Health Tips: ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಅಭ್ಯಾಸ ಇದ್ದರೆ, ಕಣ್ಣಿಗಾಗುವ ಅಪಾಯದ ಬಗ್ಗೆ ಗಮನಹರಿಸಿ
ಕಣ್ಣಿನ ತಜ್ಞರು ಲೆನ್ಸ್ ಬಳಸಿದ ವೇಳೆ ಧೂಳಿನಿಂದ ದೂರವಿರಲು ಸಲಹೆ ನೀಡುತ್ತಾರೆ. ಅಲ್ಲದೆ ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ಮಲಗುವುದು ಅಪಾಯ ಎಂದು ಸೂಚಿಸಿದ್ದಾರೆ. ಆದ್ದರಿಂದ, ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಹೆಚ್ಚುವರಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.
ನಿರಂತರವಾಗಿ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವುದು, ಹೆಚ್ಚಾಗಿ ಮೊಬೈಲ್ ಬಳಸುವುದು, ಈ ಎಲ್ಲಾ ಕಾರಣಗಳಿಂದಾಗಿ ಈಗ ಕಣ್ಣಿನ ದೃಷ್ಟಿ ಕುಂಠಿತವಾಗುತ್ತಿದೆ. ಹೀಗಾಗಿ ಈಗ ಚಿಕ್ಕವರಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಕನ್ನಡಕ ಧರಿಸುತ್ತಾರೆ. ಕನ್ನಡಕವನ್ನು ಧರಿಸುವುದು ಫ್ಯಾಶನ್ ಎಂದೂ ಕೂಡ ಕೆಲವರು ಭಾವಿಸಿದ್ದಾರೆ. ಅದಾಗ್ಯೂ ಕೆಲವರು ಕನ್ನಡಕವನ್ನು ಇಷ್ಟಪಡುವುದಿಲ್ಲ. ಹೀಗಾಗಿ ಲೆನ್ಸ್ ಬಳಸುತ್ತಾರೆ. ಕಣ್ಣುಗಳು ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಒಂದಾಗಿದೆ. ಲೆನ್ಸ್ ಅನ್ನು ಕಣ್ಣಿನ ಸೂಕ್ಷ್ಮ ಪದರದ ಮೇಲೆ ಇಡುವುದು ಕೆಲವೊಮ್ಮೆ ಅಪಾಯಕಾರಿ. ಕಾಂಟ್ಯಾಕ್ಟ್ ಲೆನ್ಸ್ನ ಯಾವುದೇ ವ್ಯತ್ಯಾಸವು ಕಣ್ಣಿನ ದೃಷ್ಟಿ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಕಣ್ಣುಗಳು ಸೋಂಕಿಗೆ ಒಳಗಾಗುವ ಸಾಧ್ಯತೆ ಕೂಡ ಇದೆ. ಕಣ್ಣಿನ ತಜ್ಞರು ಲೆನ್ಸ್ ಬಳಸಿದ ವೇಳೆ ಧೂಳಿನಿಂದ ದೂರವಿರಲು ಸಲಹೆ ನೀಡುತ್ತಾರೆ. ಅಲ್ಲದೆ ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ಮಲಗುವುದು ಅಪಾಯ ಎಂದು ಸೂಚಿಸಿದ್ದಾರೆ. ಆದ್ದರಿಂದ, ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಹೆಚ್ಚುವರಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.
ಯುಕೆ ಮೂಲದ 67 ವರ್ಷದ ಮಹಿಳೆಯೊಬ್ಬರು ಸುಮಾರು 35 ವರ್ಷಗಳಿಂದ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುತ್ತಿದ್ದರು. ಆದಾಗ್ಯೂ ಅವುಗಳನ್ನು ಬಳಸುವಾಗ ಸರಿಯಾದ ಕಾಳಜಿ ವಹಿಸಲಿಲ್ಲ. ಇದರಿಂದ ಆ ಮಹಿಳೆಯ ಕಣ್ಣಿನಲ್ಲಿ ತುರಿಕೆ ಕಾಣಿಸಿಕೊಂಡಿದೆ. ವೈದ್ಯರು ಅದನ್ನು ಪರೀಕ್ಷೆ ಮಾಡಿದಾಗ ಕಾಂಟ್ಯಾಕ್ಟ್ ಲೆನ್ಸ್ ಮಹಿಳೆಯ ಬಲಗಣ್ಣಿನಲ್ಲಿ ಸಂಗ್ರಹವಾಗಿದ್ದು, ತಿಳಿದಿದೆ. ವೈಜ್ಞಾನಿಕ ಚಿಕಿತ್ಸೆಯ ನಂತರ ಒಂದೊಂದಾಗಿ ಕಾಂಟ್ಯಾಕ್ಟ್ ಲೆನ್ಸ್ ಅನ್ನು ಹೊರ ತೆಗೆಯಲಾಯಿತು. ಇಲ್ಲಿ ಆಶ್ಚರ್ಯಕರವಾದ ಸಂಗತಿ ಎಂದರೆ ಆಕೆಯ ಕಣ್ಣಿನಲ್ಲಿ ಇದಿದ್ದು ಒಂದಲ್ಲ, ಎರಡಲ್ಲ, ಬರೋಬ್ಬರಿ 27 ಕಾಂಟ್ಯಾಕ್ಟ್ ಲೆನ್ಸ್‌ಗಳು. ಬ್ರಿಟಿಷ್ ಮೆಡಿಕಲ್ ಜನರಲ್ನಲ್ಲಿ ಈ ಅಪರೂಪದ ಮತ್ತು ಆಶ್ಚರ್ಯಕರ ಸಂಗತಿಯ ಬಗ್ಗೆ ಉಲ್ಲೇಖಿಸಿದೆ.
ಮಲಗುವ ಮುನ್ನ ಕಣ್ಣಿನಿಂದ ಲೆನ್ಸ್ ತೆಗೆಯಿರಿ ಯಾವುದೇ ಕಾರಣಕ್ಕೂ ಮಲಗುವಾಗ ಕಾಂಟ್ಯಾಕ್ಟ್ ಲೆನ್ಸ್ ಕಣ್ಣಿಗೆ ಹಾಕಿ ಮಲಗಬೇಡಿ. ಇದು ಕಣ್ಣಿನ ದೃಷ್ಟಿಯನ್ನು ಕಿತ್ತುಕೊಳ್ಳತ್ತದೆ. ಕಣ್ಣಿನಲ್ಲಿ ತುರಿಕೆ, ಸೋಂಕು ಮತ್ತು ಶಾಶ್ವತ ಅಂದತ್ವಕ್ಕೆ ಇದು ಕಾರಣವಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಡಿ.
ಲೆನ್ಸ್ ಹಾಕಿ ನೀರಿಗೆ ಇಳಿಯಬೇಡಿ ನೀರು ಲೆನ್ಸ್ಗೆ ತಾಗುವುದರಿಂದ ಕಣ್ಣಿಗೆ ಗಂಭೀರ ಅಪಾಯ ಉಂಟಾಗುತ್ತದೆ. ಕಣ್ಣಿನ ತಜ್ಞರು ಈ ಬಗ್ಗೆ ಹೆಚ್ಚು ಗಮನ ವಹಿಸುವಂತೆ ಸೂಚಿಸಿದ್ದಾರೆ. ಕಾರ್ನಿಯಾಗೆ ತೊಂದರೆಯಾಗಿ ದೃಷ್ಟಿ ದೋಷ ಉಂಟಾಗುವ ಸಾಧ್ಯತೆಗಳಿವೆ. ಹೀಗಾಗಿ ಲೆನ್ಸ್ ಹಾಕಿ ಹೊರ ಹೋಗುವಾಗ ಮುನ್ನೆಚ್ಚರಿಕೆ ವಹಿಸಿ.
ದೂಳಿನಿಂದ ಎಚ್ಚರ ವಹಿಸಿ ಲೆನ್ಸ್ ಹಾಕುವಾಗ ದೂಳಿಗೆ ಬಿದ್ದರೆ ಅದನ್ನು ಸ್ವಚ್ಛಗೊಳಿಸಿ ಪುನಃ ಬಳಸಿ. ಹೊರಗೆ ಹೋದಾಗ ದೂಳು ಕಣ್ಣಿಗೆ ಹೋಗದಂತೆ ನೋಡಿಕೊಳ್ಳಿ. ಇಲ್ಲವಾದರೆ ಕಣ್ಣು ಕೆಂಪಾಗುವುದು, ಕಣ್ಣು ನೋವು, ಕಣ್ಣಿನ ಸೋಂಕು ಉಂಟಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Dark Circle: ನಿಮ್ಮ ಕಣ್ಣಿನ ಸುತ್ತ ಕಪ್ಪಾಗಿದೆಯೇ? ಸೂಕ್ತ ಪರಿಹಾರ ಇಲ್ಲಿದೆ ನೋಡಿ
Health Tips: ದಿನಕ್ಕೆ ಎರಡು ಬಾರಿ ಬಾದಾಮಿ ಸೇವಿಸುವುದರಿಂದಾಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ