ರಾಮ‌ ಇದ್ದಾನೆ ಎಂದು ರಾಮನಗರ ಹೆಸರು ಬದಲಾಯಿಸ್ತಿದ್ದಾರೆ: ಅಶ್ವತ್ಥ್ ನಾರಾಯಣ ಕಿಡಿ

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಖುದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಈ ಸಂಬಂಧ ರಾಮನಗರ ಜಿಲ್ಲೆಯ ಪ್ರಮುಖ ನಾಯಕರು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು (ಜುಲೈ 09) ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಆದ್ರೆ, ಇದಕ್ಕೆ ಆರಂಭದಲ್ಲೇ ವಿರೋಧ ವ್ಯಕ್ತವಾಗಿದೆ. ವಿಪಕ್ಷ ನಾಯಕರು ರಾಮನಗರ ಹೆಸರು ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ರಾಮ‌ ಇದ್ದಾನೆ ಎಂದು ರಾಮನಗರ ಹೆಸರು ಬದಲಾಯಿಸ್ತಿದ್ದಾರೆ: ಅಶ್ವತ್ಥ್ ನಾರಾಯಣ ಕಿಡಿ
ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ
Follow us
|

Updated on: Jul 09, 2024 | 5:45 PM

ಬೆಂಗಳೂರು, ಜುಲೈ (09): ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಡಿಕೆ ಶಿವಕುಮಾರ್ ತೀರ್ಮಾನಿಸಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇನ್ನು ಈ ವಿಚಾರಕ್ಕೆ ಬಿಜೆಪಿ ಶಾಸಕ ಡಾ. ಸಿಎನ್ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದು, ರಾಮ‌ ಇದ್ದಾನೆ ಅಂತಾ ರಾಮನಗರ ಹೆಸರು ಬದಲಾಯಿಸುತ್ತಿದ್ದಾರೆ. ನಾಮಕರಣ ಮಾಡೋದೇ ಇವರ ದೊಡ್ಡ ಸಾಧನೆ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಆಗಬೇಕೆಂದು ಮನವಿ ಸಲ್ಲಿಸಿದ್ದಾರೆ. ಇದನ್ನು ಒಪ್ಪಿಕೊಳ್ಳುವುದಕ್ಕೆ ಆಗಲ್ಲ. ರಿಯಲ್ ಎಸ್ಟೇಟ್ ಬೆಲೆ ಹೆಚ್ಚಾಗುತ್ತೆ ಎಂಬ ಕಾರಣ ಕೊಟ್ಟಿದ್ದಾರೆ. ಮೆಡಿಕಲ್‌ ಕಾಲೇಜು​ ಅನ್ನು ಕನಕಪುರಕ್ಕೆ ಕೊಂಡೊಯ್ಯುವ ವ್ಯಕ್ತಿ ರಾಮನಗರ ಜಿಲ್ಲೆಯ ಅಭಿವೃದ್ಧಿ ಮಾಡಿಲ್ಲ. ದುಡ್ಡು ಜಾಸ್ತಿ ಸಿಗುತ್ತೆ ಎಂದು ಅಪ್ಪನ ಹೆಸರು‌ ಬದಲಾಯಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದು ರಾಮನಗರದ ಜನತೆ, ರಾಜ್ಯದ ಜನರ ಭಾವನೆ ವಿರುದ್ಧವಾಗಿದೆ. ರಾಮನಗರ ಜಿಲ್ಲೆ ಹೆಸರು ಬದಲಿಸಲು ಸಂಪೂರ್ಣ ವಿರೋಧಿಸುತ್ತೇವೆ. ಬೆಲೆ ಏರಿಕೆಯಾಗುತ್ತೆ ಎಂದು ಅವರು ನೀಡುವ ಕಾರಣ ಒಪ್ಪುವುದಿಲ್ಲ. ಕಾಂಗ್ರೆಸ್ ಸರ್ಕಾರ ಕೇವಲ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಇವರು ರಾಮನ ಹೆಸರು ಸಹಿಸಿಕೊಳ್ಳುವುದಿಲ್ಲ. ಅದೇ ಕಾರಣಕ್ಕಾಗಿ ಜಿಲ್ಲೆಯ ಹೆಸರು ಬದಲಿಸಲು ಕಾಂಗ್ರೆಸ್ ಪ್ರಯತ್ನ. ರಾಮನ ಹೆಸರಿಗೆ ದೊಡ್ಡ ಶಕ್ತಿ ಇದೆ, ಜನ ಏನು ಬೇಕಾದರೂ ಸಾಧಿಸುತ್ತಾರೆ. ಜಿಲ್ಲೆಯ ಜನ ಹೆಸರು ಬದಲಾಯಿಸಿ ಎಂದು ಕೇಳಿದ್ರಾ? ಹೆಸರು ಬದಲಾವಣೆಯಲ್ಲೂ ಹೆಸರು ಮಾಡುತ್ತೇನೆ ಅಂದ್ರೆ ನಡೆಯಲ್ಲ. ನಿಮ್ಮ ತುಷ್ಟೀಕರಣ ರಾಜಕಾರಣವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದರು.

ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಹಿಂದಿನ ತಂತ್ರವೇನು? ಡಿಕೆಶಿ- ಎಚ್‌ಡಿಕೆ ನಡುವೆ ಮತ್ತೊಂದು ಸಮರಕ್ಕೆ ಮುನ್ನುಡಿಯಾಗುತ್ತಾ?

ರಾಮನಗರ ಜಿಲ್ಲೆ ಹೆಸರು ಬದಲಾವಣೆಯನ್ನು ಜನರು ಒಪ್ಪುವುದಿಲ್ಲ. ರಾಮನಗರ ಜಿಲ್ಲೆಯ ಜನರ ‌ಭಾವನೆಗೆ ಧಕ್ಕೆ ಆಗಿದೆ. ರಾಮನಗರ ಜಿಲ್ಲೆಯ ಅಭಿವೃದ್ಧಿ ಮಾಡಿಲ್ಲ. ಸಂಪೂರ್ಣ ಜಿಲ್ಲೆಯನ್ನ ಕಡೆಗಣಿಸಿದ್ದಾರೆ. ಜನ ಕಾಂಗ್ರೆಸ್ ಪಕ್ಷವನ್ನು ಒಪ್ಪಲ್ಲ, ಅವರ ನಿರ್ಣಯ ಕೂಡ ಒಪ್ಪಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಸಹ ವಿರೋಧಿಸುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಸಾವಿರಾರು ಜಮೀನು ಇಟ್ಟುಕೊಂಡು ನಾಮಕರಣ ಮಾಡುವುದೇ ಇವರ ದೊಡ್ಡ ಸಾಧನೆ. ಇವರದ್ದು ತುಷ್ಟೀಕರಣ ರಾಜಕಾರಣ. ರಾಮನಗರ ಜಿಲ್ಲೆಯಲ್ಲಿ ರಾಮ‌ ಇದ್ದಾನೆ ಎಂದು ಬದಲಾಯಿಸುತ್ತಿದ್ದಾರೆ. ದುಡ್ಡು ಜಾಸ್ತಿ ಸಿಗುತ್ತೆ ಅಂತ ಅಪ್ಪನ ಹೆಸರು‌ಕೂಡ ಬದಲಾಯಿಸಿಕೊಳ್ಳೋದಕ್ಕೆ ಹೋಗ್ತಿದ್ದಾರೆ. ಹಣ ಬಿಟ್ಟರೆ ಬೇರೇನೂ ಕಾಣಲ್ಲ. ಇದಕ್ಕೆ ಸಂಪೂರ್ಣ ವಿರೋಧ ಇದೆ. ಸೊಳ್ಳೆ ಗಳಿಗೆ ಸರಿಯಾದ ಔಷಧೀ ಹೋಡೆಯೋಕೆ ಆಗಿಲ್ಲ. ಭ್ರಷ್ಟಾಚಾರ ಬಿಟ್ಟರೆ ಬೇರೇನೂ ಗೊತ್ತಿಲ್ಲ. ವಿಚಾರ ಡೈವರ್ಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಅಂಬಾನಿ ಪುತ್ರನ ಮದುವೆಗೆ ಎಷ್ಟು ಚಂದ ರೆಡಿಯಾಗಿ ಬಂದ್ರು ನೋಡಿ ಜೆನಿಲಿಯಾ
ಅಂಬಾನಿ ಪುತ್ರನ ಮದುವೆಗೆ ಎಷ್ಟು ಚಂದ ರೆಡಿಯಾಗಿ ಬಂದ್ರು ನೋಡಿ ಜೆನಿಲಿಯಾ
ಅನಂತ್ ಅಂಬಾನಿ ಮದುವೆಗೆ ಕುಟುಂಬ ಸಮೇತ ಬಂದ ರಜನಿಕಾಂತ್​; ಸಿಕ್ಕಾಪಟ್ಟೆ ಜೋಶ್
ಅನಂತ್ ಅಂಬಾನಿ ಮದುವೆಗೆ ಕುಟುಂಬ ಸಮೇತ ಬಂದ ರಜನಿಕಾಂತ್​; ಸಿಕ್ಕಾಪಟ್ಟೆ ಜೋಶ್
ಹೋಟೆಲ್ ಮೆಟ್ಟಿಲು ಮೇಲೆ ಕೂತು ಶಾಲಾ ಮಕ್ಕಳಿಗೆ ಜಾಮೂನು ತಿನ್ನಿಸಿದ ಲಾಡ್
ಹೋಟೆಲ್ ಮೆಟ್ಟಿಲು ಮೇಲೆ ಕೂತು ಶಾಲಾ ಮಕ್ಕಳಿಗೆ ಜಾಮೂನು ತಿನ್ನಿಸಿದ ಲಾಡ್
ಮದುವೆ ದಿಬ್ಬಣದ ವೇಳೆ ಡೋಲು ವಾದ್ಯಕ್ಕೆ ಡ್ಯಾನ್ಸ್ ಮಾಡಿದ ನೀತಾ ಅಂಬಾನಿ
ಮದುವೆ ದಿಬ್ಬಣದ ವೇಳೆ ಡೋಲು ವಾದ್ಯಕ್ಕೆ ಡ್ಯಾನ್ಸ್ ಮಾಡಿದ ನೀತಾ ಅಂಬಾನಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲ ಆಡಳಿತ ಕಛೇರಿ ಮುಂದೆ ಸತ್ತ ಹಾವು ಇಟ್ಟು ಧರಣಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲ ಆಡಳಿತ ಕಛೇರಿ ಮುಂದೆ ಸತ್ತ ಹಾವು ಇಟ್ಟು ಧರಣಿ
ನೀರು ಬಿಡಲ್ಲ ಅಂತ ಸಿದ್ದರಾಮಯ್ಯ ಸರ್ಕಾರ ಖಚಿತ ನಿಲುವು ತೆಗೆದುಕೊಳ್ಳುತ್ತೋ?
ನೀರು ಬಿಡಲ್ಲ ಅಂತ ಸಿದ್ದರಾಮಯ್ಯ ಸರ್ಕಾರ ಖಚಿತ ನಿಲುವು ತೆಗೆದುಕೊಳ್ಳುತ್ತೋ?
ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ಅಶೋಕ್ , ಅಶ್ವಥ್ ಅನುಸರಿಸಿದ ವಿಧಾನ ಇದು!
ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ಅಶೋಕ್ , ಅಶ್ವಥ್ ಅನುಸರಿಸಿದ ವಿಧಾನ ಇದು!
ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತು ಉಪಹಾರ ಸೇವಿಸಿದ ಸಂತೋಷ ಲಾಡ್
ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತು ಉಪಹಾರ ಸೇವಿಸಿದ ಸಂತೋಷ ಲಾಡ್
ಯಡಿಯೂರಪ್ಪ, ವಿಜಯೇಂದ್ರ ಸತ್ಯ ಹರಿಶ್ಚಂದ್ರನ ವಂಶಸ್ಥರೇ? ಮೊಹಮ್ಮದ್ ನಲಪಾಡ್
ಯಡಿಯೂರಪ್ಪ, ವಿಜಯೇಂದ್ರ ಸತ್ಯ ಹರಿಶ್ಚಂದ್ರನ ವಂಶಸ್ಥರೇ? ಮೊಹಮ್ಮದ್ ನಲಪಾಡ್
ಮುಡಾ ಹಗರಣ ಬಿಜೆಪಿಯ ಸೃಷ್ಟಿ, ಅಧಿವೇಶನದಲ್ಲಿ ಉತ್ತರಿಸಲು ರೆಡಿ; ಶಿವಕುಮಾರ್
ಮುಡಾ ಹಗರಣ ಬಿಜೆಪಿಯ ಸೃಷ್ಟಿ, ಅಧಿವೇಶನದಲ್ಲಿ ಉತ್ತರಿಸಲು ರೆಡಿ; ಶಿವಕುಮಾರ್