AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎದೆ ನೋವು ಮಾತ್ರವಲ್ಲ: ಪಾರ್ಶ್ವವಾಯು ಬರುವ ಮೊದಲು ದೇಹ ನೀಡುವ ಈ 4 ಸೂಚನೆಗಳನ್ನು ಕಡೆಗಣಿಸಬೇಡಿ

ಯಾವುದೇ ಕಾಯಿಲೆ ಆಗಿರಲಿ ಬರುವ ಮುಂಚೆ ಕೆಲವು ಸೂಚನೆಗಳನ್ನು ನೀಡುತ್ತದೆ. ಆದರೆ ಅವುಗಳನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕಾಗುತ್ತದೆ. ಅದೇ ರೀತಿ ಪಾರ್ಶ್ವವಾಯು ಕೂಡ ಹಠಾತ್ ಆಗಿ ಕಾಣಿಸಿಕೊಳ್ಳುವುದಿಲ್ಲ. ದೇಹ ಈ ರೀತಿ ಆಗುವ ಮೊದಲೇ ನಮಗೆ ಎಚ್ಚರಿಕೆ ನೀಡಲು ಪ್ರಯತ್ನಿಸುತ್ತದೆ. ಈ ಬಗ್ಗೆ ಆರೋಗ್ಯ ತಜ್ಞ ಡಾ. ಎರಿಕ್ ಬರ್ಗ್ ಅವರು ಕೆಲವು ಲಕ್ಷಣಗಳ ಬಗ್ಗೆ ತಿಳಿಸಿದ್ದು ನಿರ್ಲಕ್ಷ್ಯ ಮಾಡದೆಯೇ ಅವುಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಹಾಗಾದರೆ ಅವು ಯಾವವು? ಈ ರೀತಿ ಆಗದಂತೆ ತಡೆಯಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎದೆ ನೋವು ಮಾತ್ರವಲ್ಲ: ಪಾರ್ಶ್ವವಾಯು ಬರುವ ಮೊದಲು ದೇಹ ನೀಡುವ ಈ 4 ಸೂಚನೆಗಳನ್ನು ಕಡೆಗಣಿಸಬೇಡಿ
Unusual Stroke Symptoms
ಪ್ರೀತಿ ಭಟ್​, ಗುಣವಂತೆ
|

Updated on: Aug 12, 2025 | 5:18 PM

Share

ಪಾರ್ಶ್ವವಾಯು (stroke) ಹಠಾತ್ ಆಗಿ ಕಂಡು ಬರುತ್ತದೆ ಎನ್ನಲಾಗುತ್ತದೆ ಆದರೆ ಅದು ತಪ್ಪು. ದೇಹವು ಸಾಮಾನ್ಯವಾಗಿ ಈ ರೀತಿ ಆಗುವ ಮೊದಲೇ ನಮಗೆ ಎಚ್ಚರಿಕೆ ನೀಡಲು ಪ್ರಯತ್ನಿಸುತ್ತದೆ. ಆದರೆ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನು ಸುಲಭವಾಗಿ ತಳ್ಳಿಹಾಕದೆಯೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕೆಲವರು ಪಾರ್ಶ್ವವಾಯು ಲಕ್ಷಣಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಹಾಗಾಗಬಾರದು ಎಂದರೆ ಇವುಗಳ ಬಗ್ಗೆ ತಿಳಿದುಕೊಂಡು ದೇಹ ಎಚ್ಚರಿಕೆ ನೀಡುವಾಗ ಅದರ ಬಗ್ಗೆ ಗಮನಹರಿಸಬೇಕು. ಈ ಬಗ್ಗೆ ಆರೋಗ್ಯ ತಜ್ಞ ಡಾ. ಎರಿಕ್ ಬರ್ಗ್ (Dr. Eric Berg) ಅವರು ನಿರ್ಲಕ್ಷ್ಯ ಮಾಡಬಾರದಂತಹ ಕೆಲವು ಲಕ್ಷಣಗಳ ಮೇಲೆ ಬೆಳಕು ಚೆಲ್ಲಿದ್ದು, ಅವುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ. ಹಾಗಾದರೆ ಅವು ಯಾವವು? ಈ ರೀತಿ ಆಗದಂತೆ ತಡೆಯಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತೀವ್ರವಾದ ತಲೆನೋವು

ಹಠಾತ್ ಮತ್ತು ತೀವ್ರವಾದ ತಲೆನೋವು ಮೆದುಳಿನಲ್ಲಿ ಹೆಪ್ಪುಗಟ್ಟುವುದನ್ನು ಸೂಚಿಸುತ್ತದೆ. ಎಲ್ಲಾ ತಲೆ ನೋವುಗಳು ಒತ್ತಡ ಮತ್ತು ನಿರ್ಜಲೀಕರಣದ ಸಮಸ್ಯೆಯಿಂದ ಬರುವಂತದ್ದಲ್ಲ. ಹಠಾತ್ ಆಗಿ ಬರುವಂತಹ ತಲೆನೋವು, ಸಾಮಾನ್ಯಕ್ಕಿಂತ ಭಿನ್ನವಾಗಿದ್ದರೆ, ಮೆದುಳಿನಲ್ಲಿ ಹೆಚ್ಚುತ್ತಿರುವ ಒತ್ತಡದ ಪರಿಣಾಮವಾಗಿರಬಹುದು. ವಾಕರಿಕೆ ಜೊತೆ ದೃಷ್ಟಿ ಸಮಸ್ಯೆಗಳ ಜೊತೆಗೆ ಇದು ಕೂಡ ಕಳವಳಕಾರಿ ಲಕ್ಷಣವಾಗಿದೆ. ಇದು ಮೈಗ್ರೇನ್ ಅಥವಾ ಒತ್ತಡದ ತಲೆನೋವು ಕೂಡ ಆಗಿರಬಹುದು. ಆದರೆ ವಾಂತಿ ಅಥವಾ ಗೊಂದಲವಿದ್ದು ತಲೆನೋವು ಇದ್ದಾಗ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ತಕ್ಷಣದ ವೈದ್ಯಕೀಯ ಆರೈಕೆ ಅತ್ಯಗತ್ಯ.

ಹೃದಯಾಘಾತವಲ್ಲದ ಎದೆ ನೋವು

ಈ ರೀತಿಯ ಎದೆ ನೋವು ಹೃದಯಾಘಾತಕ್ಕೆ ಸಂಬಂಧಿಸಿದ್ದಲ್ಲ. ಸಾಮಾನ್ಯವಾಗಿ ಇದು ಬಿಗಿತ, ಉರಿ ಅಥವಾ ಅಸ್ವಸ್ಥತೆಯಂತೆ ಭಾಸವಾಗಬಹುದು. ಆದರೆ ಇದನ್ನು ಆಮ್ಲೀಯತೆ ಅಥವಾ ಅಜೀರ್ಣ ಎಂದು ತಪ್ಪಾಗಿ ಭಾವಿಸಬಾರದು. ಕೆಲವು ಸಂದರ್ಭಗಳಲ್ಲಿ, ಮೆದುಳಿನ ನಾಳಗಳಲ್ಲಿ ರೂಪುಗೊಳ್ಳುವ ಹೆಪ್ಪುಗಟ್ಟುವಿಕೆಯಿಂದಾಗಿ ಆಮ್ಲಜನಕದ ಪೂರೈಕೆ ಕಡಿಮೆಯಾಗುವುದರಿಂದ ಈ ರೀತಿಯಾಗುತ್ತದೆ. ಹಾಗಾಗಿ ತೀವ್ರವಾದ ಎದೆನೋವನ್ನು ಎಂದಿಗೂ ನಿರ್ಲಕ್ಷಿಸಬೇಡಿ.

ಇದನ್ನೂ ಓದಿ
Image
ವಿಚ್ಛೇದಿತ ಪೋಷಕರ ಮಕ್ಕಳಿಗೆ ಪಾರ್ಶ್ವವಾಯು ಅಪಾಯ ಹೆಚ್ಚು
Image
ಎಐ ಮೂಲಕ ಪಾರ್ಶ್ವವಾಯು ಸಮಸ್ಯೆಗಿದೆ ತ್ವರಿತ ಚಿಕಿತ್ಸೆ
Image
2050ರ ವೇಳೆಗೆ ಪಾರ್ಶ್ವವಾಯು ಪ್ರಕರಣಗಳು 10 ಮಿಲಿಯನ್ ಹೆಚ್ಚಳ
Image
ಯುವಕರಲ್ಲಿ ಹೆಚ್ಚುತ್ತಿದೆ ಸ್ಟ್ರೋಕ್; ಇದು ಯಾಕೆ ಅಪಾಯಕಾರಿ?

ಕಾರಣವಿಲ್ಲದೆ ಬರುವಂತಹ ಬಿಕ್ಕಳಿಕೆ

ಇದು ನಿಮಗೆ ವಿಚಿತ್ರವೆನಿಸಬಹುದು, ಆದರೆ ನಿರಂತರ ಬಿಕ್ಕಳಿಕೆ, ಅದರಲ್ಲಿಯೂ ಮಹಿಳೆಯರಲ್ಲಿ ಕಂಡುಬರುವುದು ಪಾರ್ಶ್ವವಾಯುವಿನ ಎಚ್ಚರಿಕೆ ಎಂಬುದು ವರದಿಯಾಗಿದೆ. ಪಾರ್ಶ್ವವಾಯು ಉಸಿರಾಟ ಮತ್ತು ನುಂಗುವಿಕೆಯನ್ನು ನಿಯಂತ್ರಿಸುವ ಮೆದುಳಿನ ಪ್ರದೇಶವಾದ ಮೆಡುಲ್ಲಾದ ಮೇಲೆ ಪರಿಣಾಮ ಬೀರಿದಾಗ ಇದು ಸಂಭವಿಸುತ್ತದೆ. ಈ ಬಿಕ್ಕಳಿಕೆಗಳು ಸಾಮಾನ್ಯ ಎನಿಸುತ್ತದೆ, ಆದರೆ ಅವು ಗಂಟೆ ಅಥವಾ ದಿನಗಳ ವರೆಗೆ ಮುಂದುವರಿದರೆ, ಅದು ಕೇವಲ ಜೀರ್ಣಕಾರಿ ಸಮಸ್ಯೆಗಳಿಂದಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಹೃದಯಾಘಾತದ ಹೊರತಾಗಿ ಎದೆ ನೋವು ಬರಲು ಕಾರಣಗಳಿವು

ವಾಕರಿಕೆ ಅಥವಾ ವಾಂತಿ

ಒತ್ತಡ ಹೆಚ್ಚಾಗಿ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಎಂಬ ಹಾರ್ಮೋನುಗಳನ್ನು ಬಿಡುಗಡೆಯಾಗುತ್ತದೆ. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಮೊದಲೇ ರಕ್ತದಲ್ಲಿನ ಸಕ್ಕರೆಯ ಅಸಮತೋಲನ ಇರುವವರಲ್ಲಿ, ಇದು ಹೆಪ್ಪುಗಟ್ಟುವಿಕೆಯ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ವಾಕರಿಕೆ ಅಥವಾ ವಾಂತಿ ಆಹಾರ ಅಥವಾ ವೈರಸ್‌ನಿಂದ ಉಂಟಾಗುವುದಿಲ್ಲ, ಇದು ಹಠಾತ್ ಆಂತರಿಕ ಒತ್ತಡಕ್ಕೆ ಮೆದುಳು ಪ್ರತಿಕ್ರಿಯಿಸುವುದರಿಂದ ಉಂಟಾಗುತ್ತದೆ. ಆದರೆ ಈ ಲಕ್ಷಣವನ್ನು ಸಾಮಾನ್ಯವಾಗಿ ಎಲ್ಲರೂ ಕಡೆಗಣಿಸುತ್ತಾರೆ. ಹಾಗಾಗಿ ಪುನರಾವರ್ತಿತ ವಾಕರಿಕೆ ಕಂಡುಬಂದರೆ ಇದರ ಜೊತೆಗೆ ತಲೆನೋವು ಅಥವಾ ಮಸುಕಾದ ದೃಷ್ಟಿ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ