ನಿಮ್ಮ ಸೌಂದರ್ಯ ದುಪ್ಪಟ್ಟಾಗಬೇಕಾದರೆ ಗುಲಾಬಿ ದಳಗಳನ್ನು ಈ ರೀತಿ ಬಳಸಿರಿ

ಗುಲಾಬಿ ದಳಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ನಿಮ್ಮ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಕೂದಲು ದಪ್ಪವಾಗಿ ಬೆಳೆಯುತ್ತದೆ. ಈ ರೀತಿ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ಗುಲಾಬಿ ದಳಗಳು ಅದ್ಭುತ ಪ್ರಯೋಜನಗಳನ್ನು ಒಳಗೊಂಡಿದೆ. ವಿಶೇಷವಾಗಿ ದೇಸಿ ಗುಲಾಬಿಗಳನ್ನು ಹೆಚ್ಚಾಗಿ ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಹಾಗಾದರೆ ಇವುಗಳಿಂದ ಯಾವ ರೀತಿಯ ಉಪಯೋಗಗಳಿವೆ? ಬಳಕೆ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ನಿಮ್ಮ ಸೌಂದರ್ಯ ದುಪ್ಪಟ್ಟಾಗಬೇಕಾದರೆ ಗುಲಾಬಿ ದಳಗಳನ್ನು ಈ ರೀತಿ ಬಳಸಿರಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 17, 2025 | 10:16 AM

ಚರ್ಮದ ಕಾಂತಿ ಹೆಚ್ಚಿಸಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಏಕೆಂದರೆ ಸೌಂದರ್ಯ ಕಾಪಾಡಿಕೊಳ್ಳಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲೂ ಇದ್ದೆ ಇರುತ್ತದೆ. ಅದೇ ರೀತಿ ಸದಾ ಹೊಳೆಯುವ ಚರ್ಮಕ್ಕಾಗಿ ಹೆಚ್ಚಿನ ಜನರು ಗುಲಾಬಿ ದಳಗಳನ್ನು ಬಳಸುವುದನ್ನು ನೀವು ನೋಡಿರಬಹುದು. ಆದರೆ ಇದನ್ನು ಕೂದಲಿಗೂ ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಈ ಗುಲಾಬಿ ದಳಗಳನ್ನು ಆರೋಗ್ಯ ಮತ್ತು ಸುಂದರವಾಗಿರುವ ಬಲವಾದ ಕೂದಲಿಗಳಿಗಾಗಿಯೂ ಬಳಸಬಹುದು. ಅದಲ್ಲದೆ ಗುಲಾಬಿ ದಳಗಳು ಕೇವಲ ಸೌಂದರ್ಯ ಮತ್ತು ಅಲಂಕಾರಕ್ಕಾಗಿ ಮಾತ್ರ ಬಳಕೆಯಾಗುವುದಲ್ಲ ಬದಲಾಗಿ ಇವುಗಳಲ್ಲಿ ಹೇರಳವಾದ ಆರೋಗ್ಯ ಪ್ರಯೋಜನಗಳಿದ್ದು, ಆರೋಗ್ಯದ ನಿಧಿ ಎಂದೇ ಹೇಳಲಾಗುತ್ತದೆ. ಹಾಗಾದರೆ ಇವುಗಳಿಂದ ಯಾವ ರೀತಿಯ ಉಪಯೋಗಗಳಿವೆ? ಬಳಕೆ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

  • ಗುಲಾಬಿ ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಗುಲಾಬಿ ದಳಗಳಲ್ಲಿ ಫೈಬರ್ ಅಂಶವು ಹೆಚ್ಚಾಗಿರುತ್ತದೆ, ಇದು ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬಯಸುತ್ತಿರುವವರಿಗೂ ವರದಾನವಾಗಿದೆ.
  • ಹಗಲಿನಲ್ಲಿ ಕೆಲವು ತಾಜಾ ಗುಲಾಬಿ ದಳಗಳನ್ನು ತಿನ್ನುವುದು ಇಂದ್ರಿಯಗಳಿಗೆ ಒಳ್ಳೆಯದು. ಜೊತೆಗೆ ಇದು ನೈಸರ್ಗಿಕ ರೀತಿಯಲ್ಲಿ ಚರ್ಮದ ಅಂದವನ್ನು ಕೂಡ ಹೆಚ್ಚಿಸುತ್ತದೆ.
  • ಗುಲಾಬಿ ದಳಗಳು ಅನೇಕ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದ್ದು ಇವುಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ. ಇದರಲ್ಲಿ ಕಬ್ಬಿಣ, ವಿಟಮಿನ್ ಸಿ, ಎ, ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಫೈಬರ್ ನಂತಹ ಅಂಶಗಳಿವೆ. ಅವು ನೆತ್ತಿಯಲ್ಲಿ ಕಂಡು ಬರುವ ತುರಿಕೆ, ಉರಿಯೂತ ಮತ್ತು ದದ್ದುಗಳಿಂದ ರಕ್ಷಿಸುತ್ತವೆ.
  • ನಿಯಮಿತವಾಗಿ ಕೂದಲಿಗೆ ಗುಲಾಬಿ ದಳಗಳನ್ನು ಹಚ್ಚುವುದರಿಂದ ನೆತ್ತಿ ದೀರ್ಘಕಾಲದ ವರೆಗೆ ಹೈಡ್ರೇಟ್ ಆಗಿರುತ್ತದೆ. ಇದು ಉರಿಯೂತ ನಿವಾರಕ ಮತ್ತು ಆಂಟಿ- ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಜೊತೆಗೆ ಗುಲಾಬಿ ದಳಗಳನ್ನು ಕೂದಲಿನ ಬೆಳವಣಿಗೆಗೆ ಬಳಸಬಹುದು. ಇದಕ್ಕಾಗಿ, ಕೆಲವು ಗುಲಾಬಿ ದಳಗಳನ್ನು ಕಡಿಮೆ ಉರಿಯಲ್ಲಿ ಬೇಯಿಸಬೇಕು. ಇದು ತಣ್ಣಗಾದ ನಂತರ, ಅದರಿಂದ ತಲೆಯನ್ನು ಚೆನ್ನಾಗಿ ಮಸಾಜ್ ಮಾಡಿ.
  • ತೆಂಗಿನ ಎಣ್ಣೆಯನ್ನು ಗುಲಾಬಿ ದಳಗಳೊಂದಿಗೆ ಬಿಸಿ ಮಾಡಿ ತಣ್ಣಗಾದ ನಂತರ ತಲೆಗೆ ಹಚ್ಚಿದರೆ, ಒತ್ತಡ ಹೆಚ್ಚಾಗಿರುವ ಮೆದುಳು ತಣ್ಣಗಾಗುತ್ತದೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚುತ್ತದೆ. ಒತ್ತಡ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಕೂದಲು ದಪ್ಪವಾಗಿ ಬೆಳೆಯುತ್ತದೆ.

ಇದನ್ನೂ ಓದಿ: ಬಾಳೆಹಣ್ಣುಗಳು ರಕ್ತದ ಸಕ್ಕರೆಯನ್ನು ಹೆಚ್ಚಿಸುತ್ತವೆಯೇ? ತೂಕ ನಷ್ಟಕ್ಕೆ ಇದು ಒಳ್ಳೆಯದೇ?

ಗುಲಾಬಿ ದಳದಿಂದ ಹೇರ್ ಮಾಸ್ಕ್ ತಯಾರಿಸುವುದು ಹೇಗೆ?

ಈ ಹೂವಿನ ತಾಜಾ ದಳಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಈ ಪೇಸ್ಟ್ ಗೆ ಅಲೋವೆರಾ ಜೆಲ್ ಮತ್ತು ಮೊಸರು ಸೇರಿಸಿ. ಇದನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಕೂದಲಿಗೆ ಹಚ್ಚಿಕೊಳ್ಳಿ. ಅದಲ್ಲದಿದ್ದರೆ ರೋಸ್ ಮೇರಿ ಹೇರ್ ಆಯಿಲ್ ಗೆ ಗುಲಾಬಿ ದಳಗಳನ್ನು ಮೃದುವಾಗಿ ಪೇಸ್ಟ್ ಮಾಡಿಕೊಂಡು ಅದನ್ನು ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ. ಅಥವಾ ಗುಲಾಬಿ ದಳಗಳಿಂದ ಹೇರ್ ಸ್ಪ್ರೇ ತಯಾರಿಸಬಹುದು. ಈ ರೀತಿ ಮಾಡಲು, ಕೆಲವು ಗುಲಾಬಿ ದಳಗಳನ್ನು ಎರಡು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ, ತಣ್ಣಗಾಗಿಸಿ ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ ಬಳಸಬಹುದು. ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ಗುಲಾಬಿ ದಳಗಳು ಅದ್ಭುತ ಪ್ರಯೋಜನಗಳ ಆಗರವಾಗಿದೆ. ವಿಶೇಷವಾಗಿ ದೇಸಿ ಗುಲಾಬಿಗಳನ್ನು ಹೆಚ್ಚಾಗಿ ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ನೀವು ಕೂಡ ಇದನ್ನು ಪ್ರಯತ್ನಿಸಿ ನೋಡಿ.

(ಸೂಚನೆ: ಈ ಲೇಖನವು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಸಂದೇಹಗಳಿದ್ದರೂ ವೈದ್ಯರು ಅಥವಾ ತಜ್ಞರನ್ನು ಸಂಪರ್ಕಿಸಿ.)

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ