AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gujarat Plane Crash: ಅಗ್ನಿಶಾಮಕ ದಳ ಸಿಬ್ಬಂದಿ ಸುರಿದ ನೀರು ಸಹ ಸ್ಥಳದಲ್ಲಿ ಕೆಂಡದಂತೆ ಸುಡುತಿತ್ತು: ಪ್ರತ್ಯಕ್ಷದರ್ಶಿ

Gujarat Plane Crash: ಅಗ್ನಿಶಾಮಕ ದಳ ಸಿಬ್ಬಂದಿ ಸುರಿದ ನೀರು ಸಹ ಸ್ಥಳದಲ್ಲಿ ಕೆಂಡದಂತೆ ಸುಡುತಿತ್ತು: ಪ್ರತ್ಯಕ್ಷದರ್ಶಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 13, 2025 | 10:21 AM

Share

ಸುಮಾರು 200-250 ಶವಗಳನ್ನು ಸಾಗಿಸುವ ದೃಶ್ಯವನ್ನು ತಾನು ನೋಡಿರುವುದಾಗಿ ಸುರೇಶ್ ಹೇಳುತ್ತಾರೆ. ವಿಮಾನ ಅಪ್ಪಳಿಸಿದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದ ಕಾರಣ ಅಲ್ಲಿ ಏನು ನಡೆಯುತ್ತಿದೆ ಅಂತ ದೂರ ನಿಂತ ಜನಕ್ಕೆ ಗೊತ್ತಾಗುತ್ತಿರಲಿಲ್ಲ, ದೃಶ್ಯ ಭಯಾನಕವಾಗಿತ್ತು, ಮೆಡಿಕಲ ಕಾಲೇಜು ಹಾಸ್ಟೆಲ್​ನಲ್ಲಿ ಊಟ ಮಾಡುತ್ತಿದ್ದ ಕಿರಿಯ ವೈದ್ಯರು ಸಹ ಸಾವನ್ನಪ್ಪಿದ್ದಾರೆ ಎಂದು ಸುರೇಶ್ ಹೇಳುತ್ತಾರೆ.

ಅಹಮದಾಬಾದ್, ಜೂನ್ 13: ನಿನ್ನೆ ಮಧ್ಯಾಹ್ನ ನಗರದ ಮೇಘಾನಿ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡ ದುರಂತದಲ್ಲಿ ಸತ್ತವರ ಸಂಖ್ಯೆ (death toll) ಹೆಚ್ಚುತ್ತಲೇ ಇದೆ. ಶವಗಳನ್ನು ಇನ್ನೂ ಹೊರ ತೆಗೆಯುತ್ತಿರುವುದರಿಂದ ಬಲಿಯಾದವರ ಸಂಖ್ಯೆ ನಿಖರವಾಗಿ ಗೊತ್ತಾಗುತ್ತಿಲ್ಲ. ದುರ್ಘಟನೆ ಸಂಭವಿಸಿದ್ದನ್ನು ಕಣ್ಣಾರೆ ನೋಡಿದ ಸುರೇಶ್ ಹೆಸರಿನ ವ್ಯಕ್ತಿಯೊಂದಿಗೆ ನಮ್ಮ ವರದಿಗಾರ ಮಾತಾಡಿದ್ದಾರೆ. ನನ್ನ ಮನೆ ಹತ್ತಿರದಲ್ಲೇ ಇದೆ, ಅದು ಭೀಕರ ದುರಂತ, ಜನರನ್ನು ಹತ್ತಿರಹೋಗಲು ಬಿಡಲಿಲ್ಲ, ಪೊಲೀಸರು ಸ್ಥಳವನ್ನು ಸುತ್ತುವರಿದಿದ್ದರು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದದ್ದರು, ಅಲ್ಲಿ ಹರಿದುಬರುತ್ತಿದ್ದ ನೀರು ಸಹ ಕೆಂಡದಂತೆ ಸುಡುತಿತ್ತು ಎಂದು ಸುರೇಶ್ ಹೇಳುತ್ತಾರೆ.

ಇದನ್ನೂ ಓದಿ:   ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್​​ಲೈನರ್ ಅಸಾಮಾನ್ಯ ಸಾಮರ್ಥ್ಯವಿರುವ ವಿಮಾನ; ಆದರೂ ಹೀಗಾಗಿದ್ದು ಆಶ್ಚರ್ಯ !

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ