ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಈ ಮೊದಲು ಇನ್ಸ್ಟಾಗ್ರಾಮ್ನಲ್ಲಿ ಕೂಡ ರಚಿತಾ ರಾಮ್ ಅವರು ಈ ವಿವಾದದ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದರು. ಈಗ ಮಾಧ್ಯಮಗಳ ಎದುರು ಮತ್ತೊಮ್ಮೆ ಅದೇ ವಿಷಯದ ಬಗ್ಗೆ ಮಾತನಾಡಿದ್ದಾರೆ. ಕಮಲ್ ಹಾಸನ್ ಅವರು ‘ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿದ್ದಕ್ಕೆ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಭಾಷೆ ಬಗ್ಗೆ ಕಮಲ್ ಹಾಸನ್ (Kamal Haasan) ಅವರು ಆಡಿದ ಮಾತುಗಳನ್ನು ಕನ್ನಡ (Kannada) ಚಿತ್ರರಂಗದ ಸೆಲೆಬ್ರಿಟಿಗಳು ಖಂಡಿಸಿದ್ದಾರೆ. ನಟಿ ರಚಿತಾ ರಾಮ್ ಕೂಡ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ನನ್ನ ಪ್ರೀತಿ ನನ್ನ ಭಾಷೆ. ಹಾಗಂತ ಬೇರೆ ಭಾಷೆ ಬಗ್ಗೆ ನಾನು ಎಂದಿಗೂ ಕಮೆಂಟ್ ಮಾಡಲ್ಲ. ಎಲ್ಲ ಭಾಷೆಯ ಹಾಡು ಕೇಳುತ್ತೇನೆ, ಎಲ್ಲ ಭಾಷೆ ಸಿನಿಮಾ ನೋಡುತ್ತೇನೆ. ಆದರೆ ನನ್ನ ಭಾಷೆಯೇ ನನಗೆ ಮುಖ್ಯ. ಮಾತೃಭಾಷೆಯನ್ನು ಮರೆಯಬಾರದು. ಈ ಮಾತು ನನಗೂ ಅನ್ವಯ’ ಎಂದು ರಚಿತಾ ರಾಮ್ (Rachita Ram) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

