Gujarat Plane Crash: ಉಕ್ಕಿನ ಹಕ್ಕಿಗೆ ಪೆಟ್ಟು ಬೀಳ್ತೈತಪ್ಪ ಅಂತ ಕಾಲಜ್ಞಾನ ನುಡಿದಿದ್ದ ಬೆಳಗಾವಿ ಸ್ವಾಮೀಜಿ
ಬೆಳಗಾವಿ ನಗರದಲ್ಲಿ ಪ್ರತಿವರ್ಷ ಸುಖದೇವಾನಂದ ಮಠದ ಜಾತ್ರೆ ನಡೆಯುತ್ತದೆ ಮತ್ತು ಸಹಸ್ರಾರು ಜನ ಅದರಲ್ಲಿ ಭಾಗವಹಿಸುತ್ತಾರೆ. ಅಭಿನವ ಸಿದ್ಧಲಿಂಗ ಸ್ವಾಮೀಜಿಯವರು ಜಾತ್ರೆ ನಡೆಯುತ್ತಿದ್ದಾಗ ಬೆಂಕಿ ಕೆಂಡದ ಮೇಲೆ ನಡೆದು ಕಾಲಜ್ಞಾನ ನುಡಿದಿದ್ದರು. ಅವರು ನುಡಿದ ಭವಿಷ್ಯ ಹೆಚ್ಚು ಕಡಿಮೆ ಎರಡು ತಿಂಗಳ ಅವಧಿಯಲ್ಲಿ ನಿಜವಾಗಿದೆ.
ಅಹಮದಾಬಾದ್, ಜೂನ್ 13: ನಿನ್ನೆ ನಡೆದ ವಿಮಾನ ದುರಂತ (plane crash) ಭಾರತವನ್ನು ತತ್ತರಿಸುವಂತೆ ಮಾಡಿದೆ. ದೇಶದಲ್ಲಿ ವಿಮಾನ ದುರಂತ ಸಂಭವಿಸಲಿದೆ ಎಂದು ಸ್ವಾಮೀಜಿಯೊಬ್ಬರು ಕಾಲಜ್ಞಾನ, ಭವಿಷ್ಯ ನುಡಿದಿದ್ದರು ಎಂದರೆ ನೀವು ನಂಬ್ತೀರಾ? ಈ ವಿಡಿಯೋದಲ್ಲಿದೆ ಅದಕ್ಕೆ ಪುರಾವೆ. ಬೆಳಗಾವಿಯ ನಯಾನಗರದಲ್ಲಿರುವ ಸುಖದೇವಾನಂದ ಸ್ವಾಮೀಜಿ ಮಠದ ಸ್ವಾಮೀಜಿ ಅಭಿನವ ಸಿದ್ಧಲಿಂಗ ಸ್ವಾಮೀಜಿಯವರು, ಬೆಂಕಿ ಪ್ರಬಲವಾಗಿರುತ್ತದೆ, ಊರೇ ನಡುಗುಹೋಗಲಿದೆ, ಉಕ್ಕಿನ ಹಕ್ಕಿಗೆ ಪೆಟ್ಟು ಬೀಳಲಿದೆ ಎಂದು ಅವರು ಏಪ್ರಿಲ್ 20ರಂದು ನಡೆದ ಜಾತ್ರೆಯಲ್ಲಿ ಭವಿಷ್ಯವಾಣಿ ನುಡಿದಿದ್ದರು. ಅವರು ಹೇಳೋದನ್ನು ಕೇಳಿಸಿಕೊಳ್ಳಬಹುದು.
ಇದನ್ನೂ ಓದಿ: Gujarat Plane Crash: ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯೊಂದಿಗೆ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ