ರಾಮನ ಹೆಸರಂತೂ ತೆಗೆಯಲು ಸಾಧ್ಯವಿಲ್ಲ, 2028ರೊಳಗೆ ಮತ್ತೆ ರಾಮನಗರವೆಂದು ಬರುತ್ತೆ: ಹೆಚ್​ಡಿ ಕುಮಾರಸ್ವಾಮಿ

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಡಲು ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲೇ ಇದೀಗ ಆಕ್ರೋಶ ವ್ಯಕ್ತವಾಗಿದೆ. ರಾಮನಗರ ಹೆಸರಿಗೆ ಕಳಂಕ ತಂದೋರು ಯಾರೂ ಉದ್ಧಾರ ಆಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಪ್ರತಿಕ್ರಿಯಿಸಿರುವ ಹೆಚ್​ಡಿ ಕುಮಾರಸ್ವಾಮಿ, ಪ್ರಲ್ಹಾದ್​ ಜೋಶಿ ರಾಜ್ಯ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ರಾಮನ ಹೆಸರಂತೂ ತೆಗೆಯಲು ಸಾಧ್ಯವಿಲ್ಲ, 2028ರೊಳಗೆ ಮತ್ತೆ ರಾಮನಗರವೆಂದು ಬರುತ್ತೆ: ಹೆಚ್​ಡಿ ಕುಮಾರಸ್ವಾಮಿ
ರಾಮನ ಹೆಸರಂತೂ ತೆಗೆಯಲು ಸಾಧ್ಯವಿಲ್ಲ, 2028ರೊಳಗೆ ಮತ್ತೆ ರಾಮನಗರವೆಂದು ಬರುತ್ತೆ: ಹೆಚ್​ಡಿ ಕುಮಾರಸ್ವಾಮಿ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ

Updated on:Jul 26, 2024 | 8:19 PM

ರಾಮನಗರ, ಜುಲೈ 26: ರಾಮನ ಹೆಸರಂತೂ ತೆಗೆದು ಹಾಕುವುದಕ್ಕೆ ಸಾಧ್ಯವಿಲ್ಲ. 2028ರೊಳಗೆ ಮತ್ತೆ ರಾಮನಗರ (Ramanagara) ಅಂತಾ ಬರುತ್ತದೆ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಸ್ವಲ್ಪ ದಿನ ಅವರು ಖುಷಿಯಾಗಿರಲಿ. ರಾಜಕೀಯ ಪತನ ಆರಂಭವಾಗಿದೆ. ಜಿಲ್ಲೆಯ ಹೆಸರು ಬದಲಿಸಲು ಅರ್ಜಿ ಕೊಟ್ಟವ ಯಾರು? ಹೆಸರು ಬದಲಿಸುವುದರಿಂದ ಏನು ಸಿಗುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಮನಗರ ಇತಿಹಾಸ ಅವರಿಗೆ ಗೊತ್ತಿದ್ಯಾ. ರಾಮನಗರ ಈಗಾಗಲೇ ಅಭಿವೃದ್ಧಿ ಆಗಿದೆ. ಹೆಸರು ಬದಲಿಸಿ ಭೂಮಿ ಬೆಲೆ ಏರಿಸಬೇಕಾ? ಕಾನೂನು ಸುವ್ಯವಸ್ಥೆ ಹೇಗಿದೆ ನೋಡಬೇಕು? ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತೆ ಸರಿಯಾಗಿಡದೇ ಏನು ಅಭಿವೃದ್ಧಿ ಮಾಡಿದ್ರೆ ಏನು ಪ್ರಯೋಜನ ಬಂತು ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ರಾಮನ ವಿರುದ್ಧವಾಗಿದೆ: ಜೋಶಿ

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿರುವ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಪ್ರತಿಕ್ರಿಯಿಸಿ, ಇದು ರಾಮ ಮತ್ತು ರಾಮಮಂದಿರದ ಬಗ್ಗೆ ಅವರಿಗಿರುವ ಅಲರ್ಜಿಯನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.

ನಾವು ರಾಮಮಂದಿರವನ್ನು ನಿರ್ಮಿಸುವಾಗ ಅವರು ಇದನ್ನೇ ಮಾಡುತ್ತಿದ್ದರು. ರಾಮನಗರಕ್ಕೆ ಮರುನಾಮಕರಣ ಮಾಡುವ ನಿರ್ಧಾರ, ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸರ್ಕಾರವು ರಾಮನ ವಿರುದ್ಧವಾಗಿದೆ ಎಂದು ಸಾಬೀತುಪಡಿಸಿದೆ. ವೋಟ್ ಬ್ಯಾಂಕ್ ರಾಜಕೀಯ ಮತ್ತು ದುರಾಸೆಗಾಗಿ ಯಾರೂ ಹೆಸರು ಬದಲಾಯಿಸಬಾರದು. ನಾವು ಇದನ್ನು ಖಂಡಿಸುತ್ತೇವೆ ಎಂದು ಕಿಡಿಕಾರಿದ್ದಾರೆ.

ಈ ಹೆಸರಿಗೆ ಕಳಂಕ ತಂದೋರು ಯಾರೂ ಉದ್ಧಾರ ಆಗಿಲ್ಲ: ರುದ್ರೇಶ್

ಈ ಬಗ್ಗೆ ರಾಮನಗರ ನಿವಾಸಿ ರುದ್ರೇಶ್​ ಎಂಬುವವರು ಪ್ರತಿಕ್ರಿಯಿಸಿದ್ದು, ಜಿಲ್ಲೆ ಹೆಸರು ಬದಲಾವಣೆ ಮಾಡಬೇಡಿ. ರಾಮನಗರ‌ ಹೆಸರಲ್ಲಿ ರಾಮನಿದ್ದಾನೆ. ಬೆಂಗಳೂರು ಅಂತ ಬ್ರ್ಯಾಂಡ್ ಬೇಡ, ರಾಮನಗರ ಅಂತಲೇ ಬ್ರ್ಯಾಂಡ್ ಮಾಡಿ. ಈ ಹೆಸರಿಗೆ ಕಳಂಕ ತಂದೋರು ಯಾರೂ ಉದ್ಧಾರ ಆಗಿಲ್ಲ. ರಾಮನಗರ ಜಿಲ್ಲೆ ಅಂತನೇ ಇದ್ದರೇ ತುಂಬಾ ಒಳ್ಳೆಯದು. ರಾಮನಗರ ಎನ್ನುವುದೇ ಇಡಿ ಜಗತ್ತಿಗೆ ಗೊತ್ತಾಗಲಿ ಬಿಡಿ. ಬೆಂಗಳೂರು ಜಿಲ್ಲೆ ಬೆಂಗಳೂರಿಗೆ ಸೀಮಿತ. ಬೆಂಗಳೂರಿನವರು ಅಂತ ಕರೆಯುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಿಎಂಗೆ ಪತ್ರ ಬರೆದು ರಾಮನಗರದ ಮಹತ್ವ ತಿಳಿಸಿದ ಸಂಸದ ಡಾ ಮಂಜುನಾಥ್

ರಾಮನಗರದಲ್ಲಿ ರಾಮನ ಪಾದ ಇದೆ. ಹೆಸರು ಬದಲಾವಣೆಗೆ ಜನರು ಯಾರಾದರೂ ಅರ್ಜಿ ಹಾಕಿದ್ದಾರಾ? ಬರಬೇಕಾದ ಯೋಜನೆ ಬರಲಿ, ರಾಮನಗರ ಬದಲಾಗುತ್ತೆ, ದಾವಣಗೆರೆಯೂ ಬದಲಾಗುತ್ತೆ, ರಾಮನಗರ ಎನ್ನುವ ಹೆಸರನ್ನೇ ಅಭಿವೃದ್ಧಿ ಮಾಡಿ ಯಾಕೆ ಆಗಲ್ಲ. ಬೆಂಗಳೂರು ದಕ್ಷಿಣ ಮಾಡಿ ರೈತರೆಲ್ಲ ತಮ್ಮ ಜಮೀನು ಮಾರಿಕೊಂಡು ಹೋಗಬೇಕಾ ಎಂದು ಕಿಡಕಾರಿದ್ದಾರೆ.

ಹೆಸರು ಬದಲಾವಣೆಗೆ ಹರ್ಷ ವ್ಯಕ್ತಪಡಿಸಿದ ಸರಗೂರಯ್ಯ 

ಇನ್ನು ಜಿಲ್ಲೆ ಬದಲಾವಣೆ ವಿಚಾರವಾಗಿ ರಾಮನಗರ ನಿವಾಸಿ ಸರಗೂರಯ್ಯ ಎಂಬುವವರು ಹರ್ಷ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಿಶ್ವದಲ್ಲೇ ನಂಬರ್ ಒನ್​. ಆ ಹೆಸರಿನ ಜೊತೆ ರಾಮನಗರ ಇದ್ದರೆ ಅಭಿವೃದ್ಧಿ ಆಗುತ್ತೆ. ಮಾಜಿ ಸಿಎಂ ರಾಮನಗರವನ್ನು ಬರೀ ಜಿಲ್ಲೆ ಮಾಡಿದ್ದರು. ಅಭಿವೃದ್ಧಿ ಆಗಿಲ್ಲ, ಬೆಂಗಳೂರಿಗೆ ಸೇರಿದರೆ ಅಭಿವೃದ್ಧಿ ಆಗುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಬಗ್ಗೆ ಎಚ್​ಡಿಕೆ ಖಡಕ್ ಮಾತು, ಡಿಕೆಶಿ ಮಹತ್ವದ ಸಲಹೆ

ಈ ಹಿಂದೆ ಬೆಂಗಳೂರು ಗ್ರಾಮಾಂತರ ಅಂತ ಇತ್ತು. ಈಗ ಬೆಂಗಳೂರು ದಕ್ಷಿಣ ಆದರೆ ಬೆಂಗಳೂರಿಗೆ ಸೇರಿಕೊಂಡಂತಾಯ್ತು. ಅದರಿಂದ ಬಹಳಷ್ಟು ಫ್ಯಾಕ್ಟರಿಗಳು ಬರುತ್ತವೆ. ಡಿಸಿಎಂ ಡಿಕೆ ಶಿವಕುಮಾರ್ ನಮ್ಮವರು, ನಮ್ಮ ತಾಲೂಕಿನವರು. ಏನೋ ಒಳ್ಳೆದು ಮಾಡೋದಕ್ಕೆ ಹೊರಟಿದ್ದಾರೆ. ಅವರ ಈ‌ ನಿರ್ಧಾರಕ್ಕೆ ಬಹಳ ಖುಷಿ ಇದೆ. ಹಾಸನ ನೋಡಿ, ಕುಮಾರಸ್ವಾಮಿ ಎಷ್ಟು ಒಳ್ಳೆಯ ಕೆಲಸ ಮಾಡಿಸಿದ್ದಾರೆ. ಅದೇ ರೀತಿ ರಾಮನಗರ ಅಭಿವೃದ್ಧಿ ಆಗಲಿ ಬಿಡಿ ಎಂದು ಖುಷಿ ವ್ಯಕ್ತ ಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:39 pm, Fri, 26 July 24

ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್