ಅಹಮದಾಬಾದ್ ವಿಮಾನ ಪತನ: ಕೊನೆಯ ಕ್ಷಣದಲ್ಲಿ ಕೈಕೊಟ್ಟ ನೊಗ ಪಂಪರ್, ಲಿಫ್ಟ್ ಗೇರ್
ಭಾರತಕ್ಕೆ ಇದೊಂದು ಕರಾಳ ದಿನವಾಗಿದೆ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ. 242 ಜನರನ್ನು ಹೊತ್ತು ಲಂಡನ್ನತ್ತ ಹಾರಿತು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಂದರೆ 1.38 ಕ್ಕೆ ಅಪಘಾತಕ್ಕೀಡಾಯಿತು. ಆದರೆ ಇದಕ್ಕೆ ಕೆಲವೊಂದು ಕಾರಣಗಳನ್ನು ತಜ್ಞರು ತಿಳಿಸಿದ್ದಾರೆ. ಅವುಗಳು ಯಾವುವು ಇಲ್ಲಿದೆ ನೋಡಿ.

ಗುರುವಾರದಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171, (Air India Plane Crash) ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ. 672 ಅಡಿ ಎತ್ತರದಿಂದ ಮೆಡಿಕಲ್ ಹಾಸ್ಟೆಲ್ ಮೇಲೆ ಬಂದು ಅಪ್ಪಳಿಸಿದೆ. ಈ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡಿದೆ. ಒಂದು ವಿಮಾನ ನಿಯಂತ್ರಣ ಕಳೆದುಕೊಂಡ ನಂತರ ಪೈಲಟ್ ವಿಮಾನವನ್ನು ನಿಯಂತ್ರಣ ಮಾಡಲು ವಿಮಾನದ ಒಳಗೆ ಇರುವ ಕೆಲವೊಂದು ತಂತ್ರಗಳನ್ನು ಬಳಸುತ್ತಾರೆ. ಆದರೆ ಏರ್ ಇಂಡಿಯಾ ವಿಮಾನ AI-171 ಈ ಎಲ್ಲ ತಂತ್ರಗಳು ಕೈಕೊಟ್ಟಿದೆ. ಕೊನೆಯ ಕ್ಷಣದಲ್ಲಿ ಕಾಕ್ಪಿಟ್ನಲ್ಲಿ ನಡೆದಿರುವ ಬಗ್ಗೆ ಮಾಜಿ ಹಿರಿಯ ಪೈಲಟ್ ಕ್ಯಾಪ್ಟನ್ ಸೌರಭ್ ಭಟ್ನಾಗರ್ ಎನ್ಡಿಟಿವಿ ತಿಳಿಸಿದ್ದಾರೆ.
ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು, 10 ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳು ಸೇರಿದಂತೆ 242 ಜನರನ್ನು ಹೊತ್ತು ಲಂಡನ್ನತ್ತ ಹಾರಿತು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಂದರೆ 1.38 ಕ್ಕೆ ಅಪಘಾತಕ್ಕೀಡಾಯಿತು. ವೈರಲ್ ಆಗಿರುವ ವಿಡಿಯೋಗಳನ್ನು ಒಮ್ಮೆ ನೋಡಿದ್ರೆ ಈ ವಿಮಾನ ಟೇಕ್ ಆಫ್ ಆಗಲು ಈ ವಿಮಾನ ಹೆಣಗಾಡುತ್ತಿರುವುದನ್ನು ಕಾಣಬಹುದು. ನಂತರ ಅದು ಲಿಫ್ಟ್ ಆಗಿ ನಿಯಂತ್ರಣ ಕಳೆದುಕೊಂಡು ಕಟ್ಟಡಕ್ಕೆ ಅಪ್ಪಳಿಸುತ್ತದೆ.
ತಜ್ಞರು ಹೇಳುವ ಪ್ರಕಾರ, ಸುರಕ್ಷತಾ ದಾಖಲೆಯನ್ನು ಹೊಂದಿದ ಬೋಯಿಂಗ್ 787-8 ಡ್ರೀಮ್‌ಲೈನರ್ ಮೇಲಕ್ಕೆ ಹಾರುತ್ತಿದ್ದಂತೆ ಒತ್ತಡವನ್ನು ಅನುಭವಿಸಿತು. ಪೈಲಟ್‌ಗಳು ಈ ಸಮಯದಲ್ಲಿ ವಿಮಾನದ ಲಿಫ್ಟ್ ಗೇರ್ ಮತ್ತು ಎತ್ತರವನ್ನು ಪಡೆಯಲು ನೊಗ ಪಂಪರ್ನ್ನು ಎಳೆಯುತ್ತಾರೆ. ಆದರೆ ಇದು ಯಾವುದು ಕೂಡ ಆ ಸಮಯದಲ್ಲಿ ಕೆಲಸಕ್ಕೆ ಬಂದಿಲ್ಲ. ಈ ಸಮಯದಲ್ಲಿ ಲ್ಯಾಂಡಿಂಗ್ ಗೇರ್ ಕೂಡ ಕೈಕೊಟ್ಟಿರಬಹುದು. ಇಂತಹ ಅಪಾಯದ ಸಮಯದಲ್ಲಿ ಪೈಲಟ್ ಮೇಡೇ ಎಂಬ ಕರೆಯನ್ನು ನೀಡುತ್ತಾರೆ. ಟೇಕ್ ಆಫ್ ಆದ ನಂತರ ಈ ಕರೆಯನ್ನು ನೀಡಲಾಯಿತು. 174 ನಾಟ್‌ಗಳು ವಿಮಾನದ ಗರಿಷ್ಠ ವೇಗವಾಗಿರುತ್ತದೆ. ಆದರೆ ಈ ವಿಮಾನದಲ್ಲಿ ಅದಕ್ಕಿಂತಲ್ಲೂ ವೇಗವಾಗಿತ್ತು. ಆದರೆ ಈ ವೇಳೆ ಇಂಜಿನ್ ಕೂಡ ಸಾಕಷ್ಟು ಶಕ್ತಿಯನ್ನು ಉತ್ಪಾದಿಸಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮೃತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ ಟಾಟಾ ಗ್ರೂಪ್
ಟೇಕ್-ಆಫ್ ಪ್ರಕ್ರಿಯೆ ಸರಿಯಾಗಿತ್ತು ಎಂಬುದನ್ನು ನಾವು ನಂಬುತ್ತೇವೆ. ಆದರೆ ಗೇರ್ ತೆಗೆದುಕೊಳ್ಳುವ ಮೊದಲು ವಿಮಾನ ಕೆಳಮುಖಕ್ಕೆ ಇಳಿದಿದೆ. ಎಂಜಿನ್ ಶಕ್ತಿಯನ್ನು ಕಳೆದುಕೊಂಡರೆ ಅಥವಾ ವಿಮಾನವು ಲಿಫ್ಟ್ ಗೇರ್ ಚಲಿಸುವುದನ್ನು ನಿಲ್ಲಿಸಿದರೆ ಮಾತ್ರ ಇಂತಹ ಅಪಾಯಗಳು ಸಂಭವಿಸುತ್ತದೆ. ಒಟ್ಟಾರೆಯಾಗಿ ತನಿಖೆಯ ನಂತರವೇ ನಿಖರವಾದ ಕಾರಣ ತಿಳಿಯುವುದು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:21 am, Fri, 13 June 25




