Gujarat Plane Crash: ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯೊಂದಿಗೆ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ
ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರೆಲ್ಲ ದುರಂತದಲ್ಲಿ ಮಡಿದರೂ ಕೇವಲ ರಮೇಶ್ ಮಾತ್ರ ಬದುಕುಳಿದಿರುವುದು ಪವಾಡವಲ್ಲದೆ ಮತ್ತೇನೂ ಅಲ್ಲ. 40-ವರ್ಷ ವಯಸ್ಸಿನ ಅವರು ತಮ್ಮ ಸಹೋದರನನ್ನು ಭೇಟಿಯಾಗಲು ಭಾರತಕ್ಕೆ ಬಂದಿದ್ದರಂತೆ. ಸಹೋದರ ಅಜಯ್ ಕುಮಾರ್ ರಮೇಶ್ ಸಹ ಅವರೊಂದಿಗೆ ಇದೇ ವಿಮಾನದಲ್ಲಿ ಲಂಡನ್ಗೆ ಪ್ರಯಾಣಿಸುತ್ತಿದ್ದರು, ಆದರೆ ಅವರು ಬದುಕುಳಿದಿಲ್ಲ.
ಅಹಮದಾಬಾದ್, ಜೂನ್ 13: ನಿನ್ನೆ ನಗರದಲ್ಲಿ ನಡೆದ ವಿಮಾನ ದುರಂತದಲ್ಲಿ ಎಲ್ಲ ಪ್ರಯಾಣಿಕರು ಸತ್ತರೂ ಒಬ್ಬ ವ್ಯಕ್ತಿ ಮಾತ್ರ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಅವರ ಹೆಸರು ರಮೇಶ್ ವಿಶ್ವಾಸ್ಕುಮಾರ್ ಮತ್ತು ಬ್ರಿಟನ್ ದೇಶದ ಪ್ರಜೆ. ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಸಿವಿಲ್ ಆಸ್ಪತ್ರೆಗೆ ತೆರಳಿ ರಮೇಶ್ ಮತ್ತು ಗಾಯಗೊಂಡಿರುವ ಇತರ ಜನರನ್ನು ಮಾತಾಡಿಸಿದರು. ರಮೇಶ್ ತಾನು ಹೇಗೆ ಬಚಾವಾದೆ ಅಂತ ಪ್ರಧಾನಿ ಮೋದಿಯವರಿಗೆ ವಿವರಿಸಿದರು. ವಿಮಾನ ಅಪ್ಪಳಿಸುವ ವಿಷಯ ಗೊತ್ತಾಗುತ್ತಿದ್ದಂತೆ ರಮೇಶ್ ಎಮರ್ಜೆನ್ಸಿ ಎಕ್ಸಿಟ್ ಓಪನ್ ಮಾಡಿ ಕೆಳಗೆ ಧುಮುಕಿದರಂತೆ. ಅವರು ಹೇಳೋದನ್ನು ಪ್ರಧಾನಿ ಮೋದಿ ಗಮನವಿಟ್ಟು ಕೇಳಿದರು.
ಇದನ್ನೂ ಓದಿ: Gujarat Plane Crash: ಒಂದು ವಾರದ ಹಿಂದೆಯೇ ವಿಮಾನ ಅಪಘಾತದ ಭವಿಷ್ಯ ನುಡಿದಿದ್ದ ಜ್ಯೋತಿಷಿ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ