AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಲ್ಯಾಕ್ ಬಾಕ್ಸ್ ಸಂಗ್ರಹದಿಂದ ತನಿಖೆಯ ವರೆಗೆ, ವಿಮಾನ ಪತನದ ಕಾರಣ ಪತ್ತೆ ಹಚ್ಚೋದು ಹೇಗೆ? ಇಲ್ಲಿದೆ ಮಾಹಿತಿ

ಲಂಡನ್​​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್​ನಲ್ಲಿ ಪತನಗೊಂಡು ಸುಮಾರು 265 ಮಂದಿ ಮೃತಪಟ್ಟಿದ್ದಾರೆ. ಸದ್ಯ ವಿಮಾನ ಪತನಕ್ಕೆ ಕಾರಣಗಳೇನು ಎಂಬುದನ್ನು ವಿಶ್ಲೇಷಿಸಲಾಗುತ್ತಿದೆ. ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚಿ ದತ್ತಾಂಶ ಸಂಗ್ರಹಿಸುವುದು ತನಿಖೆಯ ಮೊದಲ ಭಾಗವಾಗಿರುತ್ತದೆ. ಹಾಗಾದರೆ, ವಿಮಾನ ದುರಂತದ ಒಟ್ಟಾರೆ ತನಿಖೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇಲ್ಲಿದೆ ಮಾಹಿತಿ.

ಬ್ಲ್ಯಾಕ್ ಬಾಕ್ಸ್ ಸಂಗ್ರಹದಿಂದ ತನಿಖೆಯ ವರೆಗೆ, ವಿಮಾನ ಪತನದ ಕಾರಣ ಪತ್ತೆ ಹಚ್ಚೋದು ಹೇಗೆ? ಇಲ್ಲಿದೆ ಮಾಹಿತಿ
ವಿಮಾನ ಪತನದ ಕಾರಣ ಪತ್ತೆ ಹಚ್ಚೋದು ಹೇಗೆ? ಇಲ್ಲಿದೆ ಮಾಹಿತಿ
Ganapathi Sharma
|

Updated on:Jun 13, 2025 | 12:59 PM

Share

ನವದೆಹಲಿ, ಜೂನ್ 13: ಗುಜರಾತ್​​ನ ಅಹಮದಾಬಾದ್​ನಲ್ಲಿ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI171 ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿ (Ahmedabad plane crash) ಭಾರಿ ದುರಂತ ಸಂಭವಿಸಿದೆ. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರು ಮಾತ್ರ ಪವಾಡ ಸದೃಶರಾಗಿ ಬದುಕುಳಿದಿದ್ದಾರೆ. ವಿಮಾನವು ಅಹಮದಾಬಾದ್​​ನ ಮೇಘನಿನಗರದಲ್ಲಿರುವ ವೈದ್ಯಕೀಯ ಕಾಲೇಜಿನ ಹಾಸ್ಟೆಲ್​​ಗೆ ಅಪ್ಪಳಿಸಿದ್ದರಿಂದ ಅಲ್ಲಿದ್ದವರೂ ಸಾವಿಗೀಡಾಗಿದ್ದಾರೆ. ಪರಿಣಾಮವಾಗಿ 265 ಮಂದಿ ಇಹಲೋಕ ತ್ಯಜಿಸಿದ್ದಾರೆ. ಸದ್ಯ, ಅಪಘಾತಕ್ಕೆ ಕಾರಣಗಳೇನು ಎಂಬುದನ್ನು ಕಂಡುಹಿಡಿಯಲು ವಿಮಾನಯಾನ ತಜ್ಞರು ಬ್ಲ್ಯಾಕ್ ಬಾಕ್ಸ್ ಶೋಧ ಹಾಗೂ ವಿಶ್ಲೇಷಣೆ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಈಗಾಗಲೇ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ನಿಗದಿಪಡಿಸಿದ ಅಂತರರಾಷ್ಟ್ರೀಯ ಪ್ರೋಟೋಕಾಲ್​​ಗಳಿಗೆ ಅನುಗುಣವಾಗಿ ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯವೂ ಒಳಗೊಂಡಂತೆ ವಿಮಾನಯಾನಕ್ಕೆ ಸಂಬಂಧಿಸಿದ ವಿವಿಧ ಸಂಸ್ಥೆಗಳ ತಜ್ಞರ ತಂಡ ಶೀಘ್ರದಲ್ಲೇ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಿದೆ. ಹಾಗಾದರೆ, ವಿಮಾನ ಅಪಘಾತದ ನಂತರ ತನಿಖೆ ಪ್ರಕ್ರಿಯೆ ಹೇಗಿರುತ್ತದೆ? ಹಂತಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಬ್ಲ್ಯಾಕ್​ ಬಾಕ್ಸ್ ಶೋಧ ಮತ್ತು ದತ್ತಾಂಶ ಸಂಗ್ರಹ

ಬ್ಲ್ಯಾಕ್​ ಬಾಕ್ಸ್ ಶೋಧ ಮಾಡಿ ಸಂಗ್ರಹಿಸುವುದು ಮತ್ತು ಅದನ್ನು ಪರೀಕ್ಷೆಗೆ ಒಳಪಡಿಸುವುದು ಮೊದಲ ಹಂತವಾಗಿದೆ. ವಿಮಾನ ಅಪಘಾತ ಸಂಭವಿಸಿದಾಗ, ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್​​​ಪಿಟ್ ವಾಯ್ಸ್ ರೆಕಾರ್ಡರ್ (CVR) ಸೇರಿದಂತೆ ಇತರ ರೆಕಾರ್ಡರ್​ಗಳಲ್ಲಿ ಸಂಗ್ರಹವಾದ ಡೇಟಾವನ್ನು ಪಡೆಯುವುದು ಮತ್ತು ವಿಶ್ಲೇಷಿಸುವುದರೊಂದಿಗೆ ತನಿಖೆ ಆರಂಭವಾಗುತ್ತದೆ.

ಇದನ್ನೂ ಓದಿ
Image
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
Image
ವಿಮಾನ ದುರಂತ ಘಟನೆ ಹೃದಯವಿದ್ರಾವಕ: ಅಹಮದಾಬಾದ್ ಭೇಟಿ ಬಳಿಕ ಪ್ರಧಾನಿ ಮೋದಿ
Image
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
Image
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ

ಬ್ಲ್ಯಾಕ್​ ಬಾಕ್ಸ್ ಮತ್ತು ಇತರ ರೆಕಾರ್ಡರ್​​ಗಳನ್ನು ಪ್ರಯೋಗಾಲಯಕ್ಕೆ ತಂದ ನಂತರ, ತಜ್ಞರು ಅವುಗಳ ಸ್ಥಿತಿಯನ್ನು ಪರಿಶೀಲಿಸುತ್ತಾರೆ. ಡೇಟಾವನ್ನು ಸುಲಭವಾಗಿ ರಿಟ್ರೀವ್ ಮಾಡಬಹುದೇ ಎಂದು ಪರಿಶೀಲಿಸುತ್ತಾರೆ. ಅವುಗಳು ಸಮರ್ಪಕ ಸ್ಥಿತಿಯಲ್ಲಿದ್ದರೆ ಡೇಟಾವನ್ನು ಸುಲಭವಾಗಿ ಡೌನ್​​ಲೋಡ್ ಮಾಡಿಕೊಳ್ಳಬಹುದು. ಆದರೆ, ಹಾನಿಗೊಳಗಾಗಿದ್ದರೆ ಡೇಟಾ ರಿಟ್ರೀವ್ ಮಾಡಲು ಹೆಚ್ಚಿನ ಶ್ರಮ ಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ತನಿಖೆಯ ಅತ್ಯಂತ ಸೂಕ್ಷ್ಮ ಅಂಶವೆಂದರೆ, ಕಾಕ್​ಪಿಟ್ ಧ್ವನಿ ರೆಕಾರ್ಡರ್ ಅನ್ನು ಪರಿಶೀಲಿಸುವುದು ಎಂದೂ ಅವರು ವಿವರಿಸಿದ್ದಾರೆ.

ವಿಮಾನದ ಒಳಗಿನ ವ್ಯವಸ್ಥೆಗಳ ಬಗ್ಗೆ ನೂರಾರು ವಿವರಗಳನ್ನು ಫ್ಲೈಟ್ ಡೇಟಾ ರೆಕಾರ್ಡರ್​​​ಗಳು ಸಂಗ್ರಹಿಸುತ್ತವೆ. ಇದು ತನಿಖಾಧಿಕಾರಿಗಳು ಅಪಘಾತದ ಮೊದಲು ಏನಾಯಿತು ಎಂಬ ಮಾಹಿತಿ ಕಲೆಹಾಕಲು ಸಹಾಯ ಮಾಡುತ್ತದೆ.

ತನಿಖೆ ಪ್ರಕ್ರಿಯೆ

ಅಹಮದಾಬಾದ್​ನಲ್ಲಿ ಸಂಭವಿಸಿದಂತೆ ಪ್ರಮುಖವಿಮಾನ ಅಪಘಾತಗಳ ಸಂದರ್ಭದಲ್ಲಿ ಅವಶೇಷಗಳನ್ನು ಪರೀಕ್ಷಿಸಲು, ವೀಡಿಯೊಗ್ರಾಫ್ ಮಾಡಲು ಮತ್ತು ಛಾಯಾಚಿತ್ರ ಸೆರೆಹಿಡಿಯಲು ಒಂದು ತಂಡವನ್ನು ನಿಯೋಜಿಸಲಾಗುತ್ತದೆ. ಈ ತಂಡ ಸಂಗ್ರಹಿಸಿದ ವಿಡಿಯೋ, ಫೋಟೊಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತದೆ. ಈ ಪರೀಕ್ಷಾ ಫಲಿತಾಂಶಗಳು ಲ್ಯಾಂಡಿಂಗ್, ವೇಗ ಮತ್ತು ಕೋನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಬಹುದು.

ಇದನ್ನೂ ಓದಿ:   ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್​​ಲೈನರ್ ಅಸಾಮಾನ್ಯ ಸಾಮರ್ಥ್ಯವಿರುವ ವಿಮಾನ; ಆದರೂ ಹೀಗಾಗಿದ್ದು ಆಶ್ಚರ್ಯ !

ಆದರೆ, ವಿಮಾನವು ಸುಟ್ಟು ಬೂದಿಯಾಗಿದ್ದರೆ ಅಂಥ ಸಂದರ್ಭಗಳಲ್ಲಿ ಅವಶೇಷಗಳ ಪರೀಕ್ಷೆಯು ಹೆಚ್ಚಿನ ಮಾಹಿತಿ ಒದಗಿಸಲಾರದು. ಪ್ರಯಾಣಿಕರ ಆಸನಗಳು, ಪ್ರೊಪೆಲ್ಲರ್​​​ಗಳು ಮತ್ತು ರೆಕ್ಕೆಗಳು ಸಹ ತನಿಖಾಧಿಕಾರಿಗಳಿಗೆ ತನಿಖೆಗೆ ಹೆಚ್ಚಿನ ನೆರವು ನೀಡಬಹುದು ಎಂದು ವಿಮಾನಯಾನ ಸುರಕ್ಷತಾ ಸಂಸ್ಥೆ ‘ಮಾರ್ಟಿನ್ ಕನ್ಸಲ್ಟೆನ್ಸಿ’ಯ ಸಿಇಒ ಮತ್ತು ಸಂಸ್ಥಾಪಕ ಮಾರ್ಕ್ ಮಾರ್ಟಿನ್ ತಿಳಿಸಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.

ಮೂವರು ಸದಸ್ಯರ ಸಮಿತಿಯಿಂದ ವಿಚಾರಣೆ

ವಿಮಾನ ಪತನ ದುರಂತದ ತನಿಖೆಯ ಮುಂದಿನ ಹಂತವೆಂದರೆ, ಮೂವರು ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡವುದು. ಈ ಸಮಿತಿಯು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಬದುಕುಳಿದವರ ಸಾಕ್ಷ್ಯಗಳು, ಎಂಜಿನಿಯರ್​​​ಗಳು, ವಿಮಾನಯಾನ ಸಂಸ್ಥೆಯ ಸಿಇಒ, ಎಟಿಸಿ ಸಿಬ್ಬಂದಿ ಮತ್ತು ಅಪಘಾತಕ್ಕೆ ಸಂಬಂಧಿಸಿದ ಮಾಹಿತಿಯುಳ್ಳ ಎಲ್ಲರಿಂದ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತ್ತದೆ ಎಂದು ಮಾರ್ಟಿನ್ ಹೇಳಿದ್ದಾರೆ.

ತಜ್ಞರು ಕಲೆಹಾಕಿದ ಮಾಹಿತಿಗಳ ವರದಿ ಸಂಗ್ರಹ

ಎಲ್ಲಾ ದತ್ತಾಂಶಗಳನ್ನು ವಿಶ್ಲೇಷಿಸಿದ ನಂತರ, ತಜ್ಞರು ಕಲೆಹಾಕಿದ ಮಾಹಿತಿಗಳ ವರದಿ ಸಂಗ್ರಹ ಮಾಡಲಾಗುತ್ತದೆ. ಆ ವರದಿಯು ಅಪಘಾತದ ವಾಸ್ತವಿಕ ಸಾರಾಂಶ, ತಾಂತ್ರಿಕ ಸಂಶೋಧನೆಗಳು, ಹಾರಾಟದ ದತ್ತಾಂಶದ ವಿಶ್ಲೇಷಣೆ, ಕಾಕ್​​​ಪಿಟ್ ಆಡಿಯೋ, ಅಧಿಕೃತ ಹೇಳಿಕೆಗಳು, ಅಪಘಾತದ ಸಂಭವನೀಯ ಕಾರಣ ಮತ್ತು ಇದೇ ರೀತಿಯ ಘಟನೆಗಳನ್ನು ತಡೆಗಟ್ಟಲು ಸುರಕ್ಷತಾ ಶಿಫಾರಸುಗಳ ಪಟ್ಟಿಯನ್ನು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Fri, 13 June 25

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್