Women Health: ಗರ್ಭಿಣಿಯರಿಗೆ ಎದೆ ನೋವು ಏಕೆ ಕಾಣಿಸಿಕೊಳ್ಳುತ್ತದೆ? ಇದು ಹೆಚ್ಚು ಅಪಾಯವೇ?
ವಾಸ್ತವಾಗಿ ಬೆಳೆಯುತ್ತಿರುವ ಮಗುವಿನ ತೂಗದಿಂದಾಗಿ ಗರ್ಭಾಶಯದ ಗಾತ್ರವೂ ಹೆಚ್ಚಾಗುತ್ತದೆ. ಇದು ಹೊಟ್ಟೆ ಮತ್ತು ಶ್ವಾಸ ಕೋಶದ ಮೇಲೆ ಒತ್ತಡ ಉಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅನೇಕ ಬಾರಿ ಮಹಿಳೆಯರು ಉಸಿರಾಟದ ತೊಂದರೆ, ಹೆದರಿಕೆ, ಎದೆ ನೋವು, ಹೃದಯ ಬಡಿತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ.
ಗರ್ಭಿಣಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿರುವಾಗ ಆ ಸಮಯದಲ್ಲಿ ಮಹಿಳೆಯರು ಹೆಚ್ಚಾಗಿ ಎಲ್ಲಾ ಸಮಸ್ಯೆಯ ಕುರಿತಾಗಿ ಹೆಚ್ಚು ಗಮನ ಕೊಡುವುದಿಲ್ಲ. ಹೆಚ್ಚಿನ ಮಹಿಳೆಯರು (Women Health) ಕೆಲವು ಸಮಸ್ಯೆಗಳನ್ನು ನಿರ್ಲಕ್ಷಿಸುವುದೇ ಹೆಚ್ಚು. ಗರ್ಭಾವಸ್ಥೆಯಲ್ಲಿ (Pregnancy) ತಲೆ ತಿರುಗುವುದು, ವಾಂತಿ ಬರುವಿಕೆ ಇಂಥಹ ಲಕ್ಷಣಗಳು ಕಂಡು ಬರುವುದರ ಜತೆಗೆ ಎದೆ ನೋವು (Chest Pain) ಸಮಸ್ಯೆಯು ಕಾಡುತ್ತದೆ. ಇದು ಶ್ವಾಸಕೋಶದ ಒತ್ತಡದಿಂದ ಸಂಭವಿಸುವ ಸಮಸ್ಯೆಯಾಗಿದೆ.
ವಾಸ್ತವಾಗಿ ಬೆಳೆಯುತ್ತಿರುವ ಮಗುವಿನ ತೂಗದಿಂದಾಗಿ ಗರ್ಭಾಶಯದ ಗಾತ್ರವೂ ಹೆಚ್ಚಾಗುತ್ತದೆ. ಇದು ಹೊಟ್ಟೆ ಮತ್ತು ಶ್ವಾಸ ಕೋಶದ ಮೇಲೆ ಒತ್ತಡ ಉಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅನೇಕ ಬಾರಿ ಮಹಿಳೆಯರು ಉಸಿರಾಟದ ತೊಂದರೆ, ಹೆದರಿಕೆ, ಎದೆ ನೋವು, ಹೃದಯ ಬಡಿತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದೇ ಸಮಯದಲ್ಲಿ ಉಂಟಾಗುವ ಅನಿಲ ಸಮಸ್ಯೆ ಅಥವಾ ವಾಯು ಸಮಸ್ಯೆಯಿಂದಲೂ ಎದೆನೋವು ಕಾಣಿಸಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ಗರ್ಭಾವಸ್ಥೆಯಲ್ಲಿ ಉಂಟಾಗುವ ಸಮಸ್ಯೆ ಕುರಿತಾಗಿ ನಿರ್ಲಕ್ಷ್ಯ ಬೇಡ. ಕೆಲವು ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು ಮುಂದೊಂದು ದಿನ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು.
ಪಲ್ಮನರಿ ಎಂಬಾಲಿಸಮ್ ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿ ಶ್ವಾಸಕೋಶದ ಬಾಹ್ಯ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವುದರಿಂದ ಪಲ್ಮನರಿ ಎಂಬಾಲಿಸಮ್ ಸಮಸ್ಯೆ ಉಂಟಾಗುತ್ತದೆ. ಈ ಸಮಯದಲ್ಲಿ ಶ್ವಾಸಕೋಶದ ಅಪಧಮನಿಯಲ್ಲಿ ಅಡಚಣೆ ಉಂಟಾಗುತ್ತೆ. ಇದು ತುಂಬಾ ಅಪಾಯಕಾರಿ.
ಹೃದ್ರೋಗ ಎದೆ ನೋವು ಹೃದ್ರೋಗಕ್ಕೆ ಸಂಬಂಧಿಸಿದ ಲಕ್ಷಣಗಳಲ್ಲಿ ಒಂದಾಗಿದೆ. ಗರ್ಭಾವಸ್ಥೆಯಲ್ಲಿ ಬಿಪಿ ಮತ್ತು ಸಕ್ಕರೆ ಮಟ್ಟದಲ್ಲಿ ಏರಿಳಿತ ಕಂಡು ಬರುತ್ತದೆ. ಈ ಪರಿಸ್ಥಿತಿಯಲ್ಲಿ ಮಗು ಮತ್ತು ತಾಯಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ಆದ್ದರಿಂದ ಈ ಪರಿಸ್ಥಿತಿಯನ್ನು ಎಂದಿಗೂ ನಿರ್ಲಕ್ಷಿಸಬೇಡಿ.
ಎದೆನೋವು ಕಾಣಿಸಿಕೊಂಡಾಗ ಏನು ಮಾಡಬೇಕು? ಎದೆ ನೋವು ಸಮಸ್ಯೆ ಕಾಡುತ್ತಿದ್ದರೆ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಬಿಪಿಯಲ್ಲಿನ ಏರಿಳಿತ ಕೆಲವು ಬಾರಿ ಗಂಭೀರ ಸ್ಥಿತಿಯನ್ನು ತಂದೊಡ್ಡಬಹುದು.
ಎದೆನೋವಿನ ಸಮಸ್ಯೆ ವಾಯು ಸಮಸ್ಯೆಯಿಂದ ಕಂಡು ಬರುತ್ತಿದ್ದರೆ ಮನೆಮದ್ದುಗಳ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಲಿಂಬು ರಸ ಮತ್ತು ಕಪ್ಪು ಉಪ್ಪನ್ನು ನೀರಿನೊಂದಿಗೆ ಸೇವಿಸುವುದರ ಮೂಲಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ ಗರ್ಭಾವಸ್ಥೆಯು ಹೆಚ್ಚು ಸೂಕ್ಷ್ಮವಾದ ಸಮಯವಾದ್ದರಿಂದ ವೈದ್ಯರಲ್ಲಿ ಸಲಹೆ ಪಡೆಯುವುದು ಉತ್ತಮ.
ಸಮಸ್ಯೆ ಹೆಚ್ಚು ಕಾಡುತ್ತಿದ್ದರೆ ಬಲವಂತವಾಗಿ ಸಹಿಸಿಕೊಳ್ಳಬೇಡಿ. ಆದಷ್ಟು ಬೇಗ ತಜ್ಞರಲ್ಲಿ ಸಲಹೆ ಪಡೆದು ಸಮಸ್ಯೆಗಳಿಂದ ದೂರವಿರಿ.
ಅತಿ ಕಠಿಣವಾದ ಯೋಗ ಅಭ್ಯಾಸಗಳನ್ನು ಗರ್ಭಾವಸ್ಥೆಯ ಸಮಯದಲ್ಲಿ ಮಾಡಬೇಡಿ. ನಿಮ್ಮ ಆಹಾರವನ್ನು ಸಮತೋಲನದಲ್ಲಿಟ್ಟುಕೊಳ್ಳಿ ಮತ್ತು ನಿಯಮಿತವಾಗಿ ವಾಕಿಂಗ್ ಮಾಡುವ ಅಭ್ಯಾಸ ಒಳ್ಳೆಯದು.
ಇದನ್ನೂ ಓದಿ:
Women Health: ಗರ್ಭಿಣಿಯರು ಈ ಕೆಲಸಗಳನ್ನು ಮಾಡಲೇಬಾರದು; ಆರೋಗ್ಯ ಕಾಪಾಡಿಕೊಳ್ಳಿ
Women Health: ಪಿಸಿಓಎಸ್ ಎಂದರೇನು? ಇದು ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗೆ ಹೇಗೆ ಕಾರಣ ಎಂಬುದನ್ನು ತಿಳಿಯಿರಿ
Published On - 7:31 pm, Tue, 3 August 21