ಡ್ರೋನ್ ಪ್ರತಾಪ್ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
‘ಬಿಗ್ ಬಾಸ್’ ಬಳಿಕ ಡ್ರೋನ್ ಪ್ರತಾಪ್ ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ಭಾಗಿ ಆದರು. ಆ ಬಳಿಕ ಅವರ ಖ್ಯಾತಿ ಹೆಚ್ಚಾಗಿದೆ. ಈಗ ಅವರ ಸಹ ಜೋಡಿ ಗಗನಾ ತಬ್ಬಿಕೊಳ್ಳೋ ಆಸೆ ಮೂಡಿದೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ಹಂಚಿಕೊಂಡಿದೆ.
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಡ್ರೋನ್ ಪ್ರತಾಪ್ (Drone Prathap) ಅವರು ಕಾಣಿಸಿಕೊಂಡಿದ್ದಾರೆ. ಅವರಿಗೆ ಜೊತೆಯಾಗಿ ಗಗನಾ ಇದ್ದಾರೆ. ಇತ್ತೀಚೆಗೆ ಗಗನಾ ಅವರ ಹುಟ್ಟೂರಿಗೆ ಡ್ರೋನ್ ಪ್ರತಾಪ್ ತೆರಳಿದ್ದಾರೆ. ಈ ವೇಳೆ ಅಡುಗೆಯ ಮನೆಯಲ್ಲಿ ನಡೆದ ಒಂದು ಘಟನೆ ಬಗ್ಗೆ ವೇದಿಕೆ ಮೇಲೆ ಪ್ರತಾಪ್ ಮಾತನಾಡಿದ್ದಾರೆ. ‘ಅಡುಗೆ ಮನೆಯಲ್ಲಿ ಗಗನನ ತಬ್ಬಿಕೊಳ್ಳೋ ಆಸೆ ನನಗೆ ಮೂಡಿತು’ ಎಂದು ವೇದಿಕೆ ಮೇಲೆ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.