ಕಾಳು ಮೆಣಸಿನ ಚಹಾ ಸವಿಯಲು ರುಚಿ ಜತೆಗೆ ಆರೋಗ್ಯಕ್ಕೂ ಉತ್ತಮ
Black Pepper Benefits: ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಾಳುಮೆಣಸಿನೊಂದಿಗೆ ಚಹಾ ತಯಾರಿಸಿ ಸೇವಿಸುತ್ತಾರೆ. ನೆಗಡಿ, ಜ್ವರದಂತಹ ಖಾಯಿಲೆಗೆ ಪರಿಹಾರವಾಗಿ ಇದು ಕೆಲಸ ಮಾಡುತ್ತದೆ.
ಅಡುಗೆಗೆ, ಕೆಲವರು ಮೆಣಸಿನಕಾಯಿ ಬದಲಾಗಿ ಕಾಳು ಮೆಣಸನ್ನು ಬಳಸುತ್ತಾರೆ. ಮಲೆನಾಡಿನಲ್ಲಿ ಕಾಳುಮೆಣಸಿನ ಬೆಳೆಗೆ ಅತಿಯಾದ ಬೇಡಿಕೆ ಇದೆ. ಅನೇಕ ಖಾಯಿಲೆಗಳಿಗೆ ಮದ್ದು ಜತೆಗೆ ಮಸಾಲೆ ಪದಾರ್ಥಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಅದೇ ರೀತಿ ಚಹಾದಲ್ಲಿ ಕಾಳು ಮೆಣಸು ಬೆರೆಸಿ ಸೇವಿಸುವುದರಿಂದ ಬಹಳ ರುಚಿ ಜತೆಗೆ ಆರೋಗ್ಯದ ಸಮಸ್ಯೆಗಳಿಂದ ದೂರವಿರಬಹುದು.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಾಳುಮೆಣಸಿನೊಂದಿಗೆ ಚಹಾ ತಯಾರಿಸಿ ಸೇವಿಸುತ್ತಾರೆ. ನೆಗಡಿ, ಜ್ವರದಂತಹ ಖಾಯಿಲೆಗೆ ಪರಿಹಾರವಾಗಿ ಇದು ಕೆಲಸ ಮಾಡುತ್ತದೆ. ಮಳೆಗಾಲದ ಸಮಯದಲ್ಲಿ ಈ ಚಹಾವನ್ನು ಸೇವಿಸುವುದು ಹೆಚ್ಚು. ಗಂಟು ನೋವು, ಕೆಮ್ಮಿಗೆ ಪರಿಹಾರವಾಗಿ ಕರಿಮೆಣಸಿನ ಕಪ್ಪು ಚಹಾವನ್ನು ಸೇವಿಸುತ್ತಾರೆ.
ಸೈನಸ್ ಸಮಸ್ಯೆಯಿಂದ ಬಳಲುತ್ತಿರುವವರು ಕಾಳು ಮೆಣಸಿನ ಚಹಾ ಸೇವನೆಯಿಂದ ಪರಿಹಾರ ಕಂಡುಕೊಳ್ಳಬಹುದು. ಜತೆಗೆ ಶೀತವಾಗಿ ಮೂಗು ಕಟ್ಟುವಿಕೆಯ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಕರಿಮೆಣಸಿನಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳಿರುತ್ತವೆ ಎಂಬುದು ಅಧ್ಯಯನದ ಮೂಲಕ ತಿಳಿದು ಬಂದಿದೆ. ಹಾಗಾಗಿ ಕರಿಮೆಣಸಿನೊಂದಿಗೆ ಚಹಾ ತಯಾರಿಸಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ.
ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿತರಬಹುದು. ಏಕೆಂದರೆ ಕರಿಮೆಣಸು ಹೆಚ್ಚು ಖಾರವಾಗಿರುತ್ತದೆ. ಅತಿಯಾಗಿ ಸೇವನೆ ಮಾಡುವುದರಿಂದ ಅಥವಾ ಚಹಾದಲ್ಲಿ ಕರಿಮೆಣಸಿನ ಪುಡಿಯನ್ನು ಹೆಚ್ಚು ಬಳಸುವುದರಿಂದ ಎದೆ ಉರಿ ಜತೆಗೆ ಹೊಟ್ಟೆ ಉರಿಯಂತಹ ಸಮಸ್ಯೆಗಳು ಕಂಡು ಬರುತ್ತವೆ. ಹಾಗಿದ್ದಾಗ ಯಾವುದೇ ಆಹಾರನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ರೂಢಿಯಲ್ಲಿರಲಿ. ಆ ಮೂಲಕ ನಿಮ್ಮ ಆರೋಗ್ಯದ ಆರೈಕೆ ಮಾಡಿಕೊಳ್ಳಿ.
ಇದನ್ನೂ ಓದಿ:
Health Tips: ಮಳೆಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಈ 6 ಕಷಾಯಗಳನ್ನು ಮಾಡಿ ಕುಡಿಯಿರಿ
Health Tips: ಕೊವಿಡ್ ಸಮಯದಲ್ಲಿ ನೀವು ಪಾಲಿಸಲೇಬೇಕಾದ ಐದು ಆಹಾರ ಪದ್ಧತಿಗಳು