Dark Circle: ನಿಮ್ಮ ಕಣ್ಣಿನ ಸುತ್ತ ಕಪ್ಪಾಗಿದೆಯೇ? ಸೂಕ್ತ ಪರಿಹಾರ ಇಲ್ಲಿದೆ ನೋಡಿ
ಕೆಲವೊಮ್ಮೆ ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಯಿಂದ ಹಲವರು ಮುಜುಗರಕ್ಕೆ ಒಳಗಾಗುತ್ತಾರೆ. ಎಷ್ಟೇ ಮದ್ದು ಹಚ್ಚಿದ್ದರೂ ಡಾರ್ಕ್ ಸರ್ಕಲ್ ಮಾತ್ರ ಕಡಿಮೆಯಾಗುತ್ತಿಲ್ಲ ಅಂತ ಚಿಂತೆ ಮಾಡುತ್ತಾರೆ. ಆದರೆ ಇದೀಗ ಚಿಂತೆ ಬಿಟ್ಟು ನಾವು ನೀಡಿರುವ ಪರಿಹಾರವನ್ನು ಗಮನಿಸಿ.
ಕಣ್ಣಿನ ಕೆಳಗೆ ಇರುವ ಡಾರ್ಕ್ ಸರ್ಕಲ್ ಸೌಂದರ್ಯವನ್ನು ಕುಗ್ಗಿಸುವುದರಲ್ಲಿ ಅನುಮಾನವಿಲ್ಲ. ಡಾರ್ಕ್ ಸರ್ಕಲ್ನಿಂದ ಮುಖದ ಲಕ್ಷಣ ಕಡಿಮೆಯಾಗುತ್ತದೆ. ಎದ್ದು ಕಾಣುವ ಡಾರ್ಕ್ ಸರ್ಕಲ್ಗೆ ಕಾರಣ ಹಲವು ಇದೆ. ಕೆಲವೊಮ್ಮೆ ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಯಿಂದ ಹಲವರು ಮುಜುಗರಕ್ಕೆ ಒಳಗಾಗುತ್ತಾರೆ. ಎಷ್ಟೇ ಮದ್ದು ಹಚ್ಚಿದ್ದರೂ ಡಾರ್ಕ್ ಸರ್ಕಲ್ ಮಾತ್ರ ಕಡಿಮೆಯಾಗುತ್ತಿಲ್ಲ ಅಂತ ಚಿಂತೆ ಮಾಡುತ್ತಾರೆ. ಆದರೆ ಇದೀಗ ಚಿಂತೆ ಬಿಟ್ಟು ನಾವು ನೀಡಿರುವ ಪರಿಹಾರವನ್ನು ಗಮನಿಸಿ.
ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬರಲು ಪ್ರಮುಖ ಕಾರಣ * ಕೆಲಸದ ಒತ್ತಡದಿಂದ ನಿದ್ರೆ ಸರಿಯಾಗಲ್ಲ. ನಿದ್ರೆ ಸರಿಯಾಗದೆ ಇದ್ದಾಗ ಕಣ್ಣಿನ ಸುತ್ತ ಕಪ್ಪಾಗುತ್ತದೆ. ಮನುಷ್ಯ ಆರೋಗ್ಯದಿಂದ ಇರಬೇಕಾದರೆ ಎಂಟು ಗಂಟೆ ನಿದ್ರೆ ಅನಿವಾರ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವರು 5 ರಿಂದ 6 ಗಂಟೆ ಕಾಲ ನಿದ್ರೆ ಮಾಡುತ್ತಾರೆ. ಹೀಗಾಗಿ ಕಣ್ಣಿನ ಸುತ್ತ ಕಪ್ಪಾಗುತ್ತದೆ.
* ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಡಾರ್ಕ್ ಸರ್ಕಲ್ ಆಗುತ್ತದೆ. ಹೀಗಾಗಿ ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ನೀರು ಕುಡಿಯಬೇಕು. ನೀರು ಹೆಚ್ಚು ಕುಡಿದಾಗ ಇತರೆ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ.
* ಜೀವನ ಶೈಲಿ ಇದೀಗ ಮೊದಲಿನಂತಿಲ್ಲ. ಕೆಲಸದ ಒತ್ತಡದಿಂದ ಪದೇ ಪದೇ ಧೂಮಪಾನ ಮಾಡುತ್ತಾರೆ. ಒತ್ತಡವನ್ನು ಕಡಿಮೆಗೊಳಿಸಲು ಮದ್ಯಪಾನದ ಹಿಂದೆ ಹೋಗುತ್ತಾರೆ. ಹೀಗೆ ವಿಪರೀತವಾಗಿ ಧೂಮಪಾನ ಮತ್ತು ಮದ್ಯಪಾನ ಮಾಡಿದರೆ ಕಣ್ಣಿನ ಸುತ್ತ ಕಪ್ಪು ಕಲೆಯಾಗುತ್ತದೆ.
* ಕೆಲವರ ಮುಖ ತುಂಬಾ ಸೂಕ್ಷ್ಮವಾಗಿರುತ್ತದೆ. ಸೂಕ್ಷ್ಮ ಚರ್ಮಕ್ಕೆ ಮೇಕಪ್ ಹಾಕಿದಾಗ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಆಗುತ್ತದೆ. ಬಹು ಮುಖ್ಯವಾಗಿ ಕಣ್ಣಿಗೆ ಹಚ್ಚುವ ಐ ಶೇಡ್ಸ್ಗಳಿಂದ ಕಣ್ಣಿನ ಸುತ್ತ ಕಪ್ಪಾಗುತ್ತದೆ.
ಅಲೋವೆರಾ ಮತ್ತು ವಿಟಮಿನ್ ಇ ಅಲೋವೆರಾ ಜೆಲ್ ಮತ್ತು ವಿಟಮಿನ್ ಇ ಮಿಶ್ರಣ ಮಾಡಿ ಮಲಗುವ ಮುನ್ನ ಕಣ್ಣಿನ ಕೆಳಗೆ ಕಪ್ಪಾಗಿರುವ ಜಾಗಕ್ಕೆ ಹಚ್ಚಿ. ಪ್ರತಿದಿನ ಹಚ್ಚಿದಾಗ ಕೆಲವೇ ದಿನಗಳಲ್ಲಿ ಡಾರ್ಕ್ ಸರ್ಕಲ್ ಕಡಿಮೆಯಾಗುವುದು. ಇದು ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿದೆ. ಮುಖದಲ್ಲಿರುವ ಮೊಡವೆಗಳನ್ನು ಶಮನಗೊಳಿಸಲು ಇದನ್ನು ಬಳಸಬಹುದು.
ಬಾದಾಮಿ ಎಣ್ಣೆ ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆ ಮತ್ತು ಜೇನುತುಪ್ಪವನ್ನು ಬಳಸಬಹುದು. ಇದು ಡಾರ್ಕ್ ಸರ್ಕಲ್ನ ತೆಗೆದು ಹಾಕುವ ಜೊತೆಗೆ ಮುಖದ ಕಾಂತಿ ಹೆಚ್ಚಿಸುವುದು. ಜೇನುತುಪ್ಪ ಬ್ಯಾಕ್ಟೀರಿಯಾದ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಇವೆರಡನ್ನೂ ಮಿಶ್ರಣ ಮಾಡಿ ರಾತ್ರಿ ವೇಳೆ ಹಚ್ಚಿ.
ಕಾಫಿ ಪುಡಿ ಕಾಫಿ ಪುಡಿ ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿ ಗುಣವನ್ನು ಹೊಂದಿದೆ. ಕಣ್ಣಿನ ಸುತ್ತ ಇರುವ ಕಪ್ಪನ್ನು ಕಡಿಮೆ ಮಾಡಲು ಕಾಫಿ ಪುಡಿ ಸಹಾಯಕವಾಗುತ್ತದೆ. ಕಾಫಿ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ಚೆನ್ನಾಗಿ ಬೆರೆಸಿ ವಾರಕ್ಕೆ ಎರಡು ಬಾರಿ ಹಚ್ಚಿದರೆ ಕೆಲವೇ ವಾರದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ತೆಂಗಿನ ಎಣ್ಣೆ ಬದಲು ಜೇನುತುಪ್ಪವನ್ನೂ ಬಳಸಬಹುದು.
ರೋಸ್ ವಾಟರ್ ಮುಖದ ಕಾಂತಿಯನ್ನು ಹೆಚ್ಚಿಸುವ ಶಕ್ತಿ ರೋಸ್ ವಾಟರ್ಗೆ ಇದೆ. ಹತ್ತಿಯ ಸಹಾಯದಿಂದ ರೋಸ್ ವಾಟರ್ನ ಕಣ್ಣಿನ ಸುತ್ತ ಹಚ್ಚಿ. ಪ್ರತಿದಿನ ಹಚ್ಚಿದರೆ ಕೆಲವೇ ದಿನಗಳಲ್ಲಿ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಕಡಿಮೆಯಾಗುತ್ತದೆ.
ಇದನ್ನೂ ಓದಿ
Health Tips: ದಾಳಿಂಬೆ ಸಿಪ್ಪೆಯಲ್ಲಿದೆ ನಿಮಗೆ ಗೊತ್ತಿಲ್ಲದ ಪ್ರಯೋಜನಗಳು
ಆಲೂಗಡ್ಡೆ ಕಟ್ಲೇಟ್ ಹೇಗೆ ಮಾಡ್ತಾರೆ ಗೊತ್ತಾ? ತುಂಬಾ ಸುಲಭ
(Reason for Dark Circle and Best medicine for Eye Dark Circle in home)