ರಾಜಣ್ಣ ಸ್ಥಾನದಲ್ಲಿ ಜಮೀರ್ ಅಹ್ಮದ್ ಇದ್ದಿದ್ದರೆ ಸಿದ್ದರಾಮಯ್ಯ ವಜಾ ಮಾಡುತ್ತಿದ್ದರೇ? ಬಿ ಶ್ರೀರಾಮುಲು
ಹೈದರಾಬಾದ್ ಕರ್ನಾಟಕ ಭಾಗದ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಗೆ ಜಮೀರ್ ಅಹ್ಮದ್ ಮತ್ತು ವಿಜಯನಗರ ಜಿಲ್ಲೆಗೆ ರಹೀಂ ಖಾನ್ ರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ನಾನಾ ಭಾಗಗಳಲ್ಲಿ ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತಿದೆ, ಇದು ನಿಲ್ಲಬೇಕು, ಒಬ್ಬೇಒಬ್ಬ ಹಿಂದೂನ ಕೊಲೆಯಾಗಬಾರದು ಎಂದು ಶ್ರೀರಾಮುಲು ಹೇಳಿದರು.
ಬೆಂಗಳೂರು, ಆಗಸ್ಟ್ 13: ಮಾಜಿ ಸಚಿವ ಬಿ ಶ್ರೀರಾಮುಲು ಇವತ್ತು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀಕ್ಷ್ಣ ಪ್ರಹಾರ ನಡೆಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂಗಳ ಕೊಲೆ ಮತ್ತು ಕೆಎನ್ ರಾಜಣ್ಣ (KN Rajanna) ಅವರನ್ನು ಸಂಪುಟದಿಂದ ವಜಾ ಮಾಡಿರುವುದಕ್ಕೆ ರಾಮುಲು ಕಿಡಿ ಕಾರಿದರು. ಯಾವ ಆಧಾರದಲ್ಲಿ ರಾಜಣ್ಣ ಅವರನ್ನು ಸಿದ್ದರಾಮಯ್ಯ ವಜಾ ಮಾಡಿದ್ದಾರೆ? ಸಹಕಾರಿ ಕ್ಷೇತ್ರದಲ್ಲಿ ರಾಜಣ್ಣ ಕ್ರಾಂತಿ ಮಾಡಿದ್ದಾರೆ, ಅವರ ಸ್ಥಾನದಲ್ಲಿ ಜಮೀರ್ ಅಹ್ಮದ್ ಇದ್ದಿದ್ದರೆ ಸಿದ್ದರಾಮಯ್ಯ ವಜಾ ಮಾಡುತ್ತಿದ್ದರೆ? ಎಂದು ಪ್ರಶ್ನಿಸಿದ ಶ್ರೀರಾಮುಲು ಅವರು ಮಾಡಿದ ತಪ್ಪೇನು ಅಂತ ಕೇಳಿದರು. ಆದರೆ ರಾಜಣ್ಣ ಅವರು ಹೆದರುವ ಅವಶ್ಯಕತೆಯಿಲ್ಲ ಅವರ ಜೊತೆ ನಾವಿದ್ದೇವೆ ಎಂದು ಮಾಜಿ ಸಚಿವ ಹೇಳಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಏಕನಾಥ ಶಿಂಧೆ ಎಪಿಸೋಡ್ ಮರುಕಳಿಸಿದರೆ ಯಾರೂ ಆಶ್ಚರ್ಯಪಡಬೇಕಿಲ್ಲ: ಬಿ ಶ್ರೀರಾಮುಲು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

