ನ್ಯಾಮತಿ ಎಸ್ಬಿಐನಿಂದ ₹13 ಕೋಟಿ ಮೌಲ್ಯದ ಚಿನ್ನ ದರೋಡೆ ಪ್ರಕರಣ ಭೇದಿಸಿದ ದಾವಣಗೆರೆ ಪೊಲೀಸ್
ದಾವಣಗೆರೆ ಪೊಲೀಸ್ ತಂಡದ ಕಾರ್ಯಕ್ಷಮತೆಯನ್ನು ಗೃಹ ಸಚಿವ ಜಿ ಪರಮೇಶ್ವರ್ ಕೊಂಡಾಡಿದ್ದಾರೆ ಮತ್ತು ನಗದು ಬಹುಮಾನವನ್ನೂ ಘೋಷಿಸಿದ್ದಾರೆ, ತಂಡದ ಸದಸ್ಯರ ಹೆಸರುಗಳನ್ನು ಮುಖ್ಯಮಂತ್ರಿಯವರ ಚಿನ್ನದ ಪದಕ ಪುರಸ್ಕಾರಕ್ಕಾಗಿ ಶಿಫಾರಸ್ಸು ಮಾಡಲಾಗಿದೆ, ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಸಹ ಪ್ರಕರಣ ಬೇಧಿಸಿದ ಪೊಲೀಸರಿಗೆ ನಗದು ಬಹುಮಾನ ಘೋಷಣೆ ಮಾಡಿದ್ದಾರೆ ಎಂದು ರವಿಕಾಂತೇಗೌಡ ಹೇಳಿದರು.
ದಾವಣಗೆರೆ, ಮಾರ್ಚ್ 31: ಜಿಲ್ಲೆಯ ನ್ಯಾಮತಿ ಎಸ್ಬಿಐ ಬ್ಯಾಂಕಿನಲ್ಲಿ ಸುಮಾರು 6 ತಿಂಗಳ ಹಿಂದೆ ನಡೆದಿದ್ದ ಹದಿನೇಳೂವರೆ ಕೇಜಿ ಚಿನ್ನದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ವಿಷಯಕ್ಕೆ ಸಂಬಂಧಿಸಿದಂತೆ ಪೂರ್ವವಲಯದ ಐಜಿಪಿ ಬಿಅರ್ ರವಿಕಾಂತೇಗೌಡ (BR Ravikanthe Gowda) ಸುದ್ದಿಗೋಷ್ಠಿ ನಡೆಸಿ ಬಹಳಷ್ಟು ವಿವರಗಳನ್ನು ನೀಡಿದರು. ಪ್ರಕರಣದಲ್ಲಿ ಆರೋಪಿಗಳಾದ ಅಜಯ್ ಮತ್ತು ವಿಜಯ್ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ಮೊದಲ ಬಾರಿಗೆ ದರೋಡೆ ನಡೆಸಿದ ಕಳ್ಳರ ತಂಡ ಬಹಳ ಚಾಕ್ಯಚಕ್ಯತೆಯಿಂದ ಇದುವರೆಗೆ ಪೊಲೀಸರ ಕಣ್ತಪ್ಪಿಸುವಲ್ಲಿ ಸಫಲವಾಗಿತ್ತು, ದರೋಡೆ ಮಾಡಿದ ಸುಮಾರು ರೂ. 13 ಕೋಟಿ ಮೌಲ್ಯದ ಚಿನ್ನವನ್ನು ಅರೋಪಿಗಳು ತಮಿಳುನಾಡು ಮಧುರೈನಲ್ಲಿರುವ ಇಸ್ಲಾಂಪೆಟ್ಟೈನಲ್ಲಿ ತೋಟದ ಮನೆಯಲ್ಲಿನ ಬಾವಿಯೊಂದರಲ್ಲಿ ಅಡಗಿಸಿಟ್ಟಿದ್ದಂತೆ. ಕಳುವಿನ ವಿಷಯವನ್ನು ಅವರು ತಮ್ಮ ಕುಟುಂಬದವರಿಗೂ ತಿಳಿಸಿರಲಿಲ್ಲ!
ಇದನ್ನೂ ಓದಿ: ನ್ಯಾಮತಿ SBI ಬ್ಯಾಂಕ್ ದರೋಡೆ: ಪಾಳು ಬಾವಿಯಲ್ಲಿ 17 ಕೆಜಿ ಚಿನ್ನ ಬಚ್ಚಿಟ್ಟಿದ್ದ ಗ್ಯಾಂಗ್ ಅಂದರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ