‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ ಹೀಗೆ ಹೇಳಿದ್ದು ಯಾಕೆ?
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ‘45’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಅರ್ಜುನ್ ಜನ್ಯ ಅವರು ಪ್ರತಿಭಾವಂತ ಡೈರೆಕ್ಟರ್ ಎಂದು ರಾಜ್ ಬಿ. ಶೆಟ್ಟಿ ಅವರು ಹೇಳಿದ್ದಾರೆ. ‘45’ ಸಿನಿಮಾದ ಟೀಸರ್ ಬಿಡುಗಡೆ ವೇಳೆ ಅಚ್ಚರಿಯ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.
ಉಪೇಂದ್ರ ಮತ್ತು ಶಿವರಾಜ್ಕುಮಾರ್ ಅವರ ಜೊತೆಗೆ ರಾಜ್ ಬಿ. ಶೆಟ್ಟಿ ಅವರು ‘45’ (45 Movie) ಸಿನಿಮಾದಲ್ಲಿ ನಟಿಸಿದ್ದು, ಟೀಸರ್ ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ. ‘ನಿರ್ದೇಶಕ ಅರ್ಜುನ್ ಜನ್ಯ (Arjun Janya) ಅವರ ರೀತಿಯ ಹುಚ್ಚ ಬೇರೆ ಯಾರೂ ಇಲ್ಲ. ಅವರಲ್ಲಿ ಓರ್ವ ಶ್ರೇಷ್ಠ ನಿರ್ದೇಶಕ ಇದ್ದಾನೆ. ಸಿನಿಮಾದಲ್ಲಿನ 60 ಪಾತ್ರಕ್ಕೂ ಡಬ್ ಮಾಡಿ, ಫೈನಲ್ ಮಾಡಿ, ಡಿಟಿಎಸ್ ಮಾಡಿ ಅದನ್ನು ಬೇರೆಯವರಿಗೆ ತೋರಿಸುವಂತಹ ಒಬ್ಬ ಹುಚ್ಚ ಭೂಮಿ ಮೇಲೆ ಇದ್ದರೆ ಅದು ಅರ್ಜುನ್ ಜನ್ಯ ಮಾತ್ರ. ಈ ರೀತಿ ಮಾಡುವುದು ಬೇರೆ ಯಾರಿಂದಲೂ ಸಾಧ್ಯವಿಲ್ಲ’ ಎಂದು ರಾಜ್ ಬಿ. ಶೆಟ್ಟಿ (Raj B Shetty) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Mar 31, 2025 10:06 PM