ಬಸನಗೌಡ ಯತ್ನಾಳ್ ಬಗ್ಗೆ ಹೇಳಿಕೆ ನೀಡದಿರಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ: ಬಿ ಶ್ರೀರಾಮುಲು
ಬಸನಗೌಡ ಯತ್ನಾಳ್ ಅವರ ಉಚ್ಚಾಟನೆಯನ್ನು ರಿವೋಕ್ ಮಾಡುವ, ಅವಧಿಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆಯಾ? ಎಂದು ಕೇಳಿದರೆ ಶ್ರೀರಾಮುಲು, ಉತ್ತರ ಪ್ರದೇಶದ ಬಿಜೆಪಿ ನಾಯಕಿ ಉಮಾ ಭಾರತಿಯವರನ್ನು ಸಹ 6-ವರ್ಷ ಅವಧಿಗೆ ಉಚ್ಚಾಟನೆ ಮಾಡಲಾಗಿತ್ತು, ಅವರು ಉಚ್ಚಾಟನೆ ಅವಧಿ ಮುಗಿಸಿಕೊಂಡು ಪಕ್ಷಕ್ಕೆ ವಾಪಸ್ಸು ಬಂದಾಗ ಬಹಳ ದಣಿದಿದ್ದರು, ಕ್ರಿಯಾಶೀಲತೆ ಮಾಯವಾಗಿತ್ತು ಎಂದರು.
ಬೆಂಗಳೂರು, ಮಾರ್ಚ್ 31: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬಗ್ಗೆ ಮಾತಾಡಲು ಇಷ್ಟಪಡಲಿಲ್ಲ. ಯತ್ನಾಳ್ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜಿಪಿ ಮುಖಂಡರು ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ, ಕಾಂಗ್ರೆಸ್ ಆಧಿಕಾರಕ್ಕೆ ಬಂದಾಗಿನಿಂದ ಅಗತ್ಯ ಬೆಲೆಗಳು ಒಂದೇ ಸಮನೆ ಮೇಲೇರುತ್ತಿವೆ, ರೈತರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ, ರೈತ ಬೆಳೆಯುವ ಬೆಳೆಗಳ ಬೆಂಬಲ ದರ ನಿಗದಿ ಪಡಿಸುವುದು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಅಂತ ಹೇಳಿ, ಬಸನಗೌಡ ಯತ್ನಾಳ್ ಅವರ ಬಗ್ಗೆ ಹೇಳಿಕೆ ನೀಡದಿರಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ ಎಂದರು.
ಇದನ್ನೂ ಓದಿ: ಈ ಜನ್ಮದಲ್ಲಲ್ಲ, ಮುಂದಿನ ಜನ್ಮದಲ್ಲೂ ಮುಸಲ್ಮಾನರ ಪಕ್ಷ ಕಾಂಗ್ರೆಸ್ ಸೇರುವುದಿಲ್ಲ: ಬಸನಗೌಡ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ