ಉಗುರು ಕಚ್ಚೋ ಅಭ್ಯಾಸ ಇದೆಯಾ? ಹಾಗಿದ್ರೆ ಇದನ್ನು ಓದಿ

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸವಿರುತ್ತೆ. ಕೆಲವರು ಕುಳಿತಿದ್ದಾಗ ಕಾಲನ್ನು ಅಲ್ಲಾಡಿಸಿದ್ರೆ, ಕೆಲವರಿಗೆ ಕೂದಲು ಬಾಯಲ್ಲಿ ಇಟ್ಟುಕೊಳ್ಳುವ ಅಭ್ಯಾಸ. ಇಂತಹ ಅಭ್ಯಾಸಗಳಲ್ಲಿ ಒಂದು ಉಗುರು ಕಚ್ಚೋದು. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಉಗುರು ಕಚ್ಚುವುದು ರಾಕ್ಷಸ ಗುಣವನ್ನು ಪ್ರೇರೇಪಿಸುತ್ತೆ. ಅಲ್ಲದೇ ಉಗುರಿನಲ್ಲಿರುವ ಮಣ್ಣು, ಕ್ರಿಮಿಕೀಟಗಳು ದೇಹದಲ್ಲಿ ಪ್ರವೇಶಿಸಿ ನಮಗೆ ಅಶಾಂತಿಯನ್ನು ಉಂಟುಮಾಡುತ್ತೆ. ನಮ್ಮ ದೇಹದ ಕೈಕಾಲುಗಳಲ್ಲಿರುವ ಉಗುರುಗಳು ಅತ್ಯಂತ ವಿಷಪೂರಿತವಾಗಿರುತ್ತವೆ. ಹೀಗಾಗೇ ನಮ್ಮ ಧರ್ಮಶಾಸ್ತ್ರ ಉಗುರು ಕಚ್ಚುವ ಅಭ್ಯಾಸವು ದಾರಿದ್ರ್ಯದ ಪ್ರತಿರೂಪವೆಂದು ಹೇಳುತ್ತೆ. […]

ಉಗುರು ಕಚ್ಚೋ ಅಭ್ಯಾಸ ಇದೆಯಾ? ಹಾಗಿದ್ರೆ ಇದನ್ನು ಓದಿ
Follow us
ಸಾಧು ಶ್ರೀನಾಥ್​
|

Updated on:Dec 13, 2019 | 1:42 PM

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸವಿರುತ್ತೆ. ಕೆಲವರು ಕುಳಿತಿದ್ದಾಗ ಕಾಲನ್ನು ಅಲ್ಲಾಡಿಸಿದ್ರೆ, ಕೆಲವರಿಗೆ ಕೂದಲು ಬಾಯಲ್ಲಿ ಇಟ್ಟುಕೊಳ್ಳುವ ಅಭ್ಯಾಸ. ಇಂತಹ ಅಭ್ಯಾಸಗಳಲ್ಲಿ ಒಂದು ಉಗುರು ಕಚ್ಚೋದು. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ.

ಉಗುರು ಕಚ್ಚುವುದು ರಾಕ್ಷಸ ಗುಣವನ್ನು ಪ್ರೇರೇಪಿಸುತ್ತೆ. ಅಲ್ಲದೇ ಉಗುರಿನಲ್ಲಿರುವ ಮಣ್ಣು, ಕ್ರಿಮಿಕೀಟಗಳು ದೇಹದಲ್ಲಿ ಪ್ರವೇಶಿಸಿ ನಮಗೆ ಅಶಾಂತಿಯನ್ನು ಉಂಟುಮಾಡುತ್ತೆ. ನಮ್ಮ ದೇಹದ ಕೈಕಾಲುಗಳಲ್ಲಿರುವ ಉಗುರುಗಳು ಅತ್ಯಂತ ವಿಷಪೂರಿತವಾಗಿರುತ್ತವೆ. ಹೀಗಾಗೇ ನಮ್ಮ ಧರ್ಮಶಾಸ್ತ್ರ ಉಗುರು ಕಚ್ಚುವ ಅಭ್ಯಾಸವು ದಾರಿದ್ರ್ಯದ ಪ್ರತಿರೂಪವೆಂದು ಹೇಳುತ್ತೆ.

ನಾವು ಆಹಾರವನ್ನು ಸೇವಿಸುವಾಗ ಅಜಾಗರೂಕತೆಯಿಂದ ಉಗುರು ನಮ್ಮ ದೇಹ ಸೇರಿದ್ರೆ ಕರುಳಿಗೆ ತೊಂದರೆಯಾಗುತ್ತೆ. ಈ ಕಾರಣದಿಂದಾಗೇ ಉಗುರನ್ನು ಮನೆಯ ಒಳಗೆ ಕತ್ತರಿಸಬಾರದು ಎನ್ನಲಾಗುತ್ತೆ. ವೈದ್ಯಶಾಸ್ತ್ರದ ಪ್ರಕಾರ, ಉಗುರು ಕಚ್ಚುವುದು ಕ್ಯಾಲ್ಸಿಯಂ ಕೊರತೆಯ ಲಕ್ಷಣ ಎನ್ನಲಾಗುತ್ತೆ. ಕೆಲವರು ಮಾಡಲು ಕೆಲಸವಿಲ್ಲದೇ ಕೂತಾಗ, ಇಲ್ಲವೇ ತೀವ್ರ ಒತ್ತಡದಲ್ಲಿದ್ದಾಗ ಉಗುರು ಕಚ್ಚುವುದನ್ನು ರೂಢಿಸಿಕೊಳ್ತಾರೆ. ಇದು ಒತ್ತಡದಿಂದ ಹೊರಬರುವ ಒಂದು ಕ್ರಿಯೆ ಅಷ್ಟೇ. ಉಗುರು ಕಚ್ಚುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳು ಉಂಟಾಗುತ್ತವೆ.

ಉಗುರು ಕಚ್ಚುವುದರಿಂದಾಗುವ ಆರೋಗ್ಯ ಸಮಸ್ಯೆಗಳು: -ಉಗುರಿನಲ್ಲಿರುವ ಕಲ್ಮಶ ಹೊಟ್ಟೆ ಸೇರುವುದರಿಂದ ಜಂತು ಹುಳದ ತೊಂದರೆ ಅನುಭವಿಸಬೇಕಾಗುತ್ತೆ -ಹಲ್ಲು ಬಲಹೀನವಾಗಬಹುದು -ಕರುಳಿನ ಸಮಸ್ಯೆ ಕಾಡುತ್ತೆ -ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ -ಉಗುರು ತುಂಡಾದ್ರೆ ಚರ್ಮಕ್ಕೆ ನೋವಾಗುತ್ತೆ

ಮನಸ್ಸಿಗೆ ತುಂಬಾ ಬೇಜಾರಾದಾಗ ಕೆಲವರು ಉಗುರು ಕಚ್ಚುತ್ತಾರೆ. ಕಾರಣಗಳು ಏನೇ ಇದ್ದರೂ ಉಗುರು ಕಚ್ಚುವುದು ತುಂಬಾ ಅಪಾಯ. ಇದರಿಂದ ಆರೋಗ್ಯ ಕೆಡುತ್ತೆ. ಇದನ್ನು ಹೇಳಿದ್ರೆ ಯಾರೂ ಕೇಳೋದಿಲ್ಲ ಅಂತಾ ನಮ್ಮ ಹಿರಿಯರು ಉಗುರು ಕಚ್ಚಿದ್ರೆ ದಾರಿದ್ರ್ಯ ಕಾಡುತ್ತೆ ಎಂದು ಹೇಳಿದ್ದಾರೆ. ಹೀಗಾಗೇ ಇಂತಹ ಕೆಟ್ಟ ಅಭ್ಯಾಸಗಳಿಂದ ದೂರವಿರೋದು ಒಳ್ಳೆಯದು ಎನ್ನುತ್ತವೆ ನಮ್ಮ ಶಾಸ್ತ್ರಗಳು. ಈ ಕೆಟ್ಟ ಅಭ್ಯಾಸ ಇರುವವರನ್ನು ನೋಡಿದರೆ ಬೇರೆಯವರಿಗೆ ಕೀಳು ಭಾವನೆ ಉಂಟಾಗುತ್ತೆ. ಹೀಗಾಗಿ ಈ ಅಭ್ಯಾಸ ಇರುವವರು ಆದಷ್ಟು ಬೇಗ ಬಿಟ್ಟರೆ ಒಳ್ಳೆಯದು. ಇದ್ರಿಂದ ಸುಂದರ, ಸ್ವಾಸ್ಥ್ಯ ಜೀವನ ನಮ್ಮದಾಗುತ್ತೆ.

Published On - 11:21 am, Fri, 13 December 19