Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ

ವಿವೇಕ ಬಿರಾದಾರ
|

Updated on: Mar 31, 2025 | 8:34 PM

ರಾಮನಗರದ ತಾವರೆಕೆರೆ ಬಳಿ ಪಾರ್ಶ್ವವಾಯು ಪೀಡಿತ ಅಪ್ಸರ್ ಪಾಷ ಅವರನ್ನು ಪೊಲೀಸ್ ಪೇದೆ ಮೈಲಾರಿ ಕಂಡರು. ಅಪ್ಸರ್ ಪಾಷರನ್ನು ಮೈಲಾರಿ ಅವರು ಸ್ವಂತ ಖರ್ಚಿನಲ್ಲಿ ಅವರ ಮನೆಗೆ ಕಳುಹಿಸಿದರು. ಈ ಮಾನವೀಯ ಕಾರ್ಯಕ್ಕೆ ಪೊಲೀಸ್ ಪೇದೆ ಮೈಲಾರಿ ಅವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದು ಪೊಲೀಸರ ಸಹಾಯಕ ಸ್ವಭಾವಕ್ಕೆ ಒಳ್ಳೆಯ ಉದಾಹರಣೆ.

ರಾಮನಗರ, ಮಾರ್ಚ್ 31: ಪೊಲೀಸರೆಂದರೇ ಮೂಗು ಮುರಿಯುವವರೇ ಹೆಚ್ಚು. ಆದರೆ, ರಾಮನಗರದ ಈ ಪೊಲೀಸ್​ ಪೇದೆಯ ಮಾನವೀಯತೆ ಕಾರ್ಯಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪಾರ್ಶ್ವವಾಯು ಪೀಡಿತ ಮುಸ್ಲಿಂ ವ್ಯಕ್ತಿ ವಾಪಸ್​ ಕುಟುಂಬಸ್ಥರನ್ನು ಸೇರುವ ಹಾಗೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿ ರವಿವಾರ (ಮಾ.30) ಬೆಂಗಳೂರು ಬೊಮ್ಮನಹಳ್ಳಿ ನಿವಾಸಿ, ಪಾರ್ಶ್ವವಾಯು ಪೀಡಿತ ಅಪ್ಸರ್ ಪಾಷ (60) ಅವರನ್ನು ತಾವರೆಕೆರೆ ಪೊಲೀಸ್ ಠಾಣೆ ಸಿಬ್ಬಂದಿ ಮೈಲಾರಿ ಗಮನಿಸಿದ್ದಾರೆ. ಬಳಿಕ, ಪೊಲೀಸ್​ ಪೇದೆ ಮೈಲಾರಿ ಅವರನ್ನು ವಿಚಾರಿಸಿದಾಗ ಕುಟುಂಬಸ್ಥರು ತನ್ನನ್ನು ಇಲ್ಲಿ ಬಿಟ್ಟು ಹೋಗಿರುವುದಾಗಿ ಅಪ್ಸರ್​ ಪಾಷ ಹೇಳಿದ್ದಾರೆ. ನಂತರ, ಪೊಲೀಸ್​ ಪೇದೆ ಮೈಲಾರಿ ಅವರು ಅಪ್ಸರ್ ಪಾಷ ವಿಳಾಸ ಪತ್ತೆ ಹಚ್ಚಿ, ಸ್ವಂತ ದುಡ್ಡು ಕೊಟ್ಟು ಆಟೋದಲ್ಲಿ ಮನೆಗೆ ಕಳುಹಿಸಿದ್ದಾರೆ. ಪೊಲೀಸ್​ ಪೇದೆ ಮೈಲಾರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.