Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆ, ಜನರ ಮೊಗದಲ್ಲಿ ಸಂತಸ

ಬೆಳಗಾವಿ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆ, ಜನರ ಮೊಗದಲ್ಲಿ ಸಂತಸ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 31, 2025 | 7:42 PM

ಬೆಳಗಾವಿ ನಗರ ಸುತ್ತಮುತ್ತ ಮಳೆಯಿಂದ ಜನಜೀವನನ ಅಸ್ತವ್ಯಸ್ತಗೊಂಡಿದ್ದು ನಿಜ ಆದರೆ, ಈ ಅಸ್ತವ್ಯಸ್ತತೆ ಜನರಿಗೆ ಸಂತೋಷ ನೀಡಿದೆ. ಈ ಬಾರಿಯ ಬೇಸಿಗೆ ಉಳಿದ ಬೇಸಿಗೆಗಳಿಗಿಂತ ಭಿನ್ನವಾಗಿದೆ, ಈಗಾಗಲೇ ವರದಿಯಾಗಿರುವಂತೆ ಪ್ರತಿಸಲಕ್ಕಿಂತ ಈ ಸಲ ಉಷ್ಣಾಂಶ ಸುಮಾರು 2 ಡಿಗ್ರೀ ಸೆಂಟಿಗ್ರೇಡ್​​​​ಗಳಷ್ಟು ಹೆಚ್ಚಾಗಿದೆ. ಉತ್ತರ ಕರ್ನಾಟಕದದಲ್ಲಿ ಮಳೆಗಾಲದಲ್ಲಿ ತುಂಬಿ ತುಳುಕುತ್ತಿದ್ದ ಹಳ್ಳಕೊಳ್ಳಗಳೆಲ್ಲ ಬತ್ತಿಹೋಗಿ ನೀರಿಗೆ ಹಾಹಾಕಾರ ಶುರುವಾಗಿದೆ.

ಬೆಂಗಳೂರು, ಮಾರ್ಚ್ 31: ಬಿರು ಬೇಸಿಗೆ, ನೆತ್ತಿಯ ಮೇಲೆ ಕೆಂಡ ಕಾರುವ ಸೂರ್ಯ, ಕಾದ ಹೆಂಚಿನಂತಾದ ನೆಲ ಮತ್ತು ಟಾರು ರಸ್ತೆಗಳು. ಇಂಥ ಪರಿಸ್ಥಿತಿಯಲ್ಲಿ ಸುಮಾರು 45-50 ನಿಮಿಷಗಳ ಕಾಲ ಒಂದೇ ಸಮನೆ ಮಳೆ ಸುರಿದರೆ ಖುಷಿ ಆಗದಿರುತ್ತದೆಯೇ? ಬೆಳಗಾವಿ ನಗರ (Belagavi City) ಮತ್ತು ಬೆಳಗಾವಿ ತಾಲ್ಲೂಕಿನಾದ್ಯಂತ ಇಂದು ಸಾಯಂಕಾಲ ಜೋರು ಮಳೆ ಮಾರಾಯ್ರೇ. ಗುಡುಗು ಸಿಡಿಲು ಜೊತೆ ಧಾರಾಕಾರ ಮಳೆ. ಕಡು ಬಿಸಿಲಿನಿಂದ ಕಂಗೆಟ್ಟಿದ್ದ ಭಾಗದ ಜನರಿಗೆ ಮಳೆಯು ತಾತ್ಕಾಲಿಕ ನೆಮ್ಮದಿ ನೀಡಿದ್ದು ಸುಳ್ಳಲ್ಲ. ಬೆಳಗಾವಿ ನಗರದ ರಾಣಿ ಚೆನ್ನಮ್ಮ ಸರ್ಕಲ್ ಸುತ್ತ ಸುರಿಯುತ್ತಿರುವ ಮಳೆಯಲ್ಲಿ ವಾಹನಗಳು ವೈಪರ್​​ಗಳನ್ನು ಆನ್ ಮಾಡಿಕೊಂಡು ಸಂಚರಿಸುವ ದೃಶ್ಯ ಮನಸ್ಸಿಗೆ ಮುದನೀಡುತ್ತದೆ.

ಇದನ್ನೂ ಓದಿ:   Coconut Kulukki: ಈ ಬೇಸಿಗೆಯ ಉರಿ ಬಿಸಿಲಿಗೆ ದೇಹ ತಂಪಾಗಿರಿಸಲು ಟ್ರೈ ಮಾಡಿ ಎಳನೀರು ಕುಲುಕ್ಕಿ ಶರ್ಬತ್‌

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ