AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಏಕನಾಥ ಶಿಂಧೆ ಎಪಿಸೋಡ್ ಮರುಕಳಿಸಿದರೆ ಯಾರೂ ಆಶ್ಚರ್ಯಪಡಬೇಕಿಲ್ಲ: ಬಿ ಶ್ರೀರಾಮುಲು

ಕರ್ನಾಟಕದಲ್ಲಿ ಏಕನಾಥ ಶಿಂಧೆ ಎಪಿಸೋಡ್ ಮರುಕಳಿಸಿದರೆ ಯಾರೂ ಆಶ್ಚರ್ಯಪಡಬೇಕಿಲ್ಲ: ಬಿ ಶ್ರೀರಾಮುಲು

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 28, 2025 | 12:06 PM

Share

ಒಂದು ವೇಳೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಉರುಳಿಬಿದ್ದು ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗುವ ಸನ್ನಿವೇಶ ಸೃಷ್ಟಿಯಾದರೆ ನೀವು ಬೆಂಬಲ ಸೂಚಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಶ್ರೀರಾಮುಲು ತಡವರಿಸಿದರು. ನೋಡೋಣ ಅದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ, ತಾನಲ್ಲ ಎಂದು ಹೇಳುವ ಮಾಜಿ ಸಚಿವ ಮತ್ತೊಮ್ಮೆ ಏಕನಾಥ ಶಿಂಧೆ ಎಪಿಸೋಡಿನ ಬಗ್ಗೆ ಹೇಳುತ್ತಾರೆ.

ಮೈಸೂರು: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಹಿಂದೆ ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ್ ಮತ್ತು ದೇವರಾಜ ಅರಸು ಅವರ ಹಾದಿ ತುಳಿಯುತ್ತಿದ್ದಾರೆಯೇ ಎಂದು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಅಗಮಿಸಿದ ಶ್ರೀರಾಮುಲು ಅವರನ್ನು ಕೇಳಿದಾಗ, ಬೇರೆ ಪಕ್ಷಗಳ ಆಂತರಿಕ ವಿಷಯದಲ್ಲಿ ಮಾತಾಡಲ್ಲ ಎನ್ನುತ್ತಲೇ ಅವರು ಕರ್ನಾಟಕದಲ್ಲಿ ಏಕನಾಥ ಶಿಂಧೆ ಅವರಂಥ ಎಪಿಸೋಡ್ ನಡೆದರೆ ಆಶ್ಚರ್ಯಪಡಬೇಕಿಲ್ಲ ಎಂದರು. ರಾಜ್ಯದ ಅಭಿವೃದ್ಧಿಯನ್ನು ಬದಿಗೊತ್ತಿರುವ ರಾಜ್ಯ ಸರ್ಕಾರದ ಪ್ರತಿನಿಧಿಗಳು ಕೇವಲ ಸ್ವಾರ್ಥಕ್ಕೋಸ್ಕರ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್

Published on: Feb 28, 2025 12:04 PM