ಮಂಗಳೂರು ಹೊರವಲಯದಲ್ಲಿ ಸತತ ಮಳೆಯಿಂದ ಜಲಸ್ಫೋಟ, ಗುಡ್ಡಕುಸಿತ; ಅಪಾಯದಲ್ಲಿ ಹಲವು ಮನೆಗಳು
ನಮ್ಮ ಮಂಗಳೂರು ವರದಿಗಾರ ಮಾತಾಡಿರುವ ವ್ಯಕ್ತಿಯೋರ್ವರ ಮನೆಯೂ ಸೇರಿದಂತೆ ಗುಡ್ಡದ ಕೆಳಭಾಗದಲ್ಲಿರುವ 10 ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಆತಂಕ ಹುಟ್ಟಿಸುವ ಸಂಗತಿಯೆಂದರೆ, ಮಳೆ ಸುರಿಯುವುದು ನಿಲ್ಲುತ್ತಿಲ್ಲ ಮತ್ತು ಗುಡ್ಡ ಕುಸಿತದ ಅಪಾಯ ಪ್ರತಿಕ್ಷಣ ಹೆಚ್ಚುತ್ತಿದೆ. ಮನೆಗಳಲ್ಲಿ ವಾಸವಾಗಿರುವ ಜನಕ್ಕೆ ಸ್ಥಳಾಂತರ ಮಾಡುವ ಸೂಚನೆಯನ್ನು ಜಿಲ್ಲಾಡಳಿತ ನೀಡಿಲ್ಲವಂತೆ.
ಮಂಗಳೂರು, ಜುಲೈ 17: ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಮಳೆ ಒಂದೇ ಸಮನೆ ಸುರಿಯುತ್ತಿರುವುದನ್ನು ವರದಿ ಮಾಡುತ್ತಿದ್ದೇವೆ, ಎಡೆಬಿಡದೆ ಸುರಿಯುತ್ತಿರುವ ಮಳೆ ಅನಾಹುತಗಳಿಗೂ ಕಾರಣವಾಗುತ್ತಿದೆ. ಮಂಗಳೂರು ಹೊರವಲಯದಲ್ಲಿರುವ ಯಯ್ಯಾಡಿ ಕೊಂಚಾಡಿಯಲ್ಲಿ ಭೀಕರ ಮಳೆಯ ಕಾರಣ ಜಲಸ್ಫೋಟವುಂಟಾಗಿ ಗುಡ್ಡ ಕುಸಿದಿದೆ. ದೃಶ್ಯದಲ್ಲಿ ಕಾಣುತ್ತಿರುವ ಮನೆ ಹಿಂಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ಮಣ್ಣು ಮತ್ತು ಗಿಡಗಳು ಉರುಳಿ ಬಂದು ಮನೆಯ ಸ್ಟೇರ್ ಕೇಸ್ ಭಾಗಕ್ಕೆ ಹಾನಿಯನ್ನುಂಟು ಮಾಡಿವೆ. ಅದೃಷ್ಟವಶಾತ್ ಮನೆಯಲ್ಲಿರುವವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಕಲ್ಲು, ಮಣ್ಣು ಮತ್ತು ಗಿಡಗಳು ಮನೆ ಅಂಗಳಕ್ಕೆ ನುಗ್ಗಿ ಬಂದಿರುವುದನ್ನು ಇಲ್ಲಿ ನೋಡಬಹುದು.
ಇದನ್ನೂ ಓದಿ: ವಯನಾಡಿನಲ್ಲಿ ಗುಡ್ಡ ಕುಸಿತ ದುರಂತಕ್ಕೆ ಮುನ್ನ ಬದಲಾಗಿತ್ತು ನದಿ ನೀರಿನ ಬಣ್ಣ; ಇದಾಗಿತ್ತೇ ಅಪಾಯದ ಸೂಚನೆ?
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

