AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಈ ಮಹಿಳೆ ಗಬಕ್ಕಂತ ಹಾವು ಹಿಡಿಯುವುದನ್ನು ನೋಡಿದರೆ ನಿಮ್ಮ ಎದೆ ಝಲ್ಲೆನ್ನುತ್ತದೆ! ವಿಡಿಯೋ ನೋಡಿ 

 ಈ ಮಹಿಳೆ ಗಬಕ್ಕಂತ ಹಾವು ಹಿಡಿಯುವುದನ್ನು ನೋಡಿದರೆ ನಿಮ್ಮ ಎದೆ ಝಲ್ಲೆನ್ನುತ್ತದೆ! ವಿಡಿಯೋ ನೋಡಿ 

ಸಾಧು ಶ್ರೀನಾಥ್​
|

Updated on: Jul 26, 2024 | 5:45 PM

Share

Woman Snake catcher: ಯುವತಿ ಆ ಹಾವನ್ನು ಹಿಡಿಯುವ ರೀತಿ ನೋಡಿದರೆ... ಹಾವು ಹಿಡಿಯುವುದರಲ್ಲಿ ಆಕೆ ಎಷ್ಟು ಪರ್ಫೆಕ್ಟ್ ಆಗಿದ್ದಾಳೆ ಎಂಬುದು ಗೊತ್ತಾಗುತ್ತದೆ. ಬಿಲಾಸ್‌ಪುರದ ಅಜಿತಾ ​ ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಹಾವು ಹಿಡಿಯುವುದು ಈಕೆಯ ವೃತ್ತಿಯಂತೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬಹುತೇಕ ವಿಡಿಯೋಗಳು ಹಾವುಗಳಿಗೆ ಸಂಬಂಧಿಸಿದವುಗಳಾಗಿವೆ. ಹಾವುಗಳ ವೀಡಿಯೋಗಳು ಕೆಲವೇ ಸಮಯದಲ್ಲಿ ವೈರಲ್ ಆಗುತ್ತವೆ. ಅಲ್ಲದೆ ಮಳೆಗಾಲವಾದ್ದರಿಂದ ಹಾವು, ಕ್ರಿಮಿಕೀಟಗಳು ಮನೆ, ಕಚೇರಿಗಳಿಗೆ ಹೆಚ್ಚು ನುಗ್ಗುತ್ತವೆ. ಆದರೆ ಅವು ಕಾಣದೇ ಇರುವ ತನಕ ಯಾವುದೇ ಹಾನಿ ಇಲ್ಲ. ಆದರೆ ಒಮ್ಮೆ ನೋಡಿದರೆ ಎಂತಹವರೇ ಆಗಲಿ ಭಯಭೀತರಾಗುವುದು ಖಚಿತ. ಅವು ನಮ್ಮ ಮೇಲೆ ದಾಳಿ ಮಾಡುತ್ತವೆ ಎಂಬುದು ನಮ್ಮ ಆತಂಕ ಚಿಂತೆಗೆ ಕಾರಣವಾಗಿಬಿಡುತ್ತದೆ. ಅತ್ತ ಹಾವುಗಳೂ ಸಹ ಎಲ್ಲಿ ಮನುಷ್ಯರೇ ತನ್ನ ಮೇಲೆ ದಾಳಿ ಮಾಡಿಬಿಡತ್ತಾರೋ ಎಂದು ಚಿಂತಿಸಬಹುದು. ಇತ್ತೀಚೆಗೆ ಹಾವಿನ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾವೊಂದು ಕಚೇರಿಗೆ ಬಂದಿದೆ. ಏನು ಕೆಲಸವಿತ್ತು, ಕಚೇರಿಯಲ್ಲಿ ಕಂಪ್ಯೂಟರುಗಳ ಮಧ್ಯೆ ಹರಿದಾಡಿದೆ. ಕಂಪ್ಯೂಟರ್ ಹಿಂದೆ ಅಡಗಿಕೊಳ್ಳುವುದು ಕಂಡುಬಂದಿದೆ. ಅದನ್ನು ನೋಡಿ ಬೆಚ್ಚಿಬಿದ್ದ ಜನರು ಕೂಡಲೇ ಹಾವು ಹಿಡಿಯುವವರಿಗೆ ಸಂದೇಶ ರವಾನಿಸಿದ್ದಾರೆ. ಆಗ ಮಹಿಳೆಯೊಬ್ಬರು ಪ್ರತ್ಯಕ್ಷರಾಗಿದ್ದಾರೆ. ಬಂದ ಮಹಿಳೆ ಸೋರೆಕಾಯಿಯನ್ನು ಕೈಯಲ್ಲಿ ಹಿಡಿದಂತೆ ನಗುತ್ತಾ ಹಾವನ್ನು ಸುಲಭವಾಗಿ ಹಿಡಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬರಿಗೈಯಿಂದಲೇ ಸಾವಕಾಶವಾಗಿ/ ಕರಾರುವಕ್ಕಾಗಿ ಹಿಡಿದುಬಿಟ್ಟಿದ್ದಾರೆ. ಮಹಿಳೆಯ ಕೈಯಲ್ಲಿ ಹಾವನ್ನು ಕಂಡು ಅಲ್ಲಿದ್ದವರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಯುವತಿ ಆ ಹಾವನ್ನು ಹಿಡಿಯುವ ರೀತಿ ನೋಡಿದರೆ… ಹಾವು ಹಿಡಿಯುವುದರಲ್ಲಿ ಆಕೆ ಎಷ್ಟು ಪರ್ಫೆಕ್ಟ್ ಆಗಿದ್ದಾಳೆ ಎಂಬುದು ಗೊತ್ತಾಗುತ್ತದೆ. ಬಿಲಾಸ್‌ಪುರದ ಅಜಿತಾ ​ ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಹಾವು ಹಿಡಿಯುವುದು ಈಕೆಯ ವೃತ್ತಿಯಂತೆ. ಆಕೆಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳಿವೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ಈ ವಿಡಿಯೋವನ್ನೂ ನೀವೂ ಒಮ್ಮೆ ನೋಡಿ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದ ಮೃತ ಮಗನನ್ನು ಸಮಾರಂಭದಲ್ಲಿ ನೋಡಿ ಹೆತ್ತವರು ಶಾಕ್ – ಕರುಳು ಚುರುಕ್ ಎನ್ನುವ ವೀಡಿಯೊ ನೋಡಿ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ