Gujarat Plane Crash: ಭಾರತ ಏರ್ ಟ್ರಾಫಿಕ್ ವ್ಯಾಪ್ತಿಯಲ್ಲಿ ನಡೆದಿರೋ ಅತಿದೊಡ್ಡ ದುರಂತ: ಸಿಎಂ ಇಬ್ರಾಹಿಂ
ನಿನ್ನೆ ವಿಮಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರೂ ಪೈಲಟ್ಗಳು ಅನುಭವಸ್ಥರು ಮತ್ತು ಭಾರತದ ಪೈಲಟ್ಗಳನ್ನು ವಿಶ್ವದಲ್ಲೇ ಅತ್ಯುತ್ತಮ ಎನ್ನುತ್ತಾರೆ, ಅದಲ್ಲದೆ ಭಾರತದ ಏರೋನಾಟಿಕಲ್ ಇಂಜಿನೀಯರ್ಗಳನ್ನು ವಿಶ್ವಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ, ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಿಬ್ಬಂದಿ ಕ್ಲೀಯರೆನ್ಸ್ ಕೊಡದ ಹೊರತು ವಿಮಾನ ಟೇಕಾಫ್ ಅಗಲ್ಲ, ಇದೇ ಹಿನ್ನೆಲೆಯಲ್ಲಿ ಪತನ ಯಾಕಾಯ್ತು ಎಂಬ ಪ್ರಶ್ನೆ ಕಾಡುತ್ತದೆ ಎಂದು ಇಬ್ರಾಹಿಂ ಹೇಳಿದರು.
ಬೆಂಗಳೂರು, ಜೂನ್ 13: ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತದ ಬಗ್ಗೆ ಹಿರಿಯ ರಾಜಕಾರಣಿ ಸಿಎಂ ಇಬ್ರಾಹಿಂ (CM Ibrahim) ನೀಡುವ ಹೇಳಿಕೆಗೆ ಹೆಚ್ಚು ತೂಕವಿರುತ್ತದೆ. ಯಾಕೆಂದರೆ 90 ರ ದಶಕದಲ್ಲಿ ಅವರು ನಾಗರಿಕ ವಿಮಾನಯಾನ ಖಾತೆ ಸಚಿವರಾಗಿದ್ದರು. ನಿನ್ನೆ ನಡೆದ ದುರಂತ ಭಾರತದ ಇತಿಹಾಸದಲ್ಲೇ ಅತಿ ದೊಡ್ಡದು, ಇದು ಭಾರತದ ಏರ್ ಟ್ರಾಫಿಕ್ ಕಂಟ್ರೋಲ್ ವ್ಯಾಪ್ತಿಯಲ್ಲಿ ನಡೆದಿರೋದ್ರಿಂದ ಅವಗಢಕ್ಕೆ ಬೇರೆ ಸಂಗತಿಗಳ ಬಗ್ಗೆ ಯೋಚನೆ ಮಾಡಲಾಗದು ಎಂದು ಅವರು ಹೇಳಿದರು. ಸೋಜಿಗದ ಸಂಗತಿಯೆಂದರೆ ದುರಂತ ಸಂಭವಿಸಿ 24 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದರೂ ನಾಗರಿಕ ವಿಮಾನಯಾನ ಸಚಿವಾಲಯಯ ಇದುವರೆಗೆ ಕಾರಣವನ್ನು ತಿಳಿಸಿಲ್ಲ, ಎಲ್ಲರೂ ಬ್ಲ್ಯಾಕ್ ಬಾಕ್ಸ್ ಹುಡುಕುವುದರಲ್ಲೇ ಇದ್ದಾರೆ ಎಂದು ಇಬ್ರಾಹಿಂ ಹೇಳಿದರು.
ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ: ಕೊನೆಯ ಕ್ಷಣದಲ್ಲಿ ಕೈಕೊಟ್ಟ ನೊಗ ಪಂಪರ್, ಲಿಫ್ಟ್ ಗೇರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ