ವಿಚ್ಛೇದಿತ ಪೋಷಕರ ಮಕ್ಕಳಿಗೆ ಪಾರ್ಶ್ವವಾಯು ಅಪಾಯ ಹೆಚ್ಚು

ವಿಚ್ಛೇದನ ಪಡೆದು ದೂರವಾಗಿರುವ ಪೋಷಕರ ಮಕ್ಕಳಿಗೆ ಪಾರ್ಶ್ವವಾಯು ಅಪಾಯ ಹೆಚ್ಚು ಎಂದು ಅಧ್ಯಯನ ಹೇಳಿದೆ. ಪೋಷಕರ ಪ್ರೀತಿ ಸಿಗದೆ ಕೆಲವು ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ, ಬೇಡದ ಚಟಗಳನ್ನು ಅಂಟಿಸಿಕೊಳ್ಳುತ್ತಾರೆ, ಇದು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಈ ಜನರಲ್ಲಿ ಖಿನ್ನತೆ, ಮಧುಮೇಹ ಸಂಬಂಧಿತ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗಿ ಕಂಡುಬಂದಿದೆ. ಇವೆಲ್ಲವೂ ಪಾರ್ಶ್ವವಾಯು ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಹೇಳಿದೆ.

ವಿಚ್ಛೇದಿತ ಪೋಷಕರ ಮಕ್ಕಳಿಗೆ ಪಾರ್ಶ್ವವಾಯು ಅಪಾಯ ಹೆಚ್ಚು
ಪೋಷಕರು Image Credit source: Medium
Follow us
ನಯನಾ ರಾಜೀವ್
|

Updated on: Jan 27, 2025 | 11:16 AM

ವಿಚ್ಛೇದನ ಪಡೆದಿರುವ ಪೋಷಕರ ಮಕ್ಕಳಿಗೆ ಪಾರ್ಶ್ವವಾಯು ಅಪಾಯ ಹೆಚ್ಚು ಎಂದು ಅಧ್ಯಯನವೊಂದು ಹೇಳಿದೆ. ಈ ಮಕ್ಕಳು ದೊಡ್ಡವರಾದ ಬಳಿಕ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ ಎಂದು ವೈದ್ಯರು ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. PLOS One ಜರ್ನಲ್​ನಲ್ಲಿ ಈ ಕುರಿತು ವರದಿ ಪ್ರಕಟವಾಗಿದೆ. ಈ ಅಧ್ಯಯನವು 65 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ 13,000 ಜನರನ್ನು ಸಮೀಕ್ಷೆಗೊಳಪಡಿಸಿದೆ.

ತುಂಬು ಕುಟುಂಬದಲ್ಲಿ ಬೆಳೆದವರಿಗೆ ಹೋಲಿಸಿದರೆ ವಿಚ್ಛೇದನ ಪಡೆದ ಪೋಷಕರ ಮಕ್ಕಳು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಶೇ.60ರಷ್ಟಿದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಜನರಲ್ಲಿ ಖಿನ್ನತೆ, ಮಧುಮೇಹ ಸಂಬಂಧಿತ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗಿ ಕಂಡುಬಂದಿದೆ. ಇವೆಲ್ಲವೂ ಪಾರ್ಶ್ವವಾಯು ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಹೇಳಿದೆ.

ಮೆದುಳಿನ ಭಾಗಕ್ಕೆ ರಕ್ತ ಪೂರೈಕೆ ನಿಂತಾಗ, ಮೆದುಳಿನಲ್ಲಿರುವ ರಕ್ತನಾಳವು ಸಿಡಿದಾಗ ಪಾರ್ಶ್ವವಾಯು ಸಂಭವಿಸುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಮೆದುಳಿನ ಭಾಗಗಳು ಹಾನಿಗೊಳಗಾಗುತ್ತವೆ. ಪಾರ್ಶ್ವವಾಯು ಶಾಶ್ವತವಾದ ಮಿದುಳಿನ ಹಾನಿ, ದೀರ್ಘಾವಧಿಯ ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗಬಹುದು.

ಮತ್ತಷ್ಟು ಓದಿ: ಎಐ ಮೂಲಕ ಪಾರ್ಶ್ವವಾಯು ಸಮಸ್ಯೆಗೆ ತ್ವರಿತ ಚಿಕಿತ್ಸೆ

ಮಕ್ಕಳಾಗಿದ್ದಾಗ ದೈಹಿಕವಾಗಿ ಅಥವಾ ಮಾನಸಿಕವಾಗಿ ನಿಂದನೆಗೆ ಒಳಗಾದವರು ಹಾಗೂ ವಿಚ್ಛೇದಿತ ಕುಟುಂಬಗಳಲ್ಲಿ ಆಸರೆ ಇಲ್ಲದೆ ಬೆಳೆದವರಿಗೆ ಈ ಅಪಾಯ ಹೆಚ್ಚು ಟೊರೊಂಟೊ ವಿಶ್ವವಿದ್ಯಾಲಯದ ಅಧ್ಯಯನ ಲೇಖಕ ಎಸ್ಮೆ ಫುಲ್ಲರ್-ಥಾಮ್ಸನ್ ಹೇಳಿದ್ದಾರೆ.

ಪೋಷಕರ ವಿಚ್ಛೇದನ ಮತ್ತು ಪಾರ್ಶ್ವವಾಯು ನಡುವಿನ ಸಂಬಂಧದ ಪ್ರಮಾಣವು ಪುರುಷ ಹಾಗೂ ಮಹಿಳೆಯರಲ್ಲಿ ಒಂದೇ ರೀತಿಯಾಗಿಲ್ಲ. ವಿಚ್ಛೇದನವೇ ಇದಕ್ಕೆಲ್ಲಾ ಕಾರಣ ಎಂದು ಹೇಳಲಾಗುವುದಿಲ್ಲ. ಪೋಷಕರ ವಿಚ್ಛೇದನವು ಖಿನ್ನತೆ, ಮಧುಮೇಹ, ಮಾದಕ ವ್ಯಸನ, ಧೂಮಪಾನ ವ್ಯಸನಿಗಳನ್ನಾಗಿ ಮಾಡುತ್ತದೆ.

ಪಾರ್ಶ್ವವಾಯು ಲಕ್ಷಣಗಳು ಮುಖ, ತೋಳು ಅಥವಾ ಒಂದು ಕಾಲಿನ ಹಠಾತ್ ಮರಗಟ್ಟುವಿಕೆ ಅಥವಾ ದೌರ್ಬಲ್ಯ ಹಠಾತ್ ಗೊಂದಲ, ಮಾತನಾಡಲು ತೊಂದರೆ, ಅಥವಾ ಮಾತನ್ನು ಅರ್ಥಮಾಡಿಕೊಳ್ಳಲು ತೊಂದರೆ ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಹಠಾತ್ ತೊಂದರೆ

ನಡೆಯಲು ಸಾಧ್ಯವಾಗದಿರುವುದು, ತಲೆ ತಿರುಗುವಿಕೆ, ತೀವ್ರ ತಲೆ ನೋವು ಒಂದು ಅಥವಾ ಎರಡೂ ಕಣ್ಣುಗಳಲ್ಲಿ ದೃಷ್ಟಿ ಕಳೆದುಕೊಳ್ಳುವುದು ಒಂದು ತೋಳಿನಲ್ಲಿ ದೌರ್ಬಲ್ಯ ಅಥವಾ ಮರಗಟ್ಟುವಿಕೆ ಭಾವನೆ ತೊದಲು ಮಾತು ಇಂಥಾ ಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?