Gujarat Plane Crash: ಬ್ಲ್ಯಾಕ್ ಬಾಕ್ಸ್ ಇನ್ನೂ ಪತ್ತೆಯಾಗಿಲ್ಲವೆಂದು ಸ್ಪಷ್ಟಪಡಿಸಿದ ಏರ್ ಇಂಡಿಯಾ
ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡುಗಳ ನಂತರ ಪತನಗೊಳ್ಳಲು ಕಾರಣವೇನು ಅನ್ನೋದು ಎಲ್ಲರನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ತನಿಖೆಗೆ ಸಹಾಯ ಮಾಡೋದಾಗಿ ಹೇಳಿರುವ ಅಮೆರಿಕ, ತಜ್ಞರ ತಂಡವೊಂದನ್ನು ಕಳಿಸಿದೆ. ಬೋಯಿಂಗ್ ವಿಮಾನಗಳ ಕ್ಷಮತೆಯ ಬಗ್ಗೆಯೂ ಪ್ರಶ್ನೆ ಎದ್ದಿರೋದ್ರಿಂದ ತನಿಖೆ ಮುಗಿಯುವರೆಗೆ ಅವುಗಳ ಹಾರಾಟ ಸ್ಥಗಿತಗೊಳಿಸಲು ಸರ್ಕಾರ ಸೂಚಿಸಿದೆ.
ಬೆಂಗಳೂರು, ಜೂನ್ 13: ನಿನ್ನೆ ದುರಂತಕ್ಕೊಳಗಾದ ಏರ್ ಇಂಡಿಯ ವಿಮಾನದ ಬ್ಲ್ಯಾಕ್ ಬಾಕ್ಸ್ ಇನ್ನು ಲಭ್ಯವಾಗಿಲ್ಲ, ಅದು ಸಿಕ್ಕಿದೆ ಕೆಲವು ಕಡೆ ವರದಿಯಾಗಿತ್ತು. ಅದರೆ, ಏರ್ ಇಂಡಿಯಾದ ಅಧಿಕಾರಿಗಳು ನೀಡಿರುವ ಸ್ಪಷ್ಟನೆ ಪ್ರಕಾರ ಬ್ಲ್ಯಾಕ್ ಬಾಕ್ಸ್ ಇದುವರೆಗೆ ಸಿಕ್ಕಿಲ್ಲ, ಸಿಕ್ಕಿದೆ ಅಂತ ಹೇಳುತ್ತಿರೋದು ಗಾಳಿ ಸುದ್ದಿ. ವಿಮಾನ ದುರಂತ ಸಂಭವಿಸಿದಾಗ ಬ್ಲ್ಯಾಕ್ ಬಾಕ್ಸ್ ನೀಡುವ ಮಾಹಿತಿಯಿಂದಲೇ ದುರಂತ ಯಾಕೆ ಸಂಭವಿಸಿತು, ಹೇಗೆ ಸಂಭವಿಸಿತು, ಪತನಕ್ಕೆ ತಾಂತ್ರಿಕ ದೋಷಗಳು ಕಾರಣವಾದವೇ ಅಥವಾ ಬೇರೆ ಕಾರಣಗಳೇ ಎಂಬೆಲ್ಲ ಸಂಗತಿಗಳನ್ನು ಅದು ತಿಳಿಸುತ್ತದೆ. ಅದಿಲ್ಲದೆ ಯಾವುದೇ ನಿರ್ಣಯಕ್ಕೆ ಬರೋದು ಸಾಧ್ಯವಿಲ್ಲ. ಪರ್ವತ ಪ್ರದೇಶಗಳಲ್ಲಿ ವಿಮಾನ ದುರಂತ ಸಂಭವಿಸಿದ ಎಷ್ಟೋ ದಿನಗಳ ನಂತರ ಬ್ಲ್ಯಾಕ್ ಬಾಕ್ಸ್ ಸಿಕ್ಕಿರುವ ಪ್ರಸಂಗಗಳೂ ಇವೆ.
ಇದನ್ನೂ ಓದಿ: ಟೇಕಾಫ್ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ