ಚಿಕ್ಕಮಗಳೂರು: 2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಭಕ್ತನ ಬೇಡಿಕೆ ಪತ್ರ
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ಒಂದು ವಿಚಿತ್ರ ಬೇಡಿಕೆ ಪತ್ರ ಪತ್ತೆಯಾಗಿದೆ. ಶಿವರಾತ್ರಿಯಂದು ಒಬ್ಬ ಭಕ್ತ "ಎರಡು ಕೋಟಿ ರೂಪಾಯಿ ಬೇಕು" ಎಂದು ಬರೆದ ಚೀಟಿಯನ್ನು ಹುಂಡಿಯಲ್ಲಿ ಹಾಕಿದ್ದರು. ಹುಂಡಿಯ ಹಣ ಎಣಿಕೆ ಸಮಯದಲ್ಲಿ ಈ ಪತ್ರ ಪತ್ತೆಯಾಗಿದ್ದು, ಈ ಘಟನೆ ಸಾಕಷ್ಟು ಕುತೂಹಲ ಮೂಡಿಸಿದೆ. ಭಕ್ತರ ವಿಚಿತ್ರ ಹರಕೆಗಳು ಮತ್ತು ಅವರ ನಂಬಿಕೆಗಳ ಬಗ್ಗೆ ಈ ಘಟನೆ ಬೆಳಕು ಚೆಲ್ಲುತ್ತದೆ.
ಚಿಕ್ಕಮಗಳೂರು, ಫೆಬ್ರವರಿ 28: ದೇವರಲ್ಲಿ ಭಕ್ತರು ಅನೇಕ ರೀತಿಯಲ್ಲಿ ಪಾರ್ಥನೆ ಅಥವಾ ಹರಕೆ ಕಟ್ಟಿಕೊಳ್ಳುತ್ತಾರೆ. ಇಲ್ಲಿನ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ಸ್ವಾಮಿಗೆ ಓರ್ವಭಕ್ತ ವಿಚಿತ್ರವಾಗಿ ಹರಕೆ ಕಟ್ಟಿಕೊಂಡಿದ್ದಾರೆ. “ಎರಡು ಕೋಟಿ ಹಣ ಬೇಕು” ಒಂದು ಚೀಟಿಯಲ್ಲಿ ಬರೆದು ದೇವರ ಹುಂಡಿಯಲ್ಲಿ ಹಾಕಿದ್ದಾರೆ. ಶಿವರಾತ್ರಿಯ ದಿನ ಶ್ರೀ ಮಾರ್ಕಂಡೇಶ್ವರ ಸ್ವಾಮಿ ಬಳಿ ಭಕ್ತ ಎರಡು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಎರಡು ಕೋಟಿ ಹಣ ಬೇಕು ಎಂದು ಪತ್ರದಲ್ಲಿ ಬರೆದು ಹರಕೆ ಹುಂಡಿಯಲ್ಲಿ ಹಾಕಿದ್ದಾರೆ. ಹುಂಡಿ ಹಣ ಎಣಿಕೆ ವೇಳೆ ಸಿಕ್ಕ ಭಕ್ತನ ಬೇಡಿಕೆ ಚೀಟಿ ಸಿಕ್ಕಿದೆ.
Published on: Feb 28, 2025 11:34 AM