ರೆಡ್ಡಿ ಮತ್ತು ನನ್ನ ನಡುವೆ ಯಾವುದೇ ಗೊಂದಲವಿಲ್ಲ, ಪಕ್ಷದ ಎಲ್ಲ ನಾಯಕರು ಒಗ್ಗೂಡಬೇಕಿದೆ: ಬಿ ಶ್ರೀರಾಮುಲು
ಪಕ್ಷದವರೆಲ್ಲ ಒಂದಾಗಬೇಕು ಎಂದು ಶ್ರೀರಾಮುಲು ಒಗ್ಗಟ್ಟಿನ ಮಂತ್ರ ಜಪಿಸುತ್ತಾರೆ. ಎಲ್ಲರೂ ಒಂದಾಗಿ ಜನರಲ್ಲಿ ವಿಶ್ವಾಸ ತುಂಬಬೇಕು ಆಗಲೇ ಬಿಜೆಪಿ ಪುನಃ ಅಧಿಕಾರಕ್ಕೆ ಬರೋದು ಸಾಧ್ಯ ಅಂತ ಅವರು ಹೇಳೋದ್ರಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಕೆಎಸ್ ಈಶ್ವರಪ್ಪನವರ ಉಲ್ಲೇಖ ಕೂಡ ಇದೆಯಾ ಅಂತ ಗೊಂದಲವೇರ್ಪಡುತ್ತದೆ. ಶ್ರೀರಾಮುಲು ಮಾತಾಡೋದೇ ಹಾಗೆ, ಸ್ಟಷ್ಟವಾಗಿ ಯಾವುದನ್ನೂ ಹೇಳಲ್ಲ.
ಗದಗ, ಜುಲೈ 17: ಗಾಲಿ ಜನಾರ್ಧನರೆಡ್ಡಿ (Gali Janardhan Reddy) ಜೊತೆ ಪುನಃ ದೋಸ್ತಿಯ ಬಗ್ಗೆ ಮಾಜಿ ಸಚಿವ ಬಿ ಶ್ರೀರಾಮುಲು ಯಾವುದನ್ನು ಸ್ಪಷ್ಟವಾಗಿ ಹೇಳಲಿಲ್ಲ. ನಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ, ಅವರು ಅದೊಂದು ದಿನ ನನ್ನ ವಿರುದ್ಧ ಮಾತಾಡಿದ್ದರು ಮತ್ತೂ ನಾನೂ ಒಂದು ಮಾತಾಡಿದ್ದೆ, ಅಷ್ಟೇ ನಡೆದಿದ್ದು, ಅದಾದ ಮೇಲೆ ಅವರು ನನ್ನ ವಿರುದ್ಧ ಮಾತಾಡಿಲ್ಲ, ನಾನು ಅವರ ಬಗ್ಗೆ ದೂಷಣೆ ಮಾಡಿಲ್ಲ, ನಾನು ಮುರ್ಕೊಂಡು ಬೀಳೋದಾದರೆ ಮುರ್ಕೊಂಡು ಬೀಳ್ತೀನಿ ಕೂಡೋ ಹಾಗಿದ್ರೆ ಕೂಡಿ ಬಾಳ್ತೀನಿ ಅಂತ ಒಗಟಿನಲ್ಲಿ ಮಾತಾಡಿದರು. ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ, ಕೇವಲ ನಾವಿಬ್ಬರು ಮಾತ್ರ ಒಂದಾಗೋದು ಅಲ್ಲ, ಪಕ್ಷದ ಎಲ್ಲ ನಾಯಕರನ್ನು ಒಂದುಗೂಡಿಸಬೇಕಿದೆ, ನಮ್ಮಲ್ಲಿ ಪಕ್ಷದ ಸಂಘಟನೆ ಮುಖ್ಯವೇ ಹೊರತು ವೈಯಕ್ತಿಕ ಸಂಬಂಧಗಳಲ್ಲ ಎಂದು ಶ್ರೀರಾಮುಲು ಹೇಳಿದರು.
ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆಯಿಂದ ರಾಜ್ಯದ ಹಿಂದೂವಾದಿಗಳಿಗೆ ಬಹಳ ನೋವಾಗಿದೆ: ಬಿ ಶ್ರೀರಾಮುಲು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ