ಗಾಂಜಾ, ಕುಡಿತ ಬಿಡು ಮದುವೆಯಾಗ್ತೀನಿ ಅಂತ ಯುವತಿ ಅಂದಿದ್ದಕ್ಕೆ ಯುವಕ ಮೈಯೆಲ್ಲ ಕುಯ್ದುಕೊಂಡ!
ನಮ್ಮ ಪೊಲೀಸ್ ವ್ಯವಸ್ಥೆಗೆ ಏನಾಗಿದೆ? ಯುವತಿ ಹೋಗಿ ದೂರು ಸಲ್ಲಿಸಿದರೂ ಮದ್ಯ ಮತ್ತು ಡ್ರಗ್ ವ್ಯಸನಿಯನ್ನು ಸ್ಟೇಶನ್ಗೆ ಕರೆಸಿ ನಾಲ್ಕು ಬಿಗಿದು ಸರಿದಾರಿಗೆ ತರುವ ಬದಲು ಯುವತಿಯನ್ನೇ ಬೈದು ಕಳಿಸುತ್ತಾರಂತೆ. ಪೊಲೀಸರು ಇರೋದು ಈ ಕೆಲಸಕ್ಕಾ? ಅಬಲೆ ಯುವತಿಯೊಬ್ಬಳು ಸಹಾಯ ಕೇಳಿಕೊಂಡು ಹೋದರೆ ಅದನ್ನು ಪೊಲೀಸರು ನೀಡುತ್ತಿಲ್ಲವೆಂದರೆ ಏನರ್ಥ? ಗೃಹ ಸಚಿವರು ಶಿವಮೊಗ್ಗ ಪೊಲೀಸರಿಗೆ ಕೊಂಚ ಬುದ್ಧಿ ಹೇಳಬಹುದೇ?
ಶಿವಮೊಗ್ಗ, ಆಗಸ್ಟ್ 13: ಕೈಲಾಗದವನು ಮೈಯೆಲ್ಲ ಪರಚಿಕೊಂಡನಂತೆ, ಆದರೆ ಶಿವಮೊಗ್ಗದಲ್ಲಿ ತಮಿಳುನಾಡು ಮೂಲದ ಯುವಕನೊಬ್ಬ ಮೈಯೆಲ್ಲ ಕುಯ್ದುಕೊಂಡಿದ್ದಾನೆ! ವಿಷಯವೇನೆಂದರೆ ಇಲ್ಲಿ ಮಾತಾಡುತ್ತಿರುವ ಯುವತಿ ಮತ್ತು ದೇಹವನ್ನು ಅಲ್ಲಲ್ಲಿ ಕುಯ್ದುಕೊಂಡಿರುವ ಯುವಕ ಎರಡು ವರ್ಷಗಳಿಂದ ಲವ್ ಮಾಡುತ್ತಿದ್ದಾರೆ ಆಥವಾ ಮಾಡುತ್ತಿದ್ದರು, ಈಗ ಇಲ್ಲ. ಯುವತಿ ಹೇಳುವ ಪಪ್ರಕಾರ ಅವನಿಗೆ ಕುಡಿತ (boozing), ಗಾಂಜಾದ ದುಶ್ಚಟಗಳಿವೆ. ಇವನು ತನ್ನನ್ನು ಸಾಕಲಾರ ಮತ್ತು ನೆಮ್ಮದಿಯಿಂದ ಬದುಕಲು ಬಿಡಲಾರ ಅಂತ ಮನವರಿಕೆ ಮಾಡಿಕೊಂಡಿರುವ ಯುವತಿ ಬ್ರೇಕಪ್ ಮಾಡಿಕೊಂಡು, ನಿನ್ನ ದಾರಿ ನೀನು ನೋಡ್ಕೋ ಅಂದಿದ್ದಾಳೆ. ರೊಚ್ಚಿಗೆದ್ದ ಯುವಕ ನಿನ್ನೆ ರಾತ್ರಿ ಹರಿತವಾದ ಆಯುಧವೊಂದನ್ನು ಈಕೆ ಚುಚ್ಚಲು ಬಂದಿದ್ದಾನೆ, ನೆರೆಹೊರೆಯವರು ಬುದ್ಧಿಹೇಳಿದ ನಂತರ ವಾಪಸ್ಸು ಹೋದವನು ಬೆಳಗ್ಗೆ ಯುವತಿಯ ಮನೆಮುಂದೆ ಪುನಃ ಬಂದು ಈ ಬಾರಿ ತಾನೇ ಮೈಯೆಲ್ಲ ಕುಯ್ದುಕೊಂಡು ಆಸ್ಪತ್ರೆ ಸೇರಿದ್ದಾನೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಹುಡುಗಿಯರ ಜತೆ ಲವ್ವಿಡವ್ವಿ, ಗರ್ಭಿಣಿ ಮಾಡಿ ಕೈಬಿಟ್ಟ ಜಿಮ್ ಟ್ರೈನರ್ ಮನೆಗೆ ಬಿತ್ತು ಬೆಂಕಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

