AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೇಬಿನಲ್ಲಿ ಕೈ ಇಟ್ಟುಕೊಂಡು ನಡೆಯುವ ಅಭ್ಯಾಸಕ್ಕೆ ಯಾವ ರೀತಿಯ ಅರ್ಥವಿದೆ ತಿಳಿದುಕೊಳ್ಳಿ

ವ್ಯಕ್ತಿ ನಡೆಯುವಾಗ ಕೈಗಳನ್ನು ಇಟ್ಟುಕೊಳ್ಳುವಂತಹ ವಿಧಾನವು ಆತನ ಆಂತರಿಕ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ, ಕೆಲವೊಮ್ಮೆ ಇದು ವ್ಯಕ್ತಿಯ ಗಮನಕ್ಕೆ ಬರಬಹುದು ಅಥವಾ ಬರದಿರಬಹುದು. ಈ ಸರಳ ಸನ್ನೆ ವ್ಯಕ್ತಿಯ ಆತ್ಮವಿಶ್ವಾಸದಿಂದ ಅಸ್ವಸ್ಥತೆಯ ವರೆಗೆ ವಿವಿಧ ಭಾವನೆಗಳು ಮತ್ತು ವರ್ತನೆಗಳನ್ನು ತಿಳಿಸುತ್ತದೆ. ಹಾಗಾದರೆ ಈ ರೀತಿ ಮಾಡುವುದರ ಹಿಂದಿರುವ ಅರ್ಥವೇನು? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ.

ಜೇಬಿನಲ್ಲಿ ಕೈ ಇಟ್ಟುಕೊಂಡು ನಡೆಯುವ ಅಭ್ಯಾಸಕ್ಕೆ ಯಾವ ರೀತಿಯ ಅರ್ಥವಿದೆ ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jan 17, 2025 | 11:25 AM

Share

ಸಾಮಾನ್ಯವಾಗಿ ನೀವು ಜೇಬಿನಲ್ಲಿ ಕೈಗಳನ್ನು ಇಟ್ಟುಕೊಂಡು ನಡೆಯುವವರನ್ನು ನೋಡಿರಬಹುದು. ಇದು ಕೇವಲ ಸಾಮಾನ್ಯ ವಿಷಯವಲ್ಲ. ಇದರ ಹಿಂದೆ ನಾನಾ ಅರ್ಥಗಳಿವೆ. ಈ ನಡವಳಿಕೆ ನಮಗೆ ದೊಡ್ಡ ವಿಷಯವಲ್ಲ ಎನಿಸಿದರೂ ಕೂಡ ಭಾಷಾ ತಜ್ಞರು ಇದನ್ನು ವ್ಯಕ್ತಿಯ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯ ಪರದೆಯಾಗಿ ನೋಡುತ್ತಾರೆ ಎಂದರೆ ನೀವು ನಂಬುತ್ತೀರಾ? ಹೌದು. ವ್ಯಕ್ತಿ ನಡೆಯುವಾಗ ಕೈಗಳನ್ನು ಇಟ್ಟುಕೊಳ್ಳುವಂತಹ ವಿಧಾನವು ಆತನ ಆಂತರಿಕ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ, ಕೆಲವೊಮ್ಮೆ ಇದು ವ್ಯಕ್ತಿಯ ಗಮನಕ್ಕೆ ಬರಬಹುದು ಅಥವಾ ಬರದಿರಬಹುದು. ಈ ಸರಳ ಸನ್ನೆ ವ್ಯಕ್ತಿಯ ಆತ್ಮವಿಶ್ವಾಸದಿಂದ ಅಸ್ವಸ್ಥತೆಯ ವರೆಗೆ ವಿವಿಧ ಭಾವನೆಗಳು ಮತ್ತು ವರ್ತನೆಗಳನ್ನು ತಿಳಿಸುತ್ತದೆ. ಹಾಗಾದರೆ ಈ ರೀತಿ ಮಾಡುವುದರ ಹಿಂದಿರುವ ಅರ್ಥವೇನು? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ.

ಕೈಗಳನ್ನು ಜೇಬಿನಲ್ಲಿ ಇಟ್ಟುಕೊಂಡು ನಡೆಯುವುದರ ಸಂಭಾವ್ಯ ಅರ್ಥಗಳು;

ವ್ಯಕ್ತಿ ತನ್ನ ಜೇಬಿನಲ್ಲಿ ಕೈಗಳನ್ನು ಇಟ್ಟುಕೊಂಡು ನಡೆಯಲು ಸಾಮಾನ್ಯ ಕಾರಣವೆಂದರೆ ಆರಾಮ ಅಥವಾ ಯಾವುದೇ ರೀತಿಯ ಕಿರಿಕಿರಿ ಇಲ್ಲದೆ ನಿರಾಳತೆಯನ್ನು ಹುಡುಕುವುದಾಗಿದೆ. ಈ ಸನ್ನೆಯು ಸ್ವಯಂ ಹಿತಕ್ಕಾಗಿ, ಅದರಲ್ಲಿಯೂ ವಿಶೇಷವಾಗಿ ಆ ವ್ಯಕ್ತಿ ಸಾಮಾಜಿಕವಾಗಿ ಆತಂಕ ಅಥವಾ ಅಸುರಕ್ಷಿತ ಭಾವನೆಯನ್ನು ಅನುಭವಿಸಿದಾಗ, ಕೈಗಳನ್ನು ಮರೆಮಾಡುತ್ತಾನೆ. ಈ ರೀತಿ ಮಾಡುವುದು ಒಂದು ರೀತಿಯ ಸುರಕ್ಷತೆಯ ಭಾವನೆಯನ್ನು ಮೂಡಿಸುತ್ತದೆ. ಅಂದರೆ ಮಾನಸಿಕವಾಗಿ, ಇದು ಉದ್ವೇಗವನ್ನು ಕಡಿಮೆ ಮಾಡಿ ತನ್ನನ್ನು ತಾನು ಶಾಂತಗೊಳಿಸಿಕೊಳ್ಳುವ ಒಂದು ಪ್ರಯತ್ನವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕೆಲವು ಸಂದರ್ಭಗಳಲ್ಲಿ, ಇದು ನಿರಾಸಕ್ತಿ ಅಥವಾ ನಿಷ್ಕ್ರಿಯತೆಯನ್ನು ಸಹ ಹೇಳುವುದಾಗಿರಬಹುದು. ಈ ಭಂಗಿ ಪರಸ್ಪರ ಅಂದರೆ ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿ ಮಧ್ಯದಲ್ಲಿ ನಡೆಯುವ ಕ್ರಿಯೆಯನ್ನು ತಪ್ಪಿಸುವ ಬಯಕೆಯೂ ಆಗಿರಬಹುದು. ಉದಾಹರಣೆಗೆ, ಜೇಬಿನಲ್ಲಿ ಕೈಗಳನ್ನು ಇಟ್ಟುಕೊಂಡು ಜನದಟ್ಟಣೆಯ ಪ್ರದೇಶದಲ್ಲಿ ನಡೆಯುವುದು. ಇದು ವ್ಯಕ್ತಿಯು, ಯಾವುದರಲ್ಲಿಯೂ ತೊಡಗಿಸಿಕೊಳ್ಳಲು ಬಯಸುತ್ತಿಲ್ಲ ಅಥವಾ ಅಂತಹ ವಿಷಯಗಳಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಕೆಲವೊಮ್ಮೆ ಈ ಭಂಗಿ ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಗಡಿಗಳನ್ನು ಕಾಪಾಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ಸೌಂದರ್ಯ ದುಪ್ಪಟ್ಟಾಗಬೇಕಾದರೆ ಗುಲಾಬಿ ದಳಗಳನ್ನು ಈ ರೀತಿ ಬಳಸಿರಿ

ಆದರೆ ಜೇಬಿನಲ್ಲಿ ಕೈ ಇಟ್ಟುಕೊಳ್ಳುವುದು ಯಾವಾಗಲೂ ಅಭದ್ರತೆಯನ್ನು ಸೂಚಿಸುವುದಿಲ್ಲ. ಕೆಲವರು ಇದನ್ನು ಆತ್ಮವಿಶ್ವಾಸ ಪ್ರದರ್ಶಿಸಲು ಕೂಡ ಬಳಸುತ್ತಾರೆ, ವಿಶೇಷವಾಗಿ ನೇರ ಭಂಗಿ ಮತ್ತು ಕಣ್ಣಿನ ಸಂಪರ್ಕದಲ್ಲಿ ಯಾವುದೇ ರೀತಿಯ ಭಯವಿಲ್ಲದೆ ನಡೆಯುವುದು ಒಂದು ರೀತಿಯ ನಿರಾಳ ನಡವಳಿಕೆಯನ್ನು ತೋರಿಸುತ್ತದೆ. ಕೆಲವೊಮ್ಮೆ ಇದೊಂದು ರೀತಿಯ ಗತ್ತಿನ ನಡಿಗೆಯೂ ಆಗಿರಬಹುದು. ಹೀಗೆ ಬೇರೆ ಬೇರೆ ರೀತಿಯ ನಡಿಗೆಗಳಿಗೆ ನಾನಾ ಅರ್ಥಗಳಿರುತ್ತವೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಸನ್ನೆಗಳು ಸರಿಯಾಗಿ ತಿಳಿಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:24 am, Fri, 17 January 25

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ