ಸಚಿವ ಎಂಪಿ ಪಾಟೀಲ್ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ವಿಜಯಪುರ ತಾಲೂಕಿನ ಕತಕನಹಳ್ಳಿಯಲ್ಲಿರು ಶ್ರೀ ಗುರು ಚಕ್ರವರ್ತಿ ಸದಾಶಿವ ಮಠಕ್ಕೆ ಇಂದು (ಮಾರ್ಚ್ 31) ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಇಂದು ಭೇಟಿ ನೀಡಿ. ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಇನ್ನು ಈ ವೇಳೆ ಮಠದ ಪೀಠಾಧಿಪತಿ ಶ್ರೀ ಶಿವಯ್ಯ ಸ್ವಾಮೀಜಿ ಮಠದ ಕೊಠಡಿಯೊಳಗೆ ಹೋಗಿ ಚಿನ್ನದ ಉಂಗುರ ತಂದು ಸಚಿವ ಎಂಬಿ ಪಾಟೀಲ್ ಗೆಹಾಕಿ ಆರ್ಶಿವಾದ ಮಾಡಿದರು. ನಂತರ ಸಿಹಿ ತಿನ್ನಿಸಿ ಶುಭ ಹಾರೈಸಿದರು.
ವಿಜಯಪುರ, (ಮಾರ್ಚ್ 31) : ಪ್ರತಿ ವರ್ಷ ಯುಗಾದಿಯಲ್ಲಿ ವಿಜಯಪುರ ತಾಲೂಕಿನ ಕತಕನಹಳ್ಳಿಯಲ್ಲಿರು ಶ್ರೀ ಗುರು ಚಕ್ರವರ್ತಿ ಸದಾಶಿವ ಮಠದ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಮಠದ ಪೀಠಾಧಿಪತಿ ಶ್ರೀ ಶಿವಯ್ಯ ಸ್ವಾಮೀಜಿ ಅವರು ನುಡಿಯೋ ಕಾರ್ಣಿಕ ಭವಿಷ್ಯ ಖ್ಯಾತಿ ಪಡೆದಿದೆ. ಇಲ್ಲಿ ನುಡಿಯೋ ಕಾರ್ಣಿಕ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲಾ ಎಂಬ ಪ್ರತೀತಿ ಇದೆ. ಇಂತ ಹಿನ್ನಲೆ ಹೊಂದಿರೋ ಮಠದಲ್ಲಿ ಇದೀಗ ಜಾತ್ರಾ ಸಂಭ್ರಮ ಮನೆ ಮಾಡಿದೆ. ಜಾತ್ರೆಯ ನಿಮಿತ್ಯ ಮಠಕ್ಕೆ ಇಂದು (ಮಾರ್ಚ್ 31) ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಇಂದು ಭೇಟಿ ನೀಡಿ. ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು.
ಇನ್ನು ಈ ವೇಳೆ ಮಠದ ಪೀಠಾಧಿಪತಿ ಶ್ರೀ ಶಿವಯ್ಯ ಸ್ವಾಮೀಜಿ ಮಠದ ಕೊಠಡಿಯೊಳಗೆ ಹೋಗಿ ಚಿನ್ನದ ಉಂಗುರ ತಂದು ಸಚಿವ ಎಂಬಿ ಪಾಟೀಲ್ ಗೆಹಾಕಿ ಆರ್ಶಿವಾದ ಮಾಡಿದರು. ನಂತರ ಸಿಹಿ ತಿನ್ನಿಸಿ ಶುಭ ಹಾರೈಸಿದರು. ರಾಜಕೀಯರದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಿರಿ, ಉತ್ತಮ ರಾಜಕೀಯ ಭವಿಷ್ಯವಿದೆ ಎಂದು ಭವಿಷ್ಯ ನುಡಿದರು.
ಮಠದಲ್ಲಿ ನುಡಿಯುವ ಕಾರ್ಣಿಕ ಸುಳ್ಳಾಗೋದಿಲ್ಲ ಅನ್ನೋ ನಂಬಿಕೆ ಇಲ್ಲಿ ಮನೆ ಮಾಡಿದೆ. ಅಂತಹ ಮಠಕ್ಕೆ ಭೇಟಿ ನೀಡಿದ ಸಚಿವ ಎಂ ಬಿ ಪಾಟೀಲ್ ಅವರು ಇಂದು ವಿಶೇಷ ಆರ್ಶಿವಾದ ಪಡೆದಿದ್ದಾರೆ. ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರೂ ಸಹ ಮಠಕ್ಕೆ ಭೇಟಿ ನೀಡಿ ಶ್ರೀಗಳನ್ನ ಭೇಟಿ ಮಾಡಿದ್ದರು ಎಂಬುದು ವಿಶೇಷ.

ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!

Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ

‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?

VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
