Gujarat Plane Crash: ಅಹಮದಾಬಾದ್ ವಿಮಾನ ನಿಲ್ದಾಣದಲ್ಲೇ ಸಚಿವ ಮತ್ತು ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಭೆ
ಸಭೆಯಲ್ಲಿ ಪ್ರಮುಖವಾಗಿ ವಿಮಾನ ದುರಂತಕ್ಕೆ ಕಾರಣವಾದ ಅಂಶಗಳು, ಮೃತರ ಬಗ್ಗೆ ಮಾಹಿತಿ, ಅವರ ಕುಟುಂಬಗಳು ಮತ್ತು ಗಾಯಾಳುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪರಿಹಾರ ಮೊದಲಾದ ವಿಷಯಗಳ ಮೇಲೆ ಚರ್ಚೆ ನಡೆಸಲಾಯಿತು. ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿರುವ ಟಾಟಾ ಕಂಪನಿಗಳ ಸಮೂಹವು ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರವನ್ನು ಘೋಷಿಸಿದೆ.
ಅಹಮದಾಬಾದ್, ಜೂನ್ 13: ಗುಜರಾತಿನ ಪ್ರಮುಖ ನಗರ ಅಹಮದಾಬಾದ್ನಲ್ಲಿ ನಿನ್ನೆ ನಡೆದ ವಿಮಾನ ದುರಂತ ಸ್ಥಳ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿಯಾದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಗರದ ಸರ್ದಾರ್ ವಲ್ಲಭ್ಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ಲಾಣದಲ್ಲೇ (Sardar Vallabhbhai Patel International Airport,) ಒಂದು ಸಭೆಯನ್ನು ನಡೆಸಿದರು. ಕೇಂದ್ರ ವಿಮಾನಯಾನ ಖಾತೆ ಸಚಿವ ರಾಮ್ ಮೋಹನ್ ನಾಯ್ಡು, ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಇತರ ಸಚಿವರು, ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಿದರು.
ಇದನ್ನೂ ಓದಿ: Gujarat Plane Crash: ಅಗ್ನಿಶಾಮಕ ದಳ ಸಿಬ್ಬಂದಿ ಸುರಿದ ನೀರು ಸಹ ಸ್ಥಳದಲ್ಲಿ ಕೆಂಡದಂತೆ ಸುಡುತಿತ್ತು: ಪ್ರತ್ಯಕ್ಷದರ್ಶಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos