Gujarat Plane Crash: ಕುಟುಂಬದೊಂದಿಗೆ ಬಲಿಯಾದ ಪ್ರತೀಕ್ ಜೋಶಿಯನ್ನು ನೆನೆದು ದುಃಖಿಸುತ್ತಿರುವ ಸಹಪಾಠಿಗಳು
ಪ್ರತೀಕ್ ನಿರಂತರವಾಗಿ ಸಂಪರ್ಕದಲ್ಲಿದ್ದರು, ನಮ್ಮದೊಂದು ವಾಟ್ಸ್ಯಾಪ್ ಗ್ರೂಪಿದೆ, ಬಹಳ ಜಾಲಿ ವ್ಯಕ್ತಿಯಾಗಿದ್ದರು, ಅವರೀಗ ಇಲ್ಲ ಅನ್ನೋದೇ ನಂಬಲಾಗುತ್ತಿಲ್ಲ, ನಮ್ಮ ಬ್ಯಾಚ್ 25ನೇ ವರ್ಷದ ರೀಯೂನಿಯನ್ ಒಂದನ್ನು ಸೆಪ್ಟೆಂಬರ್ನಲ್ಲಿ ಪ್ಲ್ಯಾನ್ ಮಾಡಿದ್ದೆವು, ಈಗ ಅದು ಸಾಧ್ಯವಾಗಲಾರದು ಎಂದು ಮತ್ತೊಬ್ಬ ಸಹಪಾಠಿ ಹೇಳುತ್ತಾರೆ. ಭಾರೀ ದುರಂತ ಮತ್ತು ಆಘಾತಕಾರಿ ಎಂದು ಮತ್ತೊಬ್ಬರು ಹೇಳುತ್ತಾರೆ.
ಬೆಳಗಾವಿ, ಜೂನ್ 13: ನಗರದ ಕೆಎಲ್ಇ ಮೆಡಿಕಲ್ ಕಾಲೇಜು (KLE Medical College) ವಿದ್ಯಾರ್ಥಿಯಾಗಿದ್ದ ಪ್ರತೀಕ್ ಜೋಶಿ ಮತ್ತು ಅವರ ಕುಟುಂಬ ನಿನ್ನೆ ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ದಾರುಣ ಸಾವನಪ್ಪಿದ್ದು ಅವರ ಸಹಪಾಠಿಗಳನ್ನು ಅಪಾರ ದುಃಖಕ್ಕೆ ದೂಡಿದೆ. ನಮ್ಮ ಬೆಳಗಾವೊ ವರದಿಗಾರನೊಂದಿಗೆ ಮಾತಾಡಿರುವ ಅವರು, ದುರಂತ ನೆನೆದು ಬಹಳ ಬೇಜಾರು ಮತ್ತು ದುಃಖವಾಗುತ್ತಿದೆ, ಅವರ ಇಡೀ ಫ್ಯಾಮಿಲಿ ದುರ್ಘಟನೆಗೆ ಬಲಿಯಾಗಿದೆ, ಅವರ ಚಿಕ್ಕಮಕ್ಕಳ ಬಗ್ಗೆ ಯೋಚಿಸಿದರೆ ಅತೀವ ವೇದನೆಯಾಗತ್ತದೆ, ಅವರ ತಂದೆತಾಯಿಗಳಿಗೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಒಬ್ಬ ಸಹಪಾಠಿ ಹೇಳಿದರು.
ಇದನ್ನೂ ಓದಿ: Ahmedabad plane crash: ಲಕ್ಕಿ ನಂಬರೇ ಅನ್ಲಕ್ಕಿಯಾಯ್ತು! 1206 ಸಂಖ್ಯೆಯನ್ನೇ ನಂಬಿದ್ದ ವಿಜಯ್ ರೂಪಾನಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ