ಮೊದಲಿನ ಸಿದ್ದರಾಮಯ್ಯ ಆಗಿದ್ದರೆ ರಾಜಣ್ಣರನ್ನು ವಜಾ ಮಾಡುತ್ತಿರಲಿಲ್ಲ, ಇವರು ವೀಕ್ ಸಿದ್ದರಾಮಯ್ಯ: ಇಬ್ರಾಹಿಂ
ಜಯಪ್ರಕಾಶ್ ನಾರಾಯಣ, ಡಾ ಬಿಅರ್ ಅಂಬೇಡ್ಕರ್, ಬಾಬು ಜಗಜೀವನ್ ರಾಮ್, ರಾಷ್ಟ್ರಕವಿ ಪುಟ್ಟಣ್ಣ, ಬಸವಣ್ಣ, ಸರ್ವಜ್ಞ ಮೊದಲಾದವರ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವ ತನಗೆ ಯಾವತ್ತೂ ಸ್ಥಾನ ಮುಖ್ಯವಾಗಿರಲಿಲ್ಲ, ಮಾನ ಮುಖ್ಯವಾಗಿತ್ತು, ಬದುಕಿನಲ್ಲಿ ಮತ್ತು ರಾಜಕಾರಣದಲ್ಲಿ ಹಿಂದೆ ಅಳವಡಿಸಿಕೊಂಡು ಬಂದಿದ್ದ ತತ್ವಗಳನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದು ಇಬ್ರಾಹಿಂ ಹೇಳಿದರು.
ಚಿಕ್ಕಬಳ್ಳಾಪುರ, ಆಗಸ್ಟ್ 13: ಹಿರಿಯ ರಾಜಕಾರಣಿ ಸಿಎಂ ಇಬ್ರಾಹಿಂ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಇವತ್ತು ಕೂಡ ಭಾರೀ ದೋಸ್ತಿ. ನಗರದಲ್ಲಿ ಬಹುಜನ ಸಮಾಜ ಪಕ್ಷದ (Bahujan Samaj Party) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡಿದ ಇಬ್ರಾಹಿಂ, ಸಿದ್ದರಾಮಯ್ಯ ಈಗ ಮೊದಲಿನಂತಿಲ್ಲ, ಮೆತ್ತಗಾಗಿಬಿಟ್ಟಿದ್ದಾರೆ, ಮೊದಲಿನಂತಿದ್ದರೆ ಅವರು ರಾಜಣ್ಣರನ್ನು ವಜಾ ಮಾಡುತ್ತಿರಲಿಲ್ಲ, ಒಬ್ಬ ಪ್ರಭಾವಿ ದಲಿತ ಮುಖಂಡನನ್ನು ನಾನು ಬಲಿ ಕೊಡಲ್ಲ, ನನಗೆ ಸ್ಥಾನ ಮುಖ್ಯವಲ್ಲ, ಮಾನ ಮುಖ್ಯ ಎಂದು ಹೇಳುತ್ತಿದ್ದರು ಅಂತ ಹೇಳಿದರು. ಎರಡು ವರ್ಷ ಅವಧಿಯ ಮುಖ್ಯಮಂತ್ರಿ ಕುರ್ಚಿಗೆ ಸಿದ್ದರಾಮಯ್ಯ ಅದ್ಯಾಕೆ ಜೋತು ಬಿದ್ದಿದ್ದಾರೋ ಗೊತ್ತಿಲ್ಲ, ಅವಧಿ ಇನ್ನೂ ನಾಲ್ಕು ವರ್ಷ ಉಳಿದಿದ್ದರೂ ಎಂಎಲ್ಸಿ ಸ್ಥಾನವನ್ನು ತ್ಯಜಿಸಿ ಬಂದ ವ್ಯಕ್ತಿ ನಾನು, ಸ್ಥಾನದಲ್ಲಿ ಮುಂದುವರಿದಿದ್ದರೆ ವರ್ಷಕ್ಕೆ ₹15 ಲಕ್ಷ ಸಿಗುತಿತ್ತು, ಆದರೆ ಅದೆಲ್ಲವನ್ನೂ ನಾನು ಬಿಟ್ಟು ಬಂದೆ ಎಂದು ಇಬ್ರಾಹಿಂ ಹೇಳಿದರು.
ಇದನ್ನೂ ಓದಿ: Gujarat Plane Crash: ಭಾರತ ಏರ್ ಟ್ರಾಫಿಕ್ ವ್ಯಾಪ್ತಿಯಲ್ಲಿ ನಡೆದಿರೋ ಅತಿದೊಡ್ಡ ದುರಂತ: ಸಿಎಂ ಇಬ್ರಾಹಿಂ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

