Women Health: ಗರ್ಭಾವಸ್ಥೆಯಲ್ಲಿ ಜ್ವರ ಕಾಣಿಸಿಕೊಳ್ಳುವುದು ಗರ್ಭಪಾತಕ್ಕೆ ಕಾರಣವಾಗಬಹುದು! ತಡೆಗಟ್ಟುವ ಕ್ರಮ ತಿಳಿಯಿರಿ

TV9 Digital Desk

| Edited By: preethi shettigar

Updated on: Jul 10, 2021 | 7:30 AM

ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್​ ಸಾಂಕ್ರಾಮಿಕದಿಂದಾಗಿ ಗರ್ಭಿಣಿಯರು ಆರೋಗ್ಯದ ಕುರಿತಾಗಿ ಹೆಚ್ಚು ಗಮನ ನೀಡಲೇ ಬೇಕಾಗಿದೆ. ಜತೆಗೆ ಸೋಂಕು ತಡೆಗಟ್ಟುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.

Women Health: ಗರ್ಭಾವಸ್ಥೆಯಲ್ಲಿ ಜ್ವರ ಕಾಣಿಸಿಕೊಳ್ಳುವುದು ಗರ್ಭಪಾತಕ್ಕೆ ಕಾರಣವಾಗಬಹುದು! ತಡೆಗಟ್ಟುವ ಕ್ರಮ ತಿಳಿಯಿರಿ
ಗರ್ಭಿಣಿ ಮಹಿಳೆ

ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರು ಎಷ್ಟು ಕಾಳಜಿಯಿಂದ ಇದ್ದರೂ ಸಾಲದು. ಪ್ರತಿ ಹೆಜ್ಜೆ ಇಡುವಾಗಲೂ ಸಹ ಇನ್ನೊಂದು ಜೀವದ ಬಗ್ಗೆ ಗಮನವಿರಬೇಕು. ಆಹಾರದ ಕೊರತೆ ಗರ್ಭಿಣಿಯರಿಗೆ ಹೆಚ್ಚು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಿರುವಾಗ ಒಳ್ಳೆಯ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸುವುದು ಉತ್ತಮ. ಗರ್ಭಾವಸ್ಥೆಯಲ್ಲಿರುವಾಗ ಶೀತ, ಜ್ವರದಂತಹ ಸಮಸ್ಯೆಗೆ ಒಳಗಾಗದಂತೆ ನೋಡಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಹೀಗಿರುವಾಗ ನೀವು ಆಹಾರದ ಕುರಿತಾಗಿ ಹೆಚ್ಚಿನ ಗಮನವಹಿಸಲೇಬೇಕು. ಆದರೆ ಗರ್ಭಿಣಿಯಲ್ಲಿ ಜ್ವರ ಕಾಣಿಸಿಕೊಂಡರೆ ಸಾಮಾನ್ಯವಾಗಿ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು ಗರ್ಭಪಾತಕ್ಕೆ ಕಾರಣವಾಗಬಹುದು ಅಥವಾ ಮಗುವಿನ ಬೆಳವಣಿಗೆಯನ್ನು ನಿಲ್ಲಿಸಬಹುದು. ಹಾಗಾಗಿ ಜ್ವರ ಬಾರದಂತೆ ಹೆಚ್ಚು ಲಕ್ಷ್ಯವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ.

ನೀವು ಗಮನಿಸಬೇಕಾದ ಕೆಲವು ವಿಷಯಗಳು *ನೀವು ಸೇವಿಸುವ ಆಹಾರದ ಕುರಿತಾಗಿ ವಿಶೇಷ ಗಮನವಹಿಸಿ. ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಸೇವಿಸಿ. ಇದರಿಂದ ನಿಮ್ಮ ಆರೋಗ್ಯ ಮತ್ತು ಮಗುವಿನ ಬೆಳವಣಿಗೆಯನ್ನು ಸುಧಾರಿಸಬಹುದು. ಜತೆಗೆ ದೇಹವು ರೋಗದ ವಿರುದ್ಧ ಹೋರಾಡುವ ಪೌಷ್ಠಿಕಾಂಶವನ್ನು ಪಡೆಯುತ್ತದೆ

*ಯಾವುದೇ ರೀತಿಯ ವೈರಸ್​ ನಿಮ್ಮನ್ನು ತಗುಲದಂತೆ ನೋಡಿಕೊಳ್ಳಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಹಾಗೂ ಆಹಾರ ಸೇವಿಸುವ ಕೈ ತೊಳೆಯಲು ಎಂದೂ ಮರೆಯದಿರಿ

*ಶೀತ ಅಥವಾ ಕೆಮ್ಮುಗಳಿದ್ದರೆ ತುಳಸಿ ಚಹಾ ಅಥವಾ ಶುಂಠಿ ಚಹವನ್ನು ಸೇವಿಸಿ. ಆದರೆ ಅತಿಯಾಗಿ ಯಾವುದೇ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಒಳಿತಲ್ಲ. ಹಾಗೆಯೇ ಆಹಾರ ಸೇವಿಸುವ ಮೊದಲು ನಿಮ್ಮ ವೈದ್ಯರಲ್ಲಿ ಒಮ್ಮೆ ಸಲಹೆ ಪಡೆಯಿರಿ

*ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಶೀತ, ಜ್ವರದಂತಹ ಸಮಸ್ಯೆಗಳು ಕಾಣಿಸಿಕೊಂಡರೆ ಅಥವಾ ಆರೋಗ್ಯದಲ್ಲಿ ಏನೇ ಏರು-ಪೇರು ಕಂಡು ಬಂದರೂ ಸಹ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ

*ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್​ ಸಾಂಕ್ರಾಮಿಕದಿಂದಾಗಿ ಆರೋಗ್ಯದ ಕುರಿತಾಗಿ ಹೆಚ್ಚು ಗಮನ ನೀಡಲೇ ಬೇಕಾಗಿದೆ. ಜತೆಗೆ ಸೋಂಕು ತಡೆಗಟ್ಟುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ

ಇದನ್ನೂ ಓದಿ:

Pregnancy Care: ಕೊವಿಡ್​ ಸಮಯದಲ್ಲಿ ಗರ್ಭಿಣಿಯರಿಗಾಗಿ ಆರೋಗ್ಯ ಸಲಹೆಗಳು; ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳಿ

ಮಹಿಳೆಯರು ಮುಟ್ಟಿನ ಅವಧಿಯಲ್ಲಿ ಕೊರೊನಾ ಲಸಿಕೆ ತೆಗೆದುಕೊಳ್ಳಬಾರದಾ?-ಇಲ್ಲಿದೆ ನೋಡಿ ಸತ್ಯಾಂಶ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada