ಶಿವಕುಮಾರ್ ನೋಟೀಸ್ ಜಾರಿ ಮಾಡ್ತೀನಿ ಅಂದಾಕ್ಷಣ ಶಾಸಕ ಇಕ್ಬಾಲ್ ಹುಸ್ಸೇನ್ ಮುಖದಲ್ಲಿ ಪ್ರೇತಕಳೆ!
ಮಾಧ್ಯಮದವರಿಂದ ಹೇಗಾದರೂ ತಪ್ಪಿಸಿಕೊಂಡೇನು ಎಂಬ ಚಡಪಡಿಕೆ ಇಕ್ಬಾಲ್ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತಿತ್ತು. ನೋಟೀಸ್ ಜಾರಿಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದ ಬಳಿಕ ನಿಮ್ಮ ನಿಲುವಿನಲ್ಲಿ ಬದಲಾವಣೆಯಾಗುತ್ತಾ ಅಂತ ನಮ್ಮ ವರದಿಗಾರ ಕೇಳಿದರೆ ಯಾವ ಬದಲಾವಣೆಯೂ ಇಲ್ಲ, ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಇಕ್ಬಾಲ್ ಹುಸ್ಸೇನ್ ಹೇಳಿದರು.
ಬೆಂಗಳೂರು, ಜುಲೈ 1: ಅವನ್ಯಾರು ಮಾತಾಡೋಕ್ಕೆ, ನೋಟೀಸ್ ಜಾರಿ ಮಾಡ್ತೀನಿ ಅಂತ ಡಿಕೆ ಶಿವಕುಮಾರ್ (DK Shivakumar) ಹೇಳಿದಾಕ್ಷಣ ರಾಮನಗರ ಶಾಸಕ ಇಕ್ಬಾಲ್ ಹುಸ್ಸೇನ್ ಮುಖದಲ್ಲಿ ಪ್ರೇತಕಳೆ. ನಮ್ಮ ವರದಿಗಾರ ಕೇಳುವ ಪ್ರಶ್ನೆಗಳಗೆ ಆವರಲ್ಲಿ ಉತ್ತರವೇ ಇಲ್ಲ. ಇವತ್ತು ರಂದೀಪ್ ಸುರ್ಜೆವಾಲಾ ಅವರೊಂದಿಗೆ ಮಾತಾಡಲು ಇಕ್ಬಾಲ್ ಕೆಪಿಸಿಸಿ ಕಚೇರಿಗೆ ಬಂದಾಗ ಸಿಎಂ ಬದಲಾವಣೆ ವಿಚಾರ ಮಾತಾಡ್ತೀರಾ ಅಂತ ಟಿವಿ9 ವರದಿಗಾರ ಕೇಳಿದರೆ, ನೋಡೋಣ, ಮಾತಾಡೋಣ ಅಂತ ಕ್ಷೀಣಧ್ವನಿಯಲ್ಲಿ ಪ್ರತಿಕ್ರಿಯೆ! ಅವರನ್ನು ಮಾಧ್ಯಮದವರು ಸುತ್ತುವರಿದಿದ್ದು ಅಚ್ಚರಿಯ ವಿಷಯವೇನೂ ಅಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಅವರು ಮಾಧ್ಯಮಗಳಿಗೆ ನೀಡುತ್ತಿದ್ದ ಹೇಳಿಕೆಗಳಲ್ಲಿ ಬರೀ ಶಿವಕುಮಾರ್ ಇಷ್ಟರಲ್ಲೇ ಸಿಎಂ ಆಗಲಿದ್ದಾರೆ ಅನ್ನೋದು ಪ್ರಮುಖವಾಗಿರುತಿತ್ತು.
ಇದನ್ನೂ ಓದಿ: ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಸಂಚಲನ ಮೂಡಿಸಿದ ಕೈ ಶಾಸಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ