ಮೊಂಟೆಪದವಿನಲ್ಲಿ ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರಿನ ಮೊಂಟೆಪದವು ಎಂಬಲ್ಲಿ ಗುಡ್ಡ ಕುಸಿದು ಮೂವರು ಮೃತಪಟ್ಟ ದುರಂತ ನಡೆದಿದೆ. ಇನ್ನೂ ಹೆಚ್ಚಿನ ಗುಡ್ಡ ಕುಸಿಯುವ ಭೀತಿ ಶುರುವಾಗಿದೆ. ಎರಡು ಮನೆಗಳು ಮತ್ತು ದೈವಸ್ಥಾನ ಅಪಾಯದಲ್ಲಿದೆ. ಸ್ಥಳೀಯರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ರಸ್ತೆಯ ಮೇಲೆ ಗುಡ್ಡದ ಮಣ್ಣು ಬಿದ್ದಿದೆ. ವಿಡಿಯೋ ನೋಡಿ.
ಮಂಗಳೂರು, ಜೂನ್ 01: ನಗರದ ಮೊಂಟೆಪದವು ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು (Landslide) ಮೂವರು ಸಾವನ್ನಪ್ಪಿದ್ದರು. ಇದೀಗ ದುರಂತ ನಡೆದ ಸ್ಥಳದ ಪಕ್ಕದಲ್ಲೇ ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಎರಡು ಮನೆ ಹಾಗೂ ದೈವಸ್ಥಾನ ಅಪಾಯದಲ್ಲಿದ್ದು, ಎರಡು ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗುಡ್ಡದ ಮೇಲಿನ ಮಣ್ಣು ಕುಸಿಯುತ್ತಲಿದ್ದು, ಈಗಾಗಲೇ ರಸ್ತೆ ಮೇಲೆ ಬಿದ್ದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
