ಸಿದ್ದರಾಮಯ್ಯ ಸಿಎಂ ಸ್ಥಾನ ನಿಟ್ಟುಕೊಡಲ್ಲ, ಹಾಗಾಗಿ ಶಿವಕುಮಾರ್ ಸಿಎಂ ಆಗಲ್ಲ: ಬಿ ಶ್ರೀರಾಮುಲು
ಶಿವಕುಮಾರ್ ಮುಖ್ಯಮಂತ್ರಿ ಅಗಲ್ಲ ಅಂತಲೂ ಶ್ರೀರಾಮುಲು ಹೇಳುತ್ತಾರೆ. ಅವರು ಮುಖ್ಯಮಂತ್ರಿಯಾಗಬೇಕಾದರೆ ಈಗಿರುವ ಸಿಎಂ ಸಿದ್ದರಾಮಯ್ಯ ಸ್ಥಾನ ಬಿಟ್ಟಕೊಡಬೇಕು,ಆದರೆ ಸಿದ್ದರಾಮಯ್ಯ ಯಾವತ್ತೂ ಹಾಗೆ ಮಾಡಲಾರರು, ರಂದೀಪ್ ಸುರ್ಜೆವಾಲಾ ಶಾಸಕರ ಅಭಿಪ್ರಾಯಗಳನ್ನು ಹೊತ್ತು ದೆಹಲಿಗೆ ಹೋದ ಬಳಿಕ ಹೈಕಮಾಂಡ್ ಸಿದ್ದರಾಮಯ್ಯರನ್ನು ಬದಲಾಯಿಸಬೇಕಾ ಇಲ್ಲವಾ ಅಂತ ನಿರ್ಣಯಿಸುತ್ತದೆ ಎಂದು ಶ್ರೀರಾಮುಲು ಹೇಳಿದರು.
ಬಳ್ಳಾರಿ, ಜುಲೈ 9: ಮಾಜಿ ಸಚಿವ ಬಿ ಶ್ರೀರಾಮುಲು ಮಾತ್ರವಲ್ಲ, ನಮ್ಮ ರಾಜಕಾರಣಿಗಳೇ ಹಾಗೆ, ಹಿಂದೆ ಆಡಿದ ಮಾತು ಅವರಿಗೆ ನೆನಪಿರೋದಿಲ್ಲ, ಆವೇಗದಲ್ಲಿ ಏನೋ ಮಾತಾಡಿಬಿಡುತ್ತಾರೆ, ನಂತರ ಅದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡುತ್ತಾರೆ. ಶ್ರೀರಾಮುಲು ಹಿಂದೊಮ್ಮೆ ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಕಾಂಗ್ರೆಸ್ ನಿಂದ ಹೊರಬಂದು ಬಿಜೆಪಿ ಬೆಂಬಲದಿಂದ ಸರ್ಕಾರ ರಚಿಸುತ್ತಾರೆ ಅಂತ ಹೇಳಿದ್ದರು, ಈಗ ಬೇರೆ ಮಾತಾಡ್ತೀರಲ್ಲ ಸರ್ ಅಂತ ಮಾಧ್ಯಮದವರು ಹೇಳಿದಾಗ, ಮುಂದೇನಾಗುತ್ತೋ ಅಂತ ನೋಡೋಣ, ಆದರೆ ನಾನು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತ, ಶಿವಕುಮಾರ್ಗೆ ತಮ್ಮ ಪಕ್ಷ ಬೆಂಬಲ ನೀಡುತ್ತದೋ ಇಲ್ಲವೊ ಅನ್ನೋದನ್ನು ನಿರ್ಧರಿಸಲಾರೆ, ಪಕ್ಷದ ವರಿಷ್ಠರಿದ್ದಾರೆ, ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶ್ರೀರಾಮುಲು ಹೇಳಿದರು.
ಇದನ್ನೂ ಓದಿ: ಬಸನಗೌಡ ಯತ್ನಾಳ್ ಬಗ್ಗೆ ಹೇಳಿಕೆ ನೀಡದಿರಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ: ಬಿ ಶ್ರೀರಾಮುಲು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ