವೇಗೌಡರಿಗೆ 50-60 ಸೈಟು, ತನಗೆಗೆ ಹತ್ತಾರು ಸೈಟು ಅಂತ ಸುಳ್ಳು ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಮನ ಹೆಸರಂತೂ ತೆಗೆಯಲು ಸಾಧ್ಯವಿಲ್ಲ, 2028ರೊಳಗೆ ಮತ್ತೆ ರಾಮನಗರವೆಂದು ಬರುತ್ತೆ: ಹೆಚ್ಡಿ ಕುಮಾರಸ್ವಾಮಿ