AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ದುರಂತ: ಪ್ರಧಾನಿ ಏಕೆ ರಾಜೀನಾಮೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್

ವಿಮಾನ ದುರಂತ: ಪ್ರಧಾನಿ ಏಕೆ ರಾಜೀನಾಮೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್

ರಮೇಶ್ ಬಿ. ಜವಳಗೇರಾ
|

Updated on: Jun 13, 2025 | 5:50 PM

Share

ಗುಜರಾತಿನ ಅಹಮದಾಬಾದ್‌ನಲ್ಲಿ ಸಂಭವಿಸಿದೆ ವಿಮಾನ ಅಪಘಾತದಲ್ಲಿ ಒಟ್ಟು 265 ಜನ ಸಾವನ್ನಪ್ಪಿದ್ದಾರೆ. ಇನ್ನು ಈ ದುರಂತದ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಕೆಲವರು ಈ ದುರಂತಕ್ಕೆ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕೆಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದಕ್ಕೆ ಇದೀಗ ಸಿ.ಎಂ. ಇಬ್ರಾಹಿಂ ಪ್ರತಿಕ್ರಿಯಿಸಿ, ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಬೆಂಗಳೂರು, (ಜೂನ್ 13): ಗುಜರಾತಿನ ಅಹಮದಾಬಾದ್‌ನಲ್ಲಿ ಸಂಭವಿಸಿದೆ ವಿಮಾನ ಅಪಘಾತದಲ್ಲಿ ಒಟ್ಟು 265 ಜನ ಸಾವನ್ನಪ್ಪಿದ್ದಾರೆ. ಇನ್ನು ಈ ದುರಂತದ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಕೆಲವರು ಈ ದುರಂತಕ್ಕೆ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕೆಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದಕ್ಕೆ ಇದೀಗ ಸಿ.ಎಂ. ಇಬ್ರಾಹಿಂ ಪ್ರತಿಕ್ರಿಯಿಸಿ, ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಪ್ರಕರಣಕ್ಕೂ ಪ್ರಧಾನಿ ಮೋದಿಗೆ ಏನು ಸಂಬಂಧ? ಮೋದಿ ಏನು ಪೈಲೆಟಾ? ಅವರು ಏಕೆ ರಾಜೀನಾಮೆ ಕೊಡಬೇಕು? ನಾಗರಿಕ ವಿಮಾನಯಾನ ಸಚಿವರು ರಾಜೀನಾಮೆ ಕೊಡಬೇಕು. ವಿಮಾನದ ಇಂಜಿನ್ ಫೆಲ್ಯೂರ್ ಆಗಿದ್ರೆ ಹೇಗೆ? ಟೇಕಾಫ್​​ಗೂ ಮುನ್ನ ಎಲ್ಲಾ ಕ್ಲಿಯರೆನ್ಸ್ ಆಗಿದೆ ಅಂತಾ ಅಲ್ವಾ? ಎಂದು ಹೇಳಿದರು.